ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಕೆಲ ನಿಯಮಗಳ ಬಗ್ಗೆ ಉಂಟಾದ ಗೊಂದಲಗಳ ಬಗ್ಗೆ ಚರ್ಚಿಸಲು ಅನಿಲ್ ಕುಂಬ್ಳೆ ನೇತೃತ್ವದ ಕ್ರಿಕೆಟ್ ತಜ್ಞರ ಸಮಿತಿ ಸಭೆ ಸೇರಲಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..
ನವದೆಹಲಿ(ಜು.29): ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ, ವಿವಾದಾತ್ಮಕ ಬೌಂಡರಿ ಕೌಂಟ್ ಸೇರಿದಂತೆ ಇನ್ನೂ ಹತ್ತು ಹಲವು ನಿಯಮಗಳ ಬಗ್ಗೆ ಮುಂದಿನ ಮೀಟಿಂಗ್‌ನಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಐಸಿಸಿ ಮುಖ್ಯ ವ್ಯವಸ್ಥಾಪಕ ಜೆಫ್ ಅಲ್ಲಾರ್ಡೀಸ್ ಹೇಳಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲೇ ರೋಚಕ ಪಂದ್ಯ; ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್!
undefined
ಕುಂಬ್ಳೆ ನೇತೃತ್ವದ ತಜ್ಞರ ಸಮಿತಿಯು ಐಸಿಸಿ 2019ರ ವಿಶ್ವಕಪ್ ಫೈನಲ್‌ನಲ್ಲಿ ಉಂಟಾದ ಗೊಂದಲದ ತೀರ್ಮಾನಗಳು ಸೇರಿದಂತೆ ಕ್ರಿಕೆಟ್‌ನ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದವರು ಹೇಳಿದ್ದಾರೆ.
ಸೂಪರ್ ಓವರ್ ನಿಯಮಗಳೇನು..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಬಾಲ್ ಔಟ್ ಬದಲಾಗಿ 2009ರಿಂದ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಪಂದ್ಯ ಟೈ ಆದಾಗ ಸೂಪರ್ ಓವರ್‌ಗಳ ಮೂಲಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತಿದೆ. ಸೂಪರ್ ಓವರ್‌ನಲ್ಲೂ ಪಂದ್ಯ ಟೈ ಆದರೆ ಟೈ-ಬ್ರೇಕರ್ ರೂಪದಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿದ ಆಧಾರದಲ್ಲಿ ಫಲಿತಾಂಶ ಘೋಷಿಸಲಾಗುತ್ತಿದೆ ಎಂದು ಜೆಫ್ ಹೇಳಿದ್ದಾರೆ.
ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!
ಜುಲೈ 14ರಂದು ಲಾರ್ಡ್ಸ್ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಸೂಪರ್ ಓವರ್'ನಲ್ಲೂ ಪಂದ್ಯ ಟೈ ಆಗಿದ್ದರಿಂದ ಒಟ್ಟು 22 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದ ಇಂಗ್ಲೆಂಡ್ ತಂಡವನ್ನು ಜಯಶಾಲಿ ಎಂದು ನಿರ್ಣಯಿಸಲಾಯಿತು. ಇಂಗ್ಲೆಂಡ್ ತಂಡದಷ್ಟೇ ರನ್ ಮಾಡಿದ್ದ ನ್ಯೂಜಿಲೆಂಡ್ ಕೇವಲ 17 ಬೌಂಡರಿ ಬಾರಿಸಿದ್ದರಿಂದ ಐಸಿಸಿ ನಿಯಮದಂತೆ ಸೋಲೊಪ್ಪಿಕೊಳ್ಳಬೇಕಾಯಿತು. ಈ ನಿಯಮಕ್ಕೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.