PKL7:ಯುಪಿ ಯೋಧ ವಿರುದ್ಧ ಪಾಟ್ನಾ ಜಯಭೇರಿ!

By Web Desk  |  First Published Aug 9, 2019, 10:43 PM IST

ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಗೆಲವಿನ ನಗೆ ಬೀರಿದರೆ, 2ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಮೇಲುಗೈ ಸಾಧಿಸಿತು. ಪ್ರೊ ಕಬಡ್ಡಿ ಲೀಗ್ ಟೂರ್ನಿ ಈ ಎರಡು ಪಂದ್ಯಗಳು ಸಖತ್ ಮರನಂಜೆ ನೀಡಿತು. ಮೊದಲ ಪಂದ್ಯ ರೋಚಕವಾಗಿದ್ದರೆ, 2ನೇ ಪಂದ್ಯ ಭರ್ಜರಿ ಗೆಲುವಿನ ದಾಖಲೆ ಬರೆಯಿತು. 
 


ಪಾಟಲೀಪುತ್ರ(ಆ.09): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 33ನೇ ಲೀಗ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಯುಪಿ ಯೋಧ ವಿರುದ್ಧ ಕಾದಾಡಿದ ಪಾಟ್ನಾ ಪೈರೇಟ್ಸ್ 41-20 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ 3 ಗೆಲುವಿನೊಂದಿಗೆ ಪಾಟ್ನಾ 7ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

Tap to resize

Latest Videos

ಪ್ರದೀಪ್ ನರ್ವಾಲ್ ಮಿಂಚಿನ ರೈಡ್ ಮೂಲಕ ಪಾಟ್ನಾ 1-0 ಅಂಕಗಳೊಂದಿಗೆ ಪಂದ್ಯ ಆರಂಭಿಸಿತು. ಫಸ್ಟ್ ಹಾಫ್‌ ಆರಂಭದಲ್ಲಿ ಪಾಟ್ನಾ ಹಾಗೂ ಯುಪಿ ಯೋಧಾ ಸಮಬಲದ ಹೋರಾಟ ನೀಡಿತು. ಪಂದ್ಯದ 8ನೇ ನಿಮಿಷಕ್ಕೆ ಪಾಟ್ನಾ 8-2 ಅಂಕಗಳ ಮುನ್ನಡೆ ಪಡೆದುಕೊಂಡಿತು. ಪಾಟ್ನಾ ಅಂಕಗಳ ಅಂತರ ಹೆಚ್ಚು ಮಾಡಿದರೆ, ಯೋಧ ಅಂಕಗಳಿಸಲು ಪರದಾಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ಮೊದಲಾರ್ಧದಲ್ಲಿ ಪಾಟ್ನಾ ಪೈರೇಟ್ಸ್ 24-9 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಸೆಕೆಂಡ್ ಹಾಫ್‌ನಲ್ಲಿ ಯುಪಿ ಯೋಧ ಚೇತರಿಸಿಕೊಳ್ಳಲಿಲ್ಲ. ಅತ್ಯುತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಪಾಟ್ನಾ ಮತ್ತಷ್ಟು ಆಕ್ರಮಣಕಾರಿ ಆಟವಾಡಿತು. ಈ ಮೂಲಕ 41-20 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಯು ಮುಂಬಾ ಮಣಿಸಿದ ಬೆಂಗಾಲ್:
ಪಾಟ್ನಾ ಹಾಗೂ ಯುಪಿ ಪಂದ್ಯಕ್ಕೂ ಮುನ್ನ ಯು ಮುಂಬಾ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಿತ್ತು. ರೋಚಕ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 32-30 ಅಂಕಗಳ ಮೂಲಕ ಯು ಮುಂಬಾ ತಂಡಕ್ಕೆ ಸೋಲುಣಿಸಿತು. ಅಂತಿಮ ಕ್ಷಣದವರೆಗೆ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಬೆಂಗಾಲ್ ಮೇಲುಗೈ ಸಾಧಿಸಿತು.

click me!