ATP ರ‍್ಯಾಂಕಿಂಗ್‌'ನಲ್ಲಿ 3ನೇ ಸ್ಥಾನಕ್ಕೇರಿದ ಫೆಡರರ್

By Web Desk  |  First Published May 7, 2019, 12:33 PM IST

ಸೋಮವಾರ ನೂತನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಮೊದಲ ಎರಡು ಸ್ಥಾನದಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್ ಮತ್ತು ಸ್ಪೇನ್‌ನ ರಾಫೆಲ್ ನಡಾಲ್ ಇದ್ದಾರೆ. ಮೂರನೇ ಸ್ಥಾನಕ್ಕೆ ಮಾಜಿ ನಂ.1 ಟೆನಿಸಿಗ ರೋಜರ್ ಫೆಡರರ್ ಕಮ್’ಬ್ಯಾಕ್ ಮಾಡಿದ್ದಾರೆ. 


ಪ್ಯಾರಿಸ್[ಮೇ.07]: ಮಾಜಿ ವಿಶ್ವ ನಂ.1 ಆಟಗಾರ ರೋಜರ್ ಫೆಡರರ್ ಬಹುದಿನಗಳ ಬಳಿಕ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮತ್ತೆ ಜಿಗಿತಕಂಡಿದ್ದು, ಮೂರನೇ ಸ್ಥಾನಕ್ಕೇರಿದ್ದಾರೆ. 

ಸೋಮವಾರ ನೂತನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಮೊದಲ ಎರಡು ಸ್ಥಾನದಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್ ಮತ್ತು ಸ್ಪೇನ್‌ನ ರಾಫೆಲ್ ನಡಾಲ್ ಇದ್ದಾರೆ. ಇಷ್ಟು ದಿನ ಮೂರನೇ ಸ್ಥಾನದಲ್ಲಿದ್ದ ಅಲೆಕ್ಸಾಂಡರ್ ಜ್ವೆರೇವ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. 

Tap to resize

Latest Videos

ಮಿಯಾಮಿ ಓಪನ್‌: ಫೆಡರರ್‌ ಮುಡಿಗೆ 101ನೇ ಪ್ರಶಸ್ತಿ

20 ಗ್ರ್ಯಾಂಡ್’ಸ್ಲಾಂ ಒಡೆಯ ಫೆಡರರ್ ಮ್ಯೂನಿಚ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಮತ್ತೆ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. 

click me!