
ಮುಂಬೈ(ಆ.21): ಭಾರತ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿ ನೇಮಕ ಪ್ರಕ್ರಿಯೆಯಲ್ಲಿ ತೊಡಗಿರುವ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ, ಮಂಗಳವಾರ 16 ಸದಸ್ಯರ ಸಂದರ್ಶನ ನಡೆಸಿತು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಹುದ್ದೆಗೆ ಸಂದರ್ಶನ ಕರೆಯಲಾಗಿತ್ತು.
ರಸೆಲ್ ಡೊಮಿಂಗೊ ಬಾಂಗ್ಲಾ ಕ್ರಿಕೆಟ್‌ನ ಹೊಸ ಕೋಚ್
ಹಾಲಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಆ್ಯಂಟಿಗಾದಿಂದ ಸ್ಕೈಪ್ ಮೂಲಕ ಸಂದರ್ಶನದಲ್ಲಿ ಪಾಲ್ಗೊಂಡರು.
ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಜಾಂಟಿ ರೋಡ್ಸ್ ಸಂದರ್ಶನಕ್ಕೆ ಹಾಜರಾದರು. ಬಾಂಗ್ಲಾದೇಶದ ಮಾಜಿ ಫೀಲ್ಡಿಂಗ್ ಕೋಚ್, ಬ್ರಿಟನ್‌ನ ಮಾಜಿ ಬೇಸ್‌ಬಾಲ್ ಆಟಗಾರ ಜ್ಯೂಲಿಯನ್ ಫೌಂಟೇನ್ ಸಹ ಪ್ರಸಾದ್ ನೇತೃತ್ವದ ಸಮಿತಿ ಮುಂದೆ ಹಾಜರಾಗಿದ್ದು ಅಚ್ಚರಿಗೆ ಕಾರಣವಾಯಿತು. ಫೀಲ್ಡಿಂಗ್ ತಜ್ಞ ಎನಿಸಿಕೊಂಡಿರುವ ಜ್ಯೂಲಿಯನ್ ಹಾಗೂ ರೋಡ್ಸ್ ನಡುವೆ ಫೀಲ್ಡಿಂಗ್ ಕೋಚ್ ಹುದ್ದೆಗೆ ಪೈಪೋಟಿ ಏರ್ಪಟ್ಟಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.