ಹಿರಿಯ ಅಭಿಮಾನಿಯ ಪಾದಕ್ಕೆ ನಮಸ್ಕರಿಸಿದ ನೀರಜ್‌ ಚೋಪ್ರಾ : ವಿಡಿಯೋ ವೈರಲ್

By Anusha KbFirst Published Jul 2, 2022, 9:45 AM IST
Highlights

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಸ್ಟಾಕ್‌ಹೋಮ್‌ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿ ತಮ್ಮದೇ ದಾಖಲೆ ಮುರಿದಿರುವ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್, ಚಿನ್ನದ ಪದಕ ವಿಜೇತ ಅಥ್ಲೀಟ್‌ ನೀರಜ್‌ ಚೋಪ್ರಾ, ಅವರು  ಸ್ಟಾಕ್‌ಹೋಮ್‌ನಲ್ಲಿ ವಯಸ್ಸಾದ ಅಭಿಮಾನಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಸ್ಟಾಕ್‌ಹೋಮ್‌ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿ ತಮ್ಮದೇ ದಾಖಲೆ ಮುರಿದಿರುವ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್, ಚಿನ್ನದ ಪದಕ ವಿಜೇತ ಅಥ್ಲೀಟ್‌ ನೀರಜ್‌ ಚೋಪ್ರಾ, ಅವರು  ಸ್ಟಾಕ್‌ಹೋಮ್‌ನಲ್ಲಿ ವಯಸ್ಸಾದ ಅಭಿಮಾನಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ನೀರಜ್‌ ಛೋಪ್ರಾ (Neeraj Chopra) ಒಂದಾದ ಮೇಲೊಂದರಂತೆ ಸಾಧನೆ ಮಾಡುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ (Stockholm Diamond League) ಒಂದೇ ತಿಂಗಳಿನಲ್ಲಿ ಎರಡನೇ ಬಾರಿ ತಮ್ಮದೇ ಹಳೆಯ ದಾಖಲೆಯನ್ನು ನೀರಜ್ ಚೋಪ್ರಾ ಮುರಿದಿದ್ದಾರೆ. ಅಲ್ಲದೇ ಜೂನ್‌ನಲ್ಲಿ ಫಿನ್‌ಲ್ಯಾಂಡ್‌ನಲ್ಲಿ (Finland) ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಹಲವು ಪುರಸ್ಕಾರ ಸಾಧನೆಗಳ ಹೊರತಾಗಿಯೂ ನೀರಜ್ ಛೋಪ್ರಾ ತಮ್ಮ ವಿಧೇಯತೆ ವಿನಮ್ರತೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಸಾಧನೆ ಮಾಡಿದ್ದೇನೆ ಎಂಬ ದುರಂಕಾರ ಅವರಿಗಿಲ್ಲ. ಇದಕ್ಕೆ ಅವರ ಇತ್ತೀಚಿನ ಈ ನಡವಳಿಕೆಯೇ ಸಾಕ್ಷಿ. ಸ್ಟಾಕ್‌ಹೋಮ್‌ನಲ್ಲಿ ತಮ್ಮನ್ನು ಭೇಟಿ ಮಾಡಿದ ಹಿರಿಯ ಅಭಿಮಾನಿಯೊಬ್ಬರ ಪಾದ ಮುಟ್ಟಿ ಅವರು ನಮಸ್ಕರಿಸುತ್ತಾರೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

So down to earth this person ❣️Took blessing from an elderly fan. That speaks volumes. Love you ❤️ pic.twitter.com/jjo9OxHABt

— Your ❤️ (@ijnani)

ಈ ವಿಡಿಯೋದಲ್ಲಿ ಕಾಣಿಸುವಂತೆ 24 ವರ್ಷ ಹರೆಯದ ನೀರಜ್ ಛೋಪ್ರಾ, ಫೋಟೋ ಕೇಳಿದ ತನ್ನ ಅಭಿಮಾನಿಗಳೊಂದಿಗೆ ಫೋಟೋಗಳನ್ನು ತೆಗೆಸಿಕೊಂಡು ಅವರೊಂದಿಗೆ ಮಾತನಾಡುತ್ತಾರೆ. ಬಳಿಕ ಅಲ್ಲಿಂದ ತೆರಳುವ ವೇಳೆ ಹಿರಿಯರಾದ ಓರ್ವ ಅಭಿಮಾನಿಯ ಪಾದ ಮುಟ್ಟಿ ನಮಸ್ಕರಿಸುತ್ತಾರೆ. ಈ ವೇಳೆ ಒಬ್ಬರು ಎಷ್ಟು ವಿನಮ್ರತೆ ಎಂದು ಹೇಳುತ್ತಿರುವುದು ವಿಡಿಯೋ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನೀರಜ್ ಛೋಪ್ರಾ ನಡವಳಿಕೆಗೆ ಫಿದಾ ಆಗಿದ್ದು ಎಂಥಾ ವಿಧೇಯತೆ ಎಂದು ಕಾಮೆಂಟ್ ಮಾಡಿದ್ದಾರೆ. ನಾಲ್ಕು ವರ್ಷಗಳ ನಂತರ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಿದ ನೀರಜ್ ಛೋಪ್ರಾ 89.94m ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಎರಡನೇ ಸ್ಥಾನ ಗಳಿಸಿದ್ದಾರೆ.

