ನಾಯಕ ವಿರಾಟ್ ಕೊಹ್ಲಿ ತಮ್ಮ 16ನೇ ವಯಸ್ಸಿನ ಫೋಟೋ ಶೇರ್ ಮಾಡಿದ್ದಾರೆ. ಇದೀಗ ಟೀಂ ಇಂಡಿಯಾದಲ್ಲಿ ಹಳೇ ನೆನಪು ಶೇರ್ ಮಾಡಿಕೊಳ್ಳುವ ಟ್ರೆಂಡ್ ಶುರುವಾಗಿದೆ. ಕೊಹ್ಲಿಗೂ ಮೊದಲು ಹಾರ್ದಿಕ್ ಪಾಂಡ್ಯ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ.
ಬೆಂಗಳೂರು(ಸೆ.20): ಸೌತ್ ಆಫ್ರಿಕಾ ವಿರುದ್ದದ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಸೆ.22 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿರುವ ಕೊಹ್ಲಿ, ಬಿಡುವಿನ ವೇಳೆ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಯಶಸ್ಸಿಗೆ ಕಾರಣ ಬಿಟ್ಟಿಟ್ಟ ಗೌತಮ್ ಗಂಭೀರ್!
ವಿರಾಟ್ ಕೊಹ್ಲಿ ತಮ್ಮ 16ನೇ ವಯಸ್ಸಿನಲ್ಲಿ ತೆಗೆದ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋ ಜೊತೆಗೆ ಈಗಿನ ಫೋಟೋವನ್ನು ಎಡಿಟ್ ಮಾಡಿರುವ ಕೊಹ್ಲಿ, ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.
Me looking at my younger self going 🙅♂️🤦♂️. pic.twitter.com/EMFtD7TMnl
— Virat Kohli (@imVkohli)ಇದನ್ನೂ ಓದಿ: #INDvSA 2ನೇ ಟಿ20: ರೋಹಿತ್ ದಾಖಲೆ ಮುರಿದ ಕೊಹ್ಲಿ!
ವಿರಾಟ್ ಕೊಹ್ಲಿ ಹಳೇ ಫೋಟೋ ಶೇರ್ ಮಾಡೋ ಮೊದಲು ಟೀಂ ಇಂಡಿಯಾ ಹಾರ್ಧಿಕ್ ಪಾಂಡ್ಯ ಕೂಡ ಹಳೇ ಫೋಟೋ ಶೇರ್ ಮಾಡಿದ್ದರು. ಕ್ರಿಕೆಟ್ ಪಂದ್ಯ ಆಡಲು ಟ್ರಕ್‌ನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಹಾರ್ದಿಕ್ ಶೇರ್ ಮಾಡಿದ್ದರು.