ಗ್ಲೋಬಲ್ ಟಿ20 ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂಡವನ್ನು ಮತ್ತೋರ್ವ ಭಾರತ ತಂಡದ ಕ್ರಿಕೆಟಿಗ ರೋಚಕವಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಪಂದ್ಯದ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ..
ಟೊರೊಂಟೊ(ಜು.29): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಮನ್'ಪ್ರೀತ್ ಗೋನಿ ಆಕರ್ಷಕ ಪ್ರದರ್ಶನದ ನೆರವಿನಿಂದ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಟೊರೊಂಟೊ ನ್ಯಾಷನಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
What a finish!
Manpreet Gony takes them close before local boys Salman Nazar and Mark Montfort seal the two-wicket win for
They lost the opening game of the but they are on the points table now.
Good fight from pic.twitter.com/7zuCwC5UB1
GT20 ಲೀಗ್: ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ರೆಡಿ !
undefined
ಕೆನಡಾ ಗ್ಲೋಬಲ್ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ 14 ರನ್ ಬಾರಿಸಿ ನಿರಾಸೆ ಅನುಭವಿಸಿದ್ದ ಯುವಿ, ಎಡ್ಮನ್‌ಶನ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ ಸಹಿತ 35 ರನ್ ಗಳಿಸಿದರು.
ರಾಯುಡುಗೆ ಅನ್ಯಾಯ; ಬಿಸಿಸಿಐ ವಿರುದ್ಧ ಗುಡುಗಿದ ಯುವರಾಜ್!
ಫಾಫ್ ಡುಪ್ಲೆಸಿಸ್ ನೇತೃತ್ವದ ಎಡ್ಮನ್‌ಶನ್ ತಂಡ ಮೊದಲು ಬ್ಯಾಟ್ ಮಾಡಿ 191 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಟೊರೊಂಟೊ ನ್ಯಾಷನಲ್ಸ್ ತಂಡಕ್ಕೆ ಮೊದಲಿಗೆ ಯುವಿ ಆಸರೆಯಾದರು. ಇನ್ನು ಕೊನೆಯಲ್ಲಿ ವೇಗಿ ಮನ್'ಪ್ರೀತ್ ಗೋನಿ ಕೇವಲ 12 ಎಸೆತಗಳಲ್ಲಿ 33 ರನ್ ಸಿಡಿಸುವ ಮೂಲಕ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವಾದರು.