ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ!

By Web Desk  |  First Published Aug 7, 2019, 12:30 AM IST

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದೆ. 3 ಪಂದ್ಯದಲ್ಲೂ ವಿಂಡೀಸ್ ತಂಡವನ್ನು ಮಣಿಸಿದ ಕೊಹ್ಲಿ ಬಾಯ್ಸ್, ವಿಶ್ವಕಪ್ ಸೋಲಿನ ಬಳಿಕ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. 


ಗಯಾನ(ಆ.07): ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ  ಸವಾರಿ ಮಾಡಿದೆ. 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಗೆಲುವು ಸಾಧಿಸೋ ಮೂಲಕ  ಟೀಂ ಇಂಡಿಯಾ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಆದರೆ ಕೊನೆಯ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದ ವಿಂಡೀಸ್‌ಗೆ ನಿರಾಸೆಯಾಗಿದೆ. 

ಅಂತಿಮ ಚುಟುಕು ಸಮರದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 146 ರನ್‌ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ, ಬ್ಯಾಟಿಂಗ್‌ನಲ್ಲಿ ದಿಟ್ಟ ಹೋರಾಟ ನೀಡಿತು. ಶಿಖರ್ ಧವನ್ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಧವನ್ ಕೇವಲ 1 ರನ್ ಸಿಡಿಸಿ ಔಟಾದರು. ಅಂತಿಮ ಪಂದ್ಯದಲ್ಲಿ ಅವಕಾಶ ಪಡೆದ ಕೆಎಲ್ ರಾಹುಲ್ 20 ರನ್ ಸಿಡಿಸಿ ಔಟಾದರು.

Tap to resize

Latest Videos

undefined

"

ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಜೊತೆಯಾಟ ಟೀಂ ಇಂಡಿಯಾ ಗೆಲುವನ್ನು ಖಚಿತಪಡಿಸಿತು. ಕೊಹ್ಲಿ ಜೊತೆ ಪಂತ್ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ಕಳೆದೆರಡು ಪಂದ್ಯದಲ್ಲಿ ಕಳಪೆ ಪ್ರದರ್ಶನದಿಂದ ಟೀಕೆ ಎದುರಿಸಿದ್ದ ಪಂತ್,  ಬ್