Pro Kabaddi League: ಬೆಂಗಳೂರು ಬುಲ್ಸ್‌ನ ಸತತ 2ನೇ ಪಂದ್ಯವೂ ಟೈ

By Kannadaprabha News  |  First Published Feb 1, 2024, 9:02 AM IST

ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಬುಲ್ಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಮೊದಲಾರ್ಧಕ್ಕೆ ಬುಲ್ಸ್‌ 16-13ರಲ್ಲಿ ಮುನ್ನಡೆ ಪಡೆದಿತ್ತು. ಕೊನೆವರೆಗೂ ಅಂಕಗಳಲ್ಲಿ ಅಂತರ ಕಾಯ್ದುಕೊಂಡು ಮೇಲುಗೈ ಸಾಧಿಸಿದ್ದ ಬುಲ್ಸ್‌ ಕೊನೆಯಲ್ಲಿ ತಪ್ಪುಗಳನ್ನೆಸಗಿತು.


ಪಾಟ್ನಾ(ಫೆ.01): 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಸತತ 2ನೇ ಪಂದ್ಯದಲ್ಲೂ ಟೈಗೆ ತೃಪ್ತಿಪಟ್ಟುಕೊಂಡಿದೆ. ಬುಧವಾರ 3 ಬಾರಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ವಿರುದ್ಧದ ಪಂದ್ಯ 29-29 ಅಂಕಗಳಿಂದ ಸಮಬಲಗೊಂಡಿತು. ಇದರೊಂದಿಗೆ ಬುಲ್ಸ್‌ 17 ಪಂದ್ಯಗಳಲ್ಲಿ 6 ಜಯ, 9 ಸೋಲು, 2 ಟೈನೊಂದಿಗೆ 43 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಅತ್ತ ಪಾಟ್ನಾ 18 ಪಂದ್ಯಗಳಲ್ಲಿ 53 ಅಂಕದೊಂದಿಗೆ 4ನೇ ಸ್ಥಾನಕ್ಕೇರಿದೆ.

ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಬುಲ್ಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಮೊದಲಾರ್ಧಕ್ಕೆ ಬುಲ್ಸ್‌ 16-13ರಲ್ಲಿ ಮುನ್ನಡೆ ಪಡೆದಿತ್ತು. ಕೊನೆವರೆಗೂ ಅಂಕಗಳಲ್ಲಿ ಅಂತರ ಕಾಯ್ದುಕೊಂಡು ಮೇಲುಗೈ ಸಾಧಿಸಿದ್ದ ಬುಲ್ಸ್‌ ಕೊನೆಯಲ್ಲಿ ತಪ್ಪುಗಳನ್ನೆಸಗಿತು. ಇದರಿಂದ ಕೊನೆ ಕ್ಷಣದಲ್ಲಿ ಪಾಟ್ನಾ ಮುನ್ನಡೆ ಪಡೆದರೂ, ಪಂದ್ಯ ಕೈ ಜಾರದಂತೆ ನೋಡಿಕೊಂಡ ಬುಲ್ಸ್‌ ಸೇನೆ, ಟೈ ಮಾಡಿಕೊಂಡಿತು. ಬುಲ್ಸ್‌ನ ಸುಶೀಲ್‌ 8, ಅಕ್ಷಿತ್‌ 6 ಅಂಕ ಸಂಪಾದಿಸಿದರೆ, 39ನೇ ನಿಮಿಷದಲ್ಲಿ ಅಂಕಣಕ್ಕೆ ಬಂದ ಭರತ್‌ 2 ರೈಡ್‌ ಮಾಡಿದರೂ ಯಾವುದೇ ಅಂಕ ಗಳಿಸಲಾಗಲಿಲ್ಲ. ಪಾಟ್ನಾ ಪರ ಸಂದೀಪ್‌ ಕುಮಾರ್‌ ಏಕಾಂಗಿ ಹೋರಾಟ ಪ್ರದರ್ಶಿಸಿ 14 ರೈಡ್‌ ಅಂಕ ತಮ್ಮದಾಗಿಸಿಕೊಂಡರು.

Latest Videos

undefined

ವಿರಾಟ್ ಕೊಹ್ಲಿ ಮೊದಲೆರಡು ಟೆಸ್ಟ್‌ನಿಂದ ಹೊರಗುಳಿದಿದ್ದೇಕೆ..? ಕೊನೆಗೂ ಬಯಲಾಯ್ತು ಸತ್ಯ..!

