ಕ್ರಿಕೆಟ್ ಮಾತ್ರವಲ್ಲ ಕರ್ನಾಟಕದಲ್ಲಿ ಇತರ ಕ್ರೀಡೆಗಳೂ ಅಷ್ಟೇ ಜನಪ್ರಿಯಾವಾಗಿದೆ. ಅದರಲ್ಲೂ ಕರ್ನಾಟಕದ ಈಜು ಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದೀಗ ರಾಜ್ಯದಲ್ಲಿನ ಈಜು ಚಾಂಪಿಯನ್‌ಶಿಪ್‍ನಲ್ಲಿ ಬಸವನಗುಡಿ ಕೇಂದ್ರ ದಾಖಲೆ ಬರೆದಿದೆ.
ಬೆಂಗಳೂರು(ಆ.02): ರಾಜ್ಯದ ತಾರಾ ಈಜುಪಟುಗಳಾದ ಶ್ರೀಹರಿ ನಟರಾಜ್ ಹಾಗೂ ಸುವನಾ ಸಿ. ಭಾಸ್ಕರ್, ಇಲ್ಲಿನ ಬಸವನಗುಡಿ ಈಜು ಕೇಂದ್ರದಲ್ಲಿ ಗುರುವಾರ ಮುಕ್ತಾಯವಾದ ರಾಜ್ಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದರು. 3 ದಿನಗಳ ಕೂಟದಲ್ಲಿ 14 ಈಜು ಕೇಂದ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಆತಿಥ್ಯ ವಹಿಸಿದ್ದ ಬಸವನಗುಡಿ ಈಜು ಕೇಂದ್ರ 374 ಅಂಕಗಳಿಸಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.
ಇದನ್ನೂ ಓದಿ: ರಾಜ್ಯ ಹಿರಿಯರ ಈಜು ಕೂಟ: ಮೊದಲ ದಿನ 6 ದಾಖಲೆ
ಗುರುವಾರ ಪುರುಷರ 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಶ್ರೀಹರಿ ನಟರಾಜ್ 25.63 ಸೆ.ಗಳಲ್ಲಿ ಗುರಿ ಮುಟ್ಟಿದರು. ಮಹಿಳೆಯರ 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಸುವನಾ ಸಿ. ಭಾಸ್ಕರ್ 30.89 ಸೆ.ಗಳಲ್ಲಿ ಗುರಿ ತಲುಪಿದರು. ಪುರುಷರ 4/100 ಮೀ. ಮೆಡ್ಲೆಯಲ್ಲಿ ರಕ್ಷಿತ್, ಮಾನವ್, ಶ್ರೀಹರಿ ಹಾಗೂ ತನೀಶ್ ಅವರಿದ್ದ ತಂಡ 4 ನಿಮಿಷ 00.50 ಸೆ.ಗಳಲ್ಲಿ ಗುರಿ ತಲುಪಿತು.
ಇದನ್ನೂ ಓದಿ: ಇಂಡೋ-ಪಾಕ್ ಅಬ್ಬರದಲ್ಲಿ ಮರೆಯಾಯ್ತು ಬೆಂಗಳೂರು ಪ್ಯಾರಾ ಈಜುಪಟು ಸಾಧನೆ !
ಮಹಿಳೆಯರ 4/100 ಮೀ. ಮೆಡ್ಲೆಯಲ್ಲಿ ರಿದಿಮಾ, ಸಲೋನಿ, ಮಾಳವಿಕ ಹಾಗೂ ಖುಷಿ ದಿನೇಶ್ ಅವರನ್ನೊಳಗೊಂಡ ತಂಡ 4 ನಿಮಿಷ 36.78 ಸೆ.ಗಳಲ್ಲಿ ಗುರಿ ಮುಟ್ಟಿದಾಖಲೆಯೊಂದಿಗೆ ಚಿನ್ನ ಗೆದ್ದಿತು. ವಾಟರ್‌ಪೋಲೋ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಬಸವನಸಗುಡಿ ಈಜು ಕೇಂದ್ರ ಮೊದಲ ಪ್ರಶಸ್ತಿ ಗೆದ್ದರೆ, ನೆಟ್ಟಕಲ್ಲಪ್ಪ ಈಜು ಕೇಂದ್ರ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.