ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ; ಸ್ಟಾರ್ ಕ್ರಿಕೆಟಿಗ ದಿಢೀರ್ ನಿವೃತ್ತಿ!

By Naveen Kodase  |  First Published Jan 11, 2025, 11:24 AM IST

ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ತಮೀಮ್ ಇಕ್ಬಾಲ್ ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಭಾವನಾತ್ಮಕವಾಗಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.


ಢಾಕಾ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಮುಂಬರುವ ಫೆಬ್ರವರಿ 19ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ನೆರೆಯ ಬಾಂಗ್ಲಾದೇಶ ತಂಡ ಕೂಡಾ ಪಾಲ್ಗೊಳ್ಳುತ್ತಿದೆ. ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಾಂಗ್ಲಾದೇಶ ತಂಡದ ಪಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು, ತಂಡದ ಸ್ಟಾರ್ ಕ್ರಿಕೆಟಿಗ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ತಮೀಮ್ ಇಕ್ಬಾಲ್ ಸದ್ಯ ಬಾಂಗ್ಲಾದೇಶ ಕ್ರಿಕೆಟ್ ಆಯ್ಕೆ ಸಮಿತಿಯ ಜತೆ ಮಾತುಕತೆ ನಡೆಸಿದ್ದಾರೆ. ಇದೀಗ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಬಾಂಗ್ಲಾದೇಶ ತಂಡ ಪ್ರಕಟವಾಗುವ ಮೊದಲೇ ತಮೀಮ್ ಇಕ್ಬಾಲ್ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

Tap to resize

Latest Videos

ನಿವೃತ್ತಿ ವದಂತಿ ಬೆನ್ನಲ್ಲೇ ಪ್ರೇಮಾನಂದ್ ಮಹಾರಾಜ್ ಭೇಟಿ ಮಾಡಿದ ಕೊಹ್ಲಿ! ಈ ಪ್ರಶ್ನೆ ಕೇಳಿದ ವಿರುಷ್ಕಾ ಜೋಡಿ

ಭಾವನಾತ್ಮಕ ಪತ್ರ ಬರೆದ ತಮೀಮ್:

35 ವರ್ಷದ ತಮೀಮ್ ಇಕ್ಬಾಲ್ ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಭಾವನಾತ್ಮಕವಾಗಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. 'ನಾನು ಸಾಕಷ್ಟು ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದೇನೆ. ಇಲ್ಲಿಗೆ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಕೊನೆಗೊಂಡಿದೆ. ನಾನು ನಿವೃತ್ತಿಯ ಕುರಿತಂತೆ ಸಾಕಷ್ಟು ಸಮಯದಿಂದ ಯೋಚಿಸುತ್ತಿದ್ದೆ. ಚಾಂಪಿಯನ್ಸ್ ಟ್ರೋಫಿಗೆ ಕೆಲವೇ ದಿನಗಳು ಬಾಕಿ ಇರುವಾಗ, ನನ್ನ ಕುರಿತಂತೆ ಚರ್ಚೆಗಳಾಗಿ ತಂಡದ ಗಮನ ಹಾಳಾಗಬಾರದು ಎನ್ನುವ ಉದ್ದೇಶದಿಂದ ಮೊದಲೇ ತೀರ್ಮಾನ ತೆಗೆದುಕೊಂಡಿದ್ದೇನೆ. ಇದೇ ಕಾರಣಕ್ಕಾಗಿಯೇ ನಾನು ಈ ಮೊದಲೇ ಕೇಂದ್ರಿಯ ಗುತ್ತಿಗೆಯಿಂದಲೂ ಹೊರಗುಳಿದಿದ್ದೇನೆ' ಎಂದು ತಮೀಮ್ ಇಕ್ಬಾಲ್ ತಮ್ಮ ವಿದಾಯ ಪತ್ರವನ್ನು ಬರೆದಿದ್ದಾರೆ.

🚨 TAMIM IQBAL ANNOUNCED HIS RETIREMENT FROM INTERNATIONAL CRICKET...!!! 🚨

- Thank you, Tamim! 🙇‍♂️ pic.twitter.com/5gJLJKKvzD

— Mufaddal Vohra (@mufaddal_vohra)

ಯುವಿ ಕ್ರಿಕೆಟ್ ಬದುಕು ಬೇಗ ಮುಗಿದಿದ್ದು ಧೋನಿಯಿಂದಲ್ಲ, ಈ ಕ್ಯಾಪ್ಟನಿಂದ: ಹೊಸ ಬಾಂಬ್ ಸಿಡಿಸಿದ ಉತ್ತಪ್ಪ

'ಕ್ಯಾಪ್ಟನ್ ನಜ್ಮುಲ್ ಹುಸೈನ್ ಅವರು ಪ್ರಾಮಾಣಿಕವಾಗಿ ನನ್ನನ್ನು ತಂಡಕ್ಕೆ ಕಮ್‌ಬ್ಯಾಕ್ ಮಾಡಿ ಎಂದು ಕೇಳಿಕೊಂಡಿದ್ದರು. ನಾನು ಆಯ್ಕೆ ಸಮಿತಿಯ ಜತೆಯೂ ಚರ್ಚೆ ನಡೆಸಿದ್ದೇನೆ. ನಾನು ಆಡಲು ಇನ್ನೂ ಸಮರ್ಥನಿದ್ದೇನೆ ಎಂದು ನನ್ನ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ನಾನು ಅವರೆಲ್ಲರಿಗೂ ಚಿರಋಣಿ. ಆದರೆ ನಾನು ನನ್ನ ಹೃದಯದ ಮಾತನ್ನು ಕೇಳಲು ತೀರ್ಮಾನಿಸಿದ್ದೇನೆ' ಎಂದು ತಮೀಮ್ ಇಕ್ಬಾಲ್ ಹೇಳಿದ್ದಾರೆ.

ತಮೀಮ್ ಇಕ್ಬಾಲ್ ಈ ಮೊದಲು ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆದರೆ ಇದಾದ ಕೆಲ ಸಮಯದ ಬಳಿಕ ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದರು. 
 

click me!