ಜೈಪುರಕ್ಕೆ ಸೋಲು

ಬುಧವಾರದ ಮತ್ತೊಂದು ಪಂದ್ಯದಲ್ಲಿ ತಮಿಳ್‌ ತಲೈವಾಸ್ ವಿರುದ್ಧ ಜೈಪುರ ಪಿಂಕ್‌ ಪ್ಯಾಂಥರ್ಸ್‌ 0000 ಅಂಕಗಳಿಂದ ಸೋಲನುಭವಿಸಿತು. ಇದರ ಹೊರತಾಗಿಯೂ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ.

ನಾಳಿನ ಪಂದ್ಯಗಳು

ಡೆಲ್ಲಿ-ಬೆಂಗಾಲ್‌, ರಾತ್ರಿ 8ಕ್ಕೆ

ಗುಜರಾತ್‌-ಹರ್ಯಾಣ, ರಾತ್ರಿ 9ಕ್ಕೆ

ರಾಷ್ಟ್ರೀಯ ನೆಟ್‌ಬಾಲ್‌: ರಾಜ್ಯ ತಂಡಗಳಿಗೆ ಕಂಚು

ಬೆಂಗಳೂರು: ಮಧ್ಯಪ್ರದೇಶದಲ್ಲಿ ನಡೆದ ಕಿರಿಯರ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಕಂಚಿನ ಪದಕ ಗೆದ್ದಿವೆ. 36ನೇ ರಾಷ್ಟ್ರೀಯ ಕೂಟದಲ್ಲಿ ರಾಜ್ಯದ ಬಾಲಕಿಯರ ತಂಡ ಕೇರಳ ಜೊತೆ ಕಂಚಿನ ಪದಕ ಪಡೆದರೆ, 2ನೇ ಆವೃತ್ತಿ ಫಾಸ್ಟ್‌ 5 ಕೂಟದಲ್ಲಿ ರಾಜ್ಯದ ಬಾಲಕರ ತಂಡ ಜಮ್ಮು ಮತ್ತು ಕಾಶ್ಮೀರದ ಜೊತೆಗೆ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಚೆಸ್ ಬೋರ್ಡ್ ನೋಡೋ ಬದಲು, ನಮ್ಮ ಬಟ್ಟೆ, ಬ್ಯೂಟಿ ನೋಡ್ತಾರೆ: ಉದಯೋನ್ಮುಖ ಚೆಸ್ ಆಟಗಾತಿ ಆರೋಪ

ಬೆಂಗ್ಳೂರು ಎಫ್‌ಸಿ ಸೇರಿದ ರಾಜ್ಯದ ನಿಖಿಲ್‌ ಪೂಜಾರಿ

ಬೆಂಗಳೂರು: ಭಾರತ ಫುಟ್ಬಾಲ್‌ ತಂಡದ ಡಿಫೆಂಡರ್‌ ನಿಖಿಲ್‌ ಪೂಜಾರಿ ಐಎಸ್‌ಎಲ್‌ನ ಬೆಂಗಳೂರು ಎಫ್‌ಸಿ ತಂಡ ಸೇರ್ಪಡೆಗೊಂಡಿದ್ದಾರೆ. ಅವರೊಂದಿಗೆ 2027-28ನೇ ಆವೃತ್ತಿ ವರೆಗೂ ಒಪ್ಪಂದ ಮಾಡಿಕೊಂಡಿದ್ದಾಗಿ ಬಿಎಫ್‌ಸಿ ಘೋಷಿಸಿದೆ. ನಿಖಿಲ್‌ ಕರ್ನಾಟಕದಲ್ಲೇ ಜನಿಸಿದ್ದರೂ ಮುಂಬೈನ ಕ್ಲಬ್‌ಗಳಲ್ಲಿ ಹೆಚ್ಚಾಗಿ ಆಡಿದ್ದಾರೆ. ಐಎಸ್‌ಎಲ್‌ನ ಪುಣೆ ಸಿಟಿ ಎಫ್‌ಸಿ, ಹೈದರಾಬಾದ್‌ ಎಫ್‌ಸಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.

click me!