ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಜತೆಜತೆಗೆ ಒಳ್ಳೆಯ ಡ್ಯಾನ್ಸರ್ ಎನ್ನುವುದನ್ನು ಕೊಹ್ಲಿ ಸಮಯ ಸಿಕ್ಕಾಗಲೆಲ್ಲಾ ಪ್ರೂವ್ ಕೂಡಾ ಮಾಡಿದ್ದಾರೆ. ಭಾರತ-ವಿಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ ಗೇಲ್ ಜತೆ ಕೊಹ್ಲಿ ಸ್ಟೆಪ್ ಹಾಕುವ ಮೂಲಕ ರಂಜಿಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಗಯಾನ(ಆ.10): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಒಬ್ಬ ಒಳ್ಳೆಯ ಡ್ಯಾನ್ಸರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಭರ್ಜರಿ ಸ್ಟೆಪ್ ಹಾಕುವ ಕೊಹ್ಲಿ, ಕೆರಿಬಿಯನ್ ದಿಗ್ಗಜ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಜತೆ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಮಳೆಯಿಂದ ಇಂಡೋ-ವಿಂಡೀಸ್ ಪಂದ್ಯ ರದ್ದು: ದಾಖಲೆ ಬರೆದ ಗೇಲ್..!
When in the Caribbean, breaking into a jig be like 🥁🥁🕺 pic.twitter.com/teg6r2WilS
— BCCI (@BCCI)undefined
ಗುರುವಾರ ಇಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದ ಕಾರಣ, ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಲು ಕೆಲ ಹಾಡುಗಳನ್ನು ಹಾಕಲಾಗುತಿತ್ತು. ಕೊಹ್ಲಿ ಕೆಲ ಭಾರತೀಯ ಆಟಗಾರರ ಜತೆ ಡ್ಯಾನ್ಸ್ ಮಾಡುತ್ತಾ ಪ್ರೇಕ್ಷಕರನ್ನು ರಂಜಿಸಿದರು. ಪಿಚ್ ಸಿದ್ಧಪಡಿಸುತ್ತಿದ್ದ ಮೈದಾನ ಸಿಬ್ಬಂದಿ ಜತೆಗೂ ಕೊಹ್ಲಿ ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಡೇಲ್ ಸ್ಟೇನ್ ವಿದಾಯಕ್ಕೆ ಅತ್ಯದ್ಭುತವಾಗಿ ಶುಭಕೋರಿದ ABD&ಕೊಹ್ಲಿ
ವಿಡಿಯೋ ನೋಡಿ..
Teacher: No one will dance in the class.
Le Backbenchers: pic.twitter.com/9R1fulVBHT
ಇನ್ನು ಆಪ್ತ ಸ್ನೇಹಿತ ವಿಂಡೀಸ್‌ನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಜತೆಗೂ ವಿರಾಟ್ ಹೆಜ್ಜೆ ಹಾಕಿದರು. ಕೊಹ್ಲಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.