ರಮೇಶ ಕಳೆದ 5 ವರ್ಷದಿಂದ ತುಂಬಾ ಕಷ್ಟಪಟ್ಟು ಈ ಆಟದಲ್ಲಿ ಪರಿಣಿತಿ ಪಡೆದಾತ. ಈಚೆಗೆ ಬೆಂಗಳೂರಲ್ಲಿ ನಡೆದ 2023ರ ಸಾಲಿನ 3ನೇಯ ಅಂತಾರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿಪದಕ ಬಾಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮುಂದಿನ ತಿಂಗಳು ಥಾಯ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆæನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಕೂಡಾ ಪಡೆದಿದ್ದಾರೆ.
ಶೇಷಮೂರ್ತಿ ಅವಧಾನಿ
ಕಲಬುರಗಿ(ಆ.11): ಕಲಬುರಗಿ ಹುಡುಗ್ರು ಯಾರಿಗೇನ್ ಕಮ್ಮಿ ಇಲ್ಲ ಅನ್ನೋ ರೀತಿ ಸ್ವಯಂ ಸಿದ್ಧತೆಯಿಂದಲೋ, ನೆರವಿನಿಂದಲೋ ದೂರದ ಊರುಗಳಿಗೆ ಹೋಗಿ ತರಬೇತಿ ಪಡೆದು ಪರಿಶ್ರಮಪಟ್ಟು ಆಟೋಟಗಳಲ್ಲಿ ಮಿಂಚುತ್ತ ಹೆಸರು ಮಾಡುತ್ತಿದ್ದಾರೆ. ಕಲಬುರಗಿ ಕೋರಂಟಿ ಹನುಮಾನ್ ಮಂದಿರದ ಹಿಂದಿರುವ ಹನುಮಾನ್ ನಗರ ತಾಂಡಾದ ರಮೇಶ ನಾರಾಯಣ ಜಾಧವ್ ಟೆನ್‌ಪಿನ್ ಬೌಲಿಂಗ್‌ನಲ್ಲಿ ಈಚೆಗೆ ಹೊರಹೊಮ್ಮಿರುವ ಅಪ್ಪಟ ಕ್ರೀಡಾ ಪ್ರತಿಭೆ.
undefined
ರಮೇಶ ಕಳೆದ 5 ವರ್ಷದಿಂದ ತುಂಬಾ ಕಷ್ಟಪಟ್ಟು ಈ ಆಟದಲ್ಲಿ ಪರಿಣಿತಿ ಪಡೆದಾತ. ಈಚೆಗೆ ಬೆಂಗಳೂರಲ್ಲಿ ನಡೆದ 2023ರ ಸಾಲಿನ 3ನೇಯ ಅಂತಾರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿಪದಕ ಬಾಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮುಂದಿನ ತಿಂಗಳು ಥಾಯ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆæನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಕೂಡಾ ಪಡೆದಿದ್ದಾರೆ.
ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಗೋವಾವರೆಗೆ ವಿಶೇಷ ರೈಲು ಆರಂಭಿಸಿದ ನೈಋುತ್ಯ ರೈಲ್ವೆ
ಅಪಘಾತದಲ್ಲಿ ಕೈ ತುಂಡಾಯ್ತು:
ರಮೇಶ ತಂದೆ ನಾರಾಯಣಸಿಂಗ್ ನಿಧನರಾಗಿದ್ದಾರೆ. ತಾಯಿ ಚಿಕ್ಕಲಿಂಗದಳ್ಳಿ ಊರಲ್ಲಿದ್ದಾರೆ. ತಾನೊಬ್ಬನೇ ಸಮಾಜ ಸೇವೆ ಎಂದೆಲ್ಲ ಜನಪರ ಕೆಲಸಗಳನ್ನು ಮಾಡಿಕೊಂಡಿರುವ ರಮೇಶ ಹನುಮಾನ್ ನಗರ ತಾಂಡಾದಲ್ಲಿ ವಾಸವಾಗಿದ್ದಾರೆ. ರಮೇಶಗೆ ಎಡಗೈ ಇಲ್ಲ, ಚಿಕ್ಕವನಿದ್ದಾಗ ಕುಟುಂಬದ ಜೊತೆಗೆ ವಲಸೆ ಹೋಗಿದ್ದಾಗ ಮುಂಬೈನಲ್ಲಿ ನಡೆದ ಅಪಘಾತದಲ್ಲಿ ಕೈ ತುಂಡಾಗಿ ಹೋಗಿದೆ. ಒಂದು ಕೈ ಇಲ್ಲದಿದ್ದರೂ ಟೆನ್‌ಪಿನ್ ಬೌಲಿಂಗ್‌ನಲ್ಲಿ ಸಾಧಿಸಿದ ಪರಿಣಿತಿ ಮಾತ್ರ ಅಚ್ಚರಿ ಮೂಡಿಸುತ್ತದೆ. ಟೆನ್‌ಪಿಎನ್ ಬೌಲಿಂಗ್‌ನಲ್ಲಿ ಏಕಾಗ್ರತೆ, ದೇಹದ ಸಮತೋಲನ ತುಂಬಾ ಮುಖ್ಯ. ಕೈ ಇಲ್ಲದಿದ್ದರೂ ತಾನೇನು ಕಮ್ಮಿ ಇಲ್ಲ ಎಂದು ರಮೇಶ ತನ್ನಿಷ್ಟದ ಟೆನ್‌ಪಿನ್ ಬೌಲಿಂಗ್‌ನಲ್ಲಿ ಪ್ರಾವೀಣ್ಯತೆ ಸಾಧಿಸುತ್ತಿದ್ದಾರೆ.
