
ತಿರುವನಂತಪುರಂ(ಸೆ.08): ಆತ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ಧೋನಿಯಂತೆ ಆಗರ್ಭ ಶ್ರೀಮಂತನಲ್ಲ, ಆದರೆ ಹೃದಯ ಶ್ರಿಮಂತಿಕೆಯಲ್ಲಿ ಇವರೆಲ್ಲರನ್ನು ಮೀರಿಸುವಂತ ಕೆಲಸ ಮಾಡಿದ್ದಾರೆ. ಕ್ರಿಕೆಟ್ ಅಷ್ಟೇನೂ ಕ್ರೇಜ್ ಇರದ ರಾಜ್ಯದಲ್ಲಿ ಬೆಳೆದ ಯುವ ಕ್ರಿಕೆಟಿಗ, ಇದೀಗ ಎಲ್ಲರ ಹೃದಯ ಗೆಲ್ಲುವಂತಹ ಕೆಲಸ ಮಾಡಿದ್ದಾರೆ.
ಬಹುಕಾಲದ ಗೆಳತಿಯನ್ನು ವರಿಸಿದ ಸಂಜು ಸ್ಯಾಮ್ಸನ್
ಹೌದು, ನಾವು ಹೇಳ್ತಾ ಇರೋದು ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ ಬಗ್ಗೆ. ಕಳೆದ ವರ್ಷ ಸಂಜು ಸ್ಯಾಮ್ಸನ್ ದಾಂಪತ್ಯ ಜೀವನಕ್ಕೆ ಕಾಲಿರಿಸುವಾಗಲು ಸರಳತೆ ಮೆರೆದಿದ್ದರು. ಅಲ್ಲದೇ ಅದ್ಧೂರಿ ವೆಚ್ಚಕ್ಕೆ ಕಡಿವಾಣ ಹಾಕಿಕೊಳ್ಳುವ ಮೂಲಕ ಕೇರಳ ನೆರೆ ಸಂತ್ರಸ್ಥರಿಗೆ ನೆರವಾಗುವ ಮೂಲಕ ಗಮನ ಸೆಳೆದಿದ್ದರು. ಇದೀಗ ಇಲ್ಲಿನ ಮೈದಾನ ಸಿಬ್ಬಂದಿಗೆ 2 ಪಂದ್ಯಗಳ ಸಂಭಾವನೆ 1.5 ಲಕ್ಷ ರು. ಅನುದಾನ ನೀಡಿ ಸ್ಥಳೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಹೃದಯ ಗೆದ್ದಿದ್ದಾರೆ.
ದ.ಆಫ್ರಿಕಾ ‘ಎ’ ವಿರುದ್ಧ ಭಾರತಕ್ಕೆ 4-1ರಲ್ಲಿ ಸರಣಿ ಜಯ
ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ ನಡುವಿನ ಅನಧಿಕೃತ ಏಕದಿನ ಸರಣಿ ನಡೆಸುವುದಕ್ಕೆ ಗ್ರೀನ್‌ಫೀಲ್ಡ್ ಮೈದಾನ ಸಿಬ್ಬಂದಿ ಭಾರೀ ಶ್ರಮ ವಹಿಸಿದ್ದರು. ಮಳೆಯಿಂದ ಪ್ರತಿ ಪಂದ್ಯಕ್ಕೂ ಔಟ್‌ಫೀಲ್ಡ್ ಒದ್ದೆ ಇರುತ್ತಿತ್ತು. ಪಂದ್ಯವೊಂದರ ಸಂಭಾವನೆ 75,000 ರುಪಾಯಿ ಆಗಿದ್ದು, ಸಂಜು ಸರಣಿಯ ಕೊನೆ 2 ಪಂದ್ಯಗಳಲ್ಲಿ ಆಡಿದ್ದರು. ‘ಮೈದಾನ ಸ್ವಲ್ಪ ಒದ್ದೆಯಾಗಿದ್ದರೂ ಅಂಪೈರ್‌ಗಳು ಪಂದ್ಯ ನಡೆಯಲು ಬಿಡುತ್ತಿರಲಿಲ್ಲ. ಮೈದಾನ ಸಿಬ್ಬಂದಿಯ ನಿರಂತರ ಶ್ರಮದಿಂದಾಗಿ ಪಂದ್ಯಗಳನ್ನು ನಡೆಸಲು ಸಾಧ್ಯವಾಯಿತು’ ಎಂದು ಸಂಜು ಹೇಳಿದ್ದಾರೆ. ಶುಕ್ರವಾರ ನಡೆದ ಕೊನೆ ಪಂದ್ಯದಲ್ಲಿ ಸಂಜು 48 ಎಸೆತಗಳಲ್ಲಿ 91 ರನ್ ಸಿಡಿಸಿದ್ದರು. ಇದರೊಂದಿಗೆ ಭಾರತ ಎ ತಂಡವು 4-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.