
ಚಿತ್ತಗಾಂಗ್[ಸೆ.09]: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಆಫ್ಘಾನಿಸ್ತಾನ ಗೆಲುವಿನತ್ತ ಹೆಜ್ಜೆ ಹಾಕಿದೆ. ಆಫ್ಘನ್ ಇನ್ನು ಕೇವಲ 4 ವಿಕೆಟ್ ಪಡೆದರೆ ಜಯದ ನಗೆ ಬೀರಲಿದೆ. ಆದರೆ ಆಫ್ಘನ್ ಗೆಲುವಿಗೆ ಶಕೀಬ್ ಅಡ್ಡಿಯಾಗಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಟೆಸ್ಟ್: ಬಾಂಗ್ಲಾ ವಿರುದ್ಧ ಜಯದ ನಿರೀಕ್ಷೆಯಲ್ಲಿ ಆಫ್ಘನ್
4ನೇ ದಿನವಾದ ಭಾನುವಾರ 8 ವಿಕೆಟ್‌ಗೆ 237 ರನ್‌ಗಳಿಂದ 2ನೇ ಇನ್ನಿಂಗ್ಸ್ ಮುಂದುವರೆಸಿದ ಆಫ್ಘನ್ 260 ರನ್‌ಗಳಿಗೆ ಆಲೌಟ್ ಆಯಿತು. 398 ರನ್‌ಗಳ ಬೃಹತ್ ಸವಾಲನ್ನು ಬೆನ್ನತ್ತಿದ ಬಾಂಗ್ಲಾ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದ್ದು, 5ನೇ ಹಾಗೂ ಕೊನೆಯ ದಿನದಾಟದಲ್ಲಿ ಉಳಿದ 4 ವಿಕೆಟ್‌ಗಳಿಂದ 262 ರನ್‌ಗಳಿಸಬೇಕಿದೆ. 4ನೇ ದಿನದಾಟದಲ್ಲಿ ಕೆಲ ಹೊತ್ತು ಮಳೆ ಅಡ್ಡಿಪಡಿಸಿತು.
ಮಹಿಳಾ ಟಿ20 ವಿಶ್ವಕಪ್‌ಗೆ ಥಾಯ್ಲೆಂಡ್, ಬಾಂಗ್ಲಾ
ನಾಯಕ ಶಕೀಬ್ (39), ಸೌಮ್ಯ ಸರ್ಕಾರ್ (೦) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ಇನಿಂಗ್ಸ್’ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದ ಆಫ್ಘನ್ ನಾಯಕ ರಶೀದ್ ಖಾನ್ ಎರಡನೇ ಇನಿಂಗ್ಸ್’ನಲ್ಲೂ 3 ವಿಕೆಟ್ ಪಡೆದು ಬಾಂಗ್ಲಾ ತಂಡಕ್ಕೆ ಆಘಾತ ನೀಡಿದ್ದಾರೆ. ಜಹೀರ್ ಖಾನ್ 2 ಹಾಗೂ ವೃತ್ತಿ ಜೀವನದ ಕಡೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮೊಹಮ್ಮದ್ ನಬೀ 1 ವಿಕೆಟ್ ಪಡೆದಿದ್ದಾರೆ.
ಸ್ಕೋರ್:
ಆಫ್ಘನ್ 342 ಹಾಗೂ 260/10,
ಬಾಂಗ್ಲಾ 205 ಹಾಗೂ 136/6 (4ನೇ ದಿನದಂತ್ಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.