ಹಾಕಿ ಒಲಿಂಪಿಕ್‌ ಟೆಸ್ಟ್‌: ಫೈನಲ್‌ಗೆ ಭಾರತ ತಂಡ

By Web DeskFirst Published Aug 21, 2019, 10:25 AM IST
Highlights

ಒಲಿಂಪಿಕ್‌ ಪರೀಕ್ಷಾರ್ಥ ಹಾಕಿ ಟೂರ್ನಿಯಲ್ಲಿ ಭಾರತ ತಂಡಗಳು ಭರ್ಜರಿಯಾಗಿಯೇ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿವೆ. ಪುರುಷರ ತಂಡ ಆತಿಥೇಯ ಜಪಾನ್ ತಂಡಕ್ಕೆ ಆಘಾತ ನೀಡಿ ಫೈನಲ್ ಪ್ರವೇಶಿಸಿದರೆ, ಮಹಿಳಾ ತಂಡ ಚೀನಾ ವಿರುದ್ಧ ಡ್ರಾ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಟೋಕಿಯೋ(ಆ.21): ಒಲಿಂಪಿಕ್‌ ಪರೀಕ್ಷಾರ್ಥ ಹಾಕಿ ಟೂರ್ನಿಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಫೈನಲ್‌ ಪ್ರವೇಶಿಸಿವೆ. 

India is proud of you already, !

Our Indian Women's and Men's Hockey Teams have reached the Final of the Olympic Test Event and will play their final games on 21st August 2019, will the victory get any sweeter tomorrow? pic.twitter.com/y1PteFgyqM

— Hockey India (@TheHockeyIndia)

4ನೇ ದಿನವಾದ ಮಂಗಳವಾರ ಪುರುಷರ ಆತಿಥೇಯ ಜಪಾನ್‌ ಎದುರು 6-3 ಗೋಲುಗಳಲ್ಲಿ ಗೆಲುವು ಸಾಧಿಸಿತು. ಭಾರತದ ಪರ ಮನ್‌ದೀಪ್‌ ಸಿಂಗ್‌ (9, 29, 30ನೇ ನಿ.) ಹ್ಯಾಟ್ರಿಕ್‌ ಗೋಲು ಬಾರಿಸಿದರೆ, ನೀಲಕಂಠ (3ನೇ ನಿ.), ನೀಲಮ್‌ (7ನೇ ನಿ.), ಗುರುಸಾಹಿಬ್‌ಜಿತ್‌ (41ನೇ ನಿ.) ಇನ್ನುಳಿದ 3 ಗೋಲು ಗಳಿಸಿದರು. 

ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತ ಶುಭಾರಂಭ

ಬುಧವಾರ ಭಾರತ, ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಸೆಣಸಲಿದೆ. ಭಾರತ ಮಹಿಳಾ ತಂಡ ಚೀನಾ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿತು. ಭಾರತ ಮಹಿಳಾ ಫೈನಲ್‌ನಲ್ಲಿ ಜಪಾನ್‌ ವಿರುದ್ಧ ಆಡಲಿದೆ.

🔝 of the points table, through and through!

One last battle tomorrow ⚔ pic.twitter.com/x39pM3KsAD

— Hockey India (@TheHockeyIndia)

 

click me!