ಸಾಮಾನ್ಯವಾಗಿ ಒಂದು ಸಣ್ಣ ಸಾಧನೆ ಮಾಡಿದ ಕೂಡಲೇ ಅದರ ಜೊತೆಗೆಯೇ ಅಹಂಕಾರವನ್ನು ತಲೆಗೇರಿಸಿಕೊಂಡು ನಡೆಯುವವರನ್ನು ನಾವು ನೋಡಿದ್ದೇವೆ. ಆದರೆ ಇಷ್ಟೊಂದು ಉನ್ನತ ಸಾಧನೆ ಮಾಡಿದ ನಂತರವೂ ನೀರಜ್ ಛೋಪ್ರಾ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅವರ ಆ ವಿನಮ್ರತೆ, ವಿಧೇಯತೆ ಅವರ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಈ ಮೂಲಕ ಅವರು ಅನೇಕರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. 

Diamond League; ಈಟಿ ಎಸೆತದಲ್ಲಿ ಬೆಳ್ಳಿ ಗೆದ್ದು, ತನ್ನದೇ ದಾಖಲೆ ಮುರಿದ ನೀರಜ್ ಚೋಪ್ರಾ

ನೀರಜ್ ಚೋಪ್ರಾ (Neeraj Chopra) ಅವರು  ಜೂನ್ 30 ರಂದು ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ (Diamond League) ನಲ್ಲಿ 89.94 ಮೀ. ಓಪನಿಂಗ್ ಥ್ರೋ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಮಾಡಿ ಬೆಳ್ಳಿ ಪದಕ ಗಳಿಸಿದರು. ಜೂನ್‌ ತಿಂಗಳ ಆರಂಭದಲ್ಲಿ ತುರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ 89.30 ಮೀ. ಜಾವೆಲಿನ್‌ ಎಸೆಸುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಒಂದು ತಿಂಗಳಲ್ಲಿ ಎರಡು ಬಾರಿ ತನ್ನದೇ ದಾಖಲೆಯನ್ನು ಮುರಿದಿದ್ದರು.

2 ಪದಕ ಮತ್ತು ರಾಷ್ಟ್ರೀಯ ದಾಖಲೆ ಬಳಿಕ ನೀರಜ್ ಚೋಪ್ರಾ ನಿಜವಾದ ಪರೀಕ್ಷೆ ಇನ್ನು ಮುಂದೆ ಆರಂಭ..!
 

ಡೈಮಂಡ್ ಲೀಗ್‌ನಲ್ಲಿ ಗ್ರೆನಡಾದ ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ತಮ್ಮ ಮೂರನೇ ಪ್ರಯತ್ನದಲ್ಲಿ 90.31 ಮೀ ಜಾವೆಲಿನ್‌ ಎಸೆಯುವ ಮೂಲಕ  ಚಿನ್ನದ ಪದಕ ಗೆದ್ದುಕೊಂಡರು. ಜೊತೆಗೆ ಡೈಮಂಡ್ ಟ್ರೋಫಿ ಮತ್ತು 40,000 ಸಾವಿರ ಡಾಲರ್ ಪಡೆದರು. ನೀರಜ್ ಚೋಪ್ರಾ  ಈ ಲೀಗ್ ನಲ್ಲಿ 90 ಮೀಟರ್ ಎಸೆಯುವ ವಿಶ್ವಾಸ ವ್ಯಕ್ತಪಡಿಸಿದ್ದರು.  89.94 ಮೀ. ಎಸೆಯುವ ಮೂಲಕ ಅವರ ಗುರಿ ತಲುಪಲು 6 ಸೆಂ. ಮೀಟರ್ ಅಷ್ಟೇ ಕಡಿಮೆಯಾಗಿತ್ತು.

click me!