ಇತ್ತೀಚೆಗಷ್ಟೇ ನೆದರ್‌ಲೆಂಡ್‌ನ ವಿಜಿಕ್ ಆನ್ ಝೀಯಲ್ಲಿ ನಡೆದ ಚೆಸ್ ಟೂರ್ನಮೆಂಟ್‌ನಲ್ಲಿ ದಿವ್ಯಾ ದೇಶ್‌ಮುಖ್ ಪಾಲ್ಗೊಂಡಿದ್ದರು. ಈ ಚೆಸ್ ಟೂರ್ನಮೆಂಟ್‌ನಲ್ಲಿ ತಾವು ಅನುಭವಿಸಿದ ತಾರತಮ್ಯ ಹಾಗೂ ಕಹಿ ಅನುಭವವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು: ಭಾರತದ ಪ್ರತಿಭಾನ್ವಿತ ಚೆಸ್ ಆಟಗಾರ್ತಿ ದಿವ್ಯಾ ದೇಶ್‌ಮುಖ್, ಚೆಸ್ ನೋಡಲು ಬರುವ ಪ್ರೇಕ್ಷಕರ ಕುರಿತಾಗಿ ಗಂಭೀರ ಆರೋಪ ಮಾಡಿದ್ದಾರೆ. 18 ವರ್ಷದ ದಿವ್ಯಾ ದೇಶ್‌ಮುಖ್ ಚೆಸ್ ಜಗತ್ತಿನಲ್ಲಿ ಮಹಿಳಾ ಚೆಸ್ ಪಟುಗಳು ಅನುಭವಿಸುವ ಲೈಂಗಿಕ ಕಿರುಕುಳದ ಅನುಭವವನ್ನು ಅನಾವರಣ ಮಾಡಿದ್ದಾರೆ.
ಇತ್ತೀಚೆಗಷ್ಟೇ ನೆದರ್‌ಲೆಂಡ್‌ನ ವಿಜಿಕ್ ಆನ್ ಝೀಯಲ್ಲಿ ನಡೆದ ಚೆಸ್ ಟೂರ್ನಮೆಂಟ್‌ನಲ್ಲಿ ದಿವ್ಯಾ ದೇಶ್‌ಮುಖ್ ಪಾಲ್ಗೊಂಡಿದ್ದರು. ಈ ಚೆಸ್ ಟೂರ್ನಮೆಂಟ್‌ನಲ್ಲಿ ತಾವು ಅನುಭವಿಸಿದ ತಾರತಮ್ಯ ಹಾಗೂ ಕಹಿ ಅನುಭವವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
"ನಾನು ಸಾಕಷ್ಟು ಸಮಯದಿಂದ ಈ ವಿಚಾರದ ಬಗ್ಗೆ ಮಾತನಾಡಬೇಕೆಂದಿದ್ದೆ. ಆದರೆ ನನ್ನ ಟೂರ್ನಮೆಂಟ್ ಮುಗಿಯಲಿ ಎಂದು ಸುಮ್ಮನಿದ್ದೆ. ಮಹಿಳಾ ಟೆಸ್ಟ್ ಪಟುಗಳನ್ನು ಪ್ರೇಕ್ಷಕರು ಎಷ್ಟು ಅಸಡ್ಡೆ ಮಾಡುತ್ತಾರೆ ಎನ್ನುವುದನ್ನು ನಾನು ಗಮನಿಸಿದ್ದೇನೆ ಎಂದು ನಾಗ್ಪುರ ಮೂಲದ ದಿವ್ಯಾ ದೇಶ್‌ಮುಖ್ ಹೇಳಿದ್ದಾರೆ.
Ind vs Eng ವೈಜಾಗ್ ಟೆಸ್ಟ್‌ನಲ್ಲಿ ರಾಹುಲ್, ಜಡೇಜಾ ಬದಲು ಆಡೋರ್ಯಾರು..?
ಕಳೆದ ವರ್ಷ ನಡೆದ ಏಷ್ಯನ್ ವುಮೆನ್ಸ್ ಚೆಸ್ ಚಾಂಪಿಯನ್‌ಶಿಪ್ ಜಯಿಸಿದ್ದ ದಿವ್ಯಾ ದೇಶ್‌ಮುಖ್ ಮುಂದುವರೆದು, "ಇನ್ನೂ ತೀರಾ ಇತ್ತೀಚಿಗೆ ನಡೆದ ಘಟನೆಯನ್ನು ಉದಾಹರಿಸುವುದಾದರೇ, ಕಳೆದ ಟೂರ್ನಿಯಲ್ಲಿ ನಾನು ಕೆಲವು ಪಂದ್ಯಗಳಲ್ಲಿ ತುಂಬಾ ಚೆನ್ನಾಗಿಯೇ ಆಡಿದೆ. ನನ್ನ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಹೇಳಿದ್ದಾರೆ.
"ಪ್ರೇಕ್ಷಕರು ಹೇಗೆಲ್ಲಾ ವರ್ತಿಸುತ್ತಾರೆ ಎಂದು ಕೆಲವರು ನನ್ನ ಬಳಿ ಹೇಳಿದ್ದಾರೆ. ಅವರು ಪಂದ್ಯ ಹೇಗೆ ಸಾಗುತ್ತಿದೆ ಎನ್ನುವುದನ್ನು ಗಮನಿಸುವುದೇ ಇಲ್ಲ. ಇದನ್ನು ಬಿಟ್ಟು ಉಳಿದೆಲ್ಲಾವನ್ನು ಗಮನಿಸುತ್ತಾರೆ. ನಾನೇನು ಬಟ್ಟೆ ತೊಟ್ಟಿದ್ದೇನೆ. ನನ್ನ ತಲೆಗೂದಲು, ನನ್ನ ಉಚ್ಛಾರ, ಏನೇನು ಅಗತ್ಯವಿಲ್ಲವೋ ಅದೆಲ್ಲವನ್ನು ಗಮನಿಸುತ್ತಾರೆ ಎಂದು ದಿವ್ಯಾ ದೇಶ್‌ಮುಖ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.