ಏನಿದು ಟೆನ್‌ಪಿಎನ್ ಬೌಲಿಂಗ್?:
ಗುಂಡು ಸೂಜಿ ಆಕಾರ ಹೋಲುವ ತುಸು ದೊಡ್ಡದಾದ 10 ಸ್ಕಿಟ್ಟಲ್‌ಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗಿರುವಂತಹ ಲೋಹದ ಫಲಕದ ಮೇಲೆ ಜೋಡಿಸಿರುತ್ತಾರೆ, ಇವೆಲ್ಲ ಸ್ಕಿಟ್ಟಲ್‌ಗಳನ್ನು ಬೌಲ್‌ನಿಂದ ಹೊಡೆದು ಏಕಕಾಲಕ್ಕೆ ಉರುಳಿಸುವುದೇ ಟೆನ್‌ಪಿಎನ್ ಬೌಲಿಂಗ್ ಆಟ.
ಕಲಬುರಗಿ: ಕೆರೆಯಲ್ಲಿ ಎಮ್ಮೆಗಳನ್ನು ಸ್ನಾನ ಮಾಡಿಸಿದವರ ವಿರುದ್ಧ ಎಫ್‌ಐಆರ್ ದಾಖಲು!
ನೆರವಿನ ಹಸ್ತ ಚಾಚಬಹುದು
ರಮೇಶ ಜಾಧವ್ ಥಾಯ್ಲ್ಯಾಂಡ್ಗೆ ಹೋಗಿ ಬರಲು 2-3 ಲಕ್ಷ ರು. ತಗಲುತ್ತದೆ. ಈ ಹಣ ಹೊಂದಿಸಲು ದಾನಿಗಳು, ಸಹೃದಯಿಗಳಲ್ಲಿ ಮೊರೆ ಇಟ್ಟಿದ್ದಾರೆ. ತನ್ನ ಹಿತೈಷಿಗಳಾದ ಸಾಗರ ರಾಠೋಡ, ಭಾಗ್ಯಮ್ಮ, ಅಶೋಕ ರಾಠೋಡ, ಸುಜಾತಾ ಅವರೊಂದಿಗೆ ಸೇರಿಕೊಂಡು ಸುದ್ದಿಗೋಷ್ಠಿ ನಡೆಸಿರುವ ರಮೇಶ ಜಾಧವ್ ಬ್ಯಾಂಕ್ ಆಫ್ ಬರೋಡಾದಲ್ಲಿರುವ ತನ್ನ 51160100014364 ನಂಬರ್ ಉಳಿತಾಯ ಖಾತೆ (ಐಎಫ್‌ಎಸ್‌ಸಿ ಕೋಡ್- ಬಿಎಆರ್‌ಬಿಓಜಿಯುಎಲ್‌ಕೆಎಆರ್)ಗೆ ಅಥವಾ ಫೋನ್ ಪೇ 98449 36664ಗೆ ಧನ ಸಹಾಯ ಮಾಡುವಂತೆ ಕೋರಿದ್ದಾನೆ.
ಟೆನ್‌ಪಿನ್ ಬೌಲಿಂಗ್ ನನಗೆ ತುಂಬಾ ಇಷ್ಟವಾದ ಆಟ. ಹೋಗೋ ಕಲಿತುಬಿಟ್ಟೆ, ಕಳೆದ 5 ವರ್ಷದಿಂದ ಈ ಆಟದಲ್ಲಿದ್ದೇನೆ. ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಆಶೆಯಾಗಿ ಹಲವರ ಸಹಾಯ, ಸಹಕಾರ, ಆರ್ಥಿಕ ನೆರವಿನಿಂದ ಬೆಂಗಳೂರಿಗೆ ಹೋಗಿ ತರಬೇತಿ ಪಡೆದೆ. ಅದು ನನ್ನಲ್ಲಿನ ಆಟಗಾರನನ್ನು ಇನ್ನೂ ಹೆಚ್ಚಿಗೆ ಜಾಗೃತಿ ಮಾಡಿತ್ತು. ಅದರಿಂದಲೇ ನಾನು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಗಿಟ್ಟಿಸಿರುವೆ. ಇದೀಗ ಮುಂದಿನ ತಿಂಗಳು ಥಾಯ್‌ಲ್ಯಾಂಡ್‌ನಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಟೆನ್‌ಪಿನ್ ಚಾಂಪಿಯನ್‌ಶಿಪ್ ಇದೆ. ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದೇನೆ. ಆದರೆ ನನ್ನ ಹತ್ತಿರ ಅಲ್ಲಿಗೆ ಹೋಗಿ ಬರಲು ಹಣವಿಲ್ಲ. ಸಹೃದಯಿಗಳು ಹಣ ಸಹಾಯ ನೀಡಿದರೆ ನಾನು ಅಲ್ಲಿಯೂ ಗೆದ್ದು ಬಂದು ಕಲಬುರಗಿ ಕೀರ್ತಿ ಜಗದಲ ಮೆರೆಸುವ ವಿಶ್ವಾಸವಿದೆ ಎಂದು ಹನುಮಾನ್ ನಗರ ತಾಂಡಾದ ರಮೇಶ ಜಾಧವ್ ತಿಳಿಸಿದ್ದಾರೆ.