55 ವರ್ಷಗಳ ಬಳಿಕ ಡೇವಿಸ್ ಕಪ್ ಟೆನಿಸ್ ಟೂರ್ನಿಗಾಗಿ ಭಾರತ ತಂಡ , ಪಾಕಿಸ್ತಾನಕ್ಕೆ ತೆರಳಲು ಸಜ್ಜಾಗಿದೆ. ಆದರೆ ಪಾಕಿಸ್ತಾನ ಪ್ರವಾಸಕ್ಕೆ ಭದ್ರತೆ ಪ್ರಶ್ನೆ ಎದ್ದಿದೆ. ಪಾಕಿಸ್ತಾನಕ್ಕೆ ತೆರಳು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಭಾರತ ಮುಂದಾಗಿದೆ. ಇತ್ತ ಪಾಕಿಸ್ತಾನ ಕೂಡ ಸೂಕ್ತ ಭದ್ರತೆ ಒದಗಿಸುವ ಭರವಸೆ ನೀಡಿದೆ.
ನವದೆಹಲಿ(ಆ.02): ಭಾರತ ಡೇವಿಸ್ ಕಪ್ ತಂಡಕ್ಕೆ ಭಾರೀ ಭದ್ರತೆ ಒದಗಿಸುವ ಭರವಸೆಯನ್ನು ಪಾಕಿಸ್ತಾನ ಟೆನಿಸ್ ಫೆಡರೇಷನ್ (ಪಿಟಿಎಫ್) ನೀಡಿದೆ. 1964ರ ಬಳಿಕ ಭಾರತ ಡೇವಿಸ್ ಕಪ್ ತಂಡ ಪಾಕಿಸ್ತಾನಕ್ಕೆ ತೆರಳಿಲ್ಲ. ಅಲ್ಲದೇ 2006ರ ನಂತರ ಬದ್ಧವೈರಿಗಳ ನಡುವೆ ಪಂದ್ಯ ನಡೆದಿಲ್ಲ.
ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ ಭಾರತ-ಪಾಕ್ ಡೇವಿಸ್ ಕಪ್
ಸೆ.14-15ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಏಷ್ಯಾ/ಓಷಿಯಾನಿಯಾ ಗುಂಪು 1 ಪಂದ್ಯ ನಡೆಯಲಿದ್ದು, ಭಾರತ ತಂಡ ಇಸ್ಲಾಮಾಬಾದ್‌ಗೆ ಪ್ರಯಾಣಿಸಲು ಆಸಕ್ತಿ ತೋರಿದೆ. ಇತ್ತೀಚೆಗಷ್ಟೇ ಭಾರತ ತಂಡದ ನಾಯಕ ಮಹೇಶ್ ಭೂಪತಿ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಪಿಟಿಎಫ್ ಕಾರ್ಯದರ್ಶಿ, ಗುಲ್ ರೆಹಮಾನ್ ‘ಸಂಪೂರ್ಣ ಭದ್ರತೆ ಒದಗಿಸಲಾಗುವುದು’ ಎಂದಿದ್ದಾರೆ.