ಥಾಯ್ಲೆಂಡ್‌ ಓಪನ್‌ : ಸೈನಾ, ಶ್ರೀಕಾಂತ್‌ಗೆ ಆಘಾತ

By Web Desk  |  First Published Aug 2, 2019, 11:29 AM IST

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 


ಬ್ಯಾಂಕಾಕ್‌(ಆ.02): ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಹಾಗೂ ಪಿ.ಕಶ್ಯಪ್‌ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ 2ನೇ ಸುತ್ತಿನಲ್ಲಿ ಸೋಲುಂಡು ನಿರ್ಗಮಿಸಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿಜೋಡಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ.

ಇದನ್ನೂ ಓದಿ: ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌; ಸೆಮೀಸ್‌ನಲ್ಲಿ ಸೋತ ಪ್ರಣೀತ್‌

Tap to resize

Latest Videos

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸೈನಾ, ಶ್ರೇಯಾಂಕ ರಹಿತೆ ಜಪಾನ್‌ನ ಸಯಾಕ ತಕಹಾಶಿ ವಿರುದ್ಧ 21-16, 11-21, 14-21 ಗೇಮ್‌ಗಳಲ್ಲಿ ಪರಾಭವಗೊಂಡರು. ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌, ಸ್ಥಳೀಯ ಶಟ್ಲರ್‌ ಫೆಟ್‌ಪ್ರದಾಬ್‌ ವಿರುದ್ಧ 21-11, 16-21, 12-21 ಗೇಮ್‌ಗಳಲ್ಲಿ ಸೋಲು ಕಂಡರು. ಕಶ್ಯಪ್‌, ಚೈನೀಸ್‌ ತೈಪೆಯ ಚೊ ಟೀನ್‌ ಚೆನ್‌ ಎದುರು 9-21, 14-21 ಗೇಮ್‌ಗಳಲ್ಲಿ ಸೋತು ನಿರಾಸೆ ಅನುಭವಿಸಿದರು. ಎಚ್‌.ಎಸ್‌.ಪ್ರಣಯ್‌ ಸಹ ಸೋಲುಂಡು ಹೊರಬಿದ್ದರು. ಇದೇ ವೇಳೆ ಬಿ. ಸಾಯಿ ಪ್ರಣೀತ್‌, 2ನೇ ಸುತ್ತಿನ ಪಂದ್ಯದಲ್ಲಿ ಭಾರತದವರೇ ಆದ ಶುಭಾಂಕರ್‌ ಡೇ ವಿರುದ್ಧ 21-18, 21-19 ಗೇಮ್‌ಗಳಲ್ಲಿ ಗೆದ್ದು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ಕ್ವಾರ್ಟರ್‌ಗೆ ಸಾತ್ವಿಕ್‌-ಚಿರಾಗ್‌
ಪುರುಷರ ಡಬಲ್ಸ್‌ 2ನೇ ಸುತ್ತಿನಲ್ಲಿ ಭಾರತದ ಸಾತ್ವಿಕ್‌-ಚಿರಾಗ್‌ ಶೆಟ್ಟಿಜೋಡಿ, ಏಷ್ಯನ್‌ ಗೇಮ್ಸ್‌ ಬೆಳ್ಳಿ ವಿಜೇತ ಜೋಡಿಯಾದ ಇಂಡೋನೇಷ್ಯಾದ ಫಜರ್‌-ರಿಯಾನ್‌ ವಿರುದ್ಧ 21-17, 21-19 ಗೇಮ್‌ಗಳಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಅಂತಿಮ 8ರ ಸುತ್ತಿಗೆ ಪ್ರವೇಶ ಪಡೆಯಿತು.

click me!