ಬುಧವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಮಾಜಿ ವಿಶ್ವ ನಂ.1 ಶಟ್ಲರ್ ಕಿದಂಬಿ ಶ್ರೀಕಾಂತ್ ಚೈನೀಸ್ ತೈಪೆಯ ವಾಂಗ್ ತ್ಸು ವೆಯ್ ವಿರುದ್ದ 22-20, 21-19ರಿಂದ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಬ್ಯಾಂಕಾಕ್(ಫೆ.01): ಥಾಯ್ಲೆಂಡ್ ಮಾಸ್ಟರ್ಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್, ಮಿಥುನ್ ಮಂಜುನಾಥ್ ಶುಭಾರಂಭ ಮಾಡಿದ್ದಾರೆ. ಬುಧವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಮಾಜಿ ವಿಶ್ವ ನಂ.1 ಶಟ್ಲರ್ ಕಿದಂಬಿ ಶ್ರೀಕಾಂತ್ ಚೈನೀಸ್ ತೈಪೆಯ ವಾಂಗ್ ತ್ಸು ವೆಯ್ ವಿರುದ್ದ 22-20, 21-19ರಿಂದ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಇನ್ನು ಮಿಥುನ್ ಮಂಜುನಾಥ್ ಹಾಂಕಾಂಗ್‌ನ ಜೇಸನ್ ಗುಣವಾನ್ ಅವರನ್ನು 21-17, 21-8ರಿಂದ ಸೋಲಿಸಿದರು. ಎರಡನೇ ಸುತ್ತಿನಲ್ಲಿ ಮಿಥುನ್-ಶ್ರೀಕಾಂತ್ ಮುಖಾಮುಖಿಯಾಗಲಿದ್ದಾರೆ. ಇನ್ನು ಸಮೀರ್ ವರ್ಮಾ, ಕಿರಣ್ ಜಾರ್ಜ್ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ, ಆಶ್ಮಿತಾ ಛಲಿಹಾ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
Pro Kabaddi League: ಬೆಂಗಳೂರು ಬುಲ್ಸ್‌ನ ಸತತ 2ನೇ ಪಂದ್ಯವೂ ಟೈ
ಹಾಕಿ ಫೈವ್ಸ್ ವಿಶ್ವಕಪ್: ಭಾರತಕ್ಕೆ 5ನೇ ಸ್ಥಾನ
ಮಸ್ಕಟ್: ಚೊಚ್ಚಲ ಆವೃತ್ತಿ ಎಫ್‌ಎಚ್‌ಐ ಹಾಕಿ ಫೈವ್ಸ್ ವಿಶ್ವಕಪ್‌ನಲ್ಲಿ ಭಾರತ 5ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. ಬುಧವಾರ ಈಜಿಫ್ಟ್ ವಿರುದ್ಧ 5 ಮತ್ತು 6ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ 6-4 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಭಾರತರ ಪರ ಮಣೀಂದರ್ ಸಿಂಗ್ 2, ಮೊಹಮದ್ ರಾಹೀಲ್, ರಾಜ್‌ಭಾರ್ ಪವನ್, ಮಂದೀಪ್, ಉತ್ತಮ್ ಸಿಂಗ್ ತಲಾ 1 ಗೋಲು ಬಾರಿಸಿದರು. ಮಂಗಳವಾರ ಕ್ವಾರ್ಟರ್ ಫೈನಲ್‌ನಲ್ಲಿ ನೆದರ್‌ಲೆಂಡ್ಸ್ ವಿರುದ್ಧ 4-7ರಲ್ಲಿ ಸೋತಿದ್ದ ಭಾರತ ಬಳಿಕ ಕ್ರಾಸ್ ಓವರ್ ಪಂದ್ಯದಲ್ಲಿ ಕೀನ್ಯಾವನ್ನು ಸೋಲಿಸಿತ್ತು.
ಚೆಸ್ ಬೋರ್ಡ್ ನೋಡೋ ಬದಲು, ನಮ್ಮ ಬಟ್ಟೆ, ಬ್ಯೂಟಿ ನೋಡ್ತಾರೆ: ಉದಯೋನ್ಮುಖ ಚೆಸ್ ಆಟಗಾರ್ತಿ ಆರೋಪ
ಯೂತ್ ಗೇಮ್ಸ್: ಒಟ್ಟು 47 ಪದಕ ಬಾಚಿದ ರಾಜ್ಯ
ಚೆನ್ನೈ: 6ನೇ ಆವೃತ್ತಿ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಬುಧವಾರ ತೆರೆ ಬಿದ್ದಿದ್ದು, ಕರ್ನಾಟಕ 47 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಜ.19ಕ್ಕೆ ಆರಂಭಗೊಂಡಿದ್ದ ಕೂಟದಲ್ಲಿ ಕರ್ನಾಟಕದ ಅಥ್ಲೀಟ್‌ಗಳು 9 ಚಿನ್ನ, 19 ಬೆಳ್ಳಿ ಹಾಗೂ 19 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು. ಅಥ್ಲೆಟಿಕ್ಸ್‌ನಲ್ಲಿ ರಾಜ್ಯಕ್ಕೆ ಒಟ್ಟು 6 ಪದಕಗಳು ಒಲಿಯಿತು. 2021ರಲ್ಲಿ 3ನೇ ಸ್ಥಾನಿಯಾಗಿದ್ದ ಕರ್ನಾಟಕ ಈ ಬಾರಿ ಪದಕ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 57 ಚಿನ್ನ ಸೇರಿ 158 ಪದಕ ಬಾಚಿದ ಮಹಾರಾಷ್ಟ್ರ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದರೆ, 38 ಚಿನ್ನ ಸೇರಿ 98 ಪದಕ ಗೆದ್ದ ಆತಿಥೇಯ ತಮಿಳುನಾಡು 2ನೇ, 35 ಚಿನ್ನ ಸೇರಿ 103 ಪದಕ ಗೆದ್ದ ಹರ್ಯಾಣ 3ನೇ ಸ್ಥಾನಿಯಾಯಿತು.
ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡರು.