ಟೀಂ ಇಂಡಿಯಾ ಅಭ್ಯಾಸಕ್ಕೆ ಬ್ರೇಕ್- ವಿಶ್ರಾಂತಿಗೆ ಸೂಚಿಸಿದ ಬಿಸಿಸಿಐ !

By Web DeskFirst Published May 19, 2019, 9:51 AM IST
Highlights

ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಆದರೆ ಟೀಂ ಇಂಡಿಯಾ ಮಾತ್ರ ವಿಶ್ರಾಂತಿಯಲ್ಲಿದೆ. ಕ್ರಿಕೆಟಿಗರ ಅಭ್ಯಾಸಕ್ಕೆ ಇದೀಗ ಬಿಸಿಸಿಐ ಬ್ರೇಕ್ ಹಾಕಿದೆ.  

ನವದೆಹಲಿ(ಮೇ.19): ಒಂದೂವರೆ ತಿಂಗಳು ಐಪಿಎಲ್‌ನಲ್ಲಿ ಆಡಿ ದಣಿದಿರುವ ಭಾರತೀಯ ಕ್ರಿಕೆಟಿಗರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಬಿಸಿಸಿಐ ಸೂಚಿಸಿದೆ. ವಿಶ್ವಕಪ್‌ನಲ್ಲಿ ಆಡುವ ಬಹುತೇಕ ಎಲ್ಲಾ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಆದರೆ ಬಿಸಿಸಿಐ ಮಾತ್ರ ಭಾರತೀಯ ಆಟಗಾರರಿಗೆ ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯಲು ಅನುಮತಿ ನೀಡಿದೆ.

ಇದನ್ನೂ ಓದಿ:ಕೇದಾರ್ ಫಿಟ್ನೆಸ್ ರಿಪೋರ್ಟ್ ಬಹಿರಂಗ -ವಿಶ್ವಕಪ್ ಆಡ್ತಾರಾ ಆಲ್ರೌಂಡರ್?

ಅಲ್ಪ ಸಮಯದಲ್ಲಿ ಕಿರು ಪ್ರವಾಸಕ್ಕೆ ಬೇಕಿದ್ದರೂ ಹೋಗಿ ಬನ್ನಿ ಎಂದು ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸೂಚಿಸಿದೆ. ಹೀಗಾಗಿ ನಾಯಕ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ, ಯಜುವೇಂದ್ರ ಚಹಲ್‌ ಸೇರಿ ಹಲವು ಕ್ರಿಕೆಟಿಗರು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದು, ಮೇ 21ರಂದು ಮುಂಬೈನಲ್ಲಿ ತಂಡ ಕೂಡಿಕೊಳ್ಳಲಿದ್ದಾರೆ. 

ಇದನ್ನೂ ಓದಿ: 2019ರ ವಿಶ್ವಕಪ್ ಟೂರ್ನಿಗೆ ಸೌರವ್ ಗಂಗೂಲಿ ಆಯ್ಕೆ!

ಮೇ 22ರಂದು ಭಾರತ ತಂಡ ಇಂಗ್ಲೆಂಡ್‌ಗೆ ಹೊರಡಲಿದ್ದು, ಮೇ 25ರಂದು ನ್ಯೂಜಿಲೆಂಡ್‌, ಮೇ 28ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಜೂನ್ 5 ರಂದು ಭಾರತ ಹಾಗೂ ಸೌತ್ಆಫ್ರಿಕಾ ಮುಖಾಮುಖಿಯಾಗಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!
Last Updated May 19, 2019, 9:51 AM IST
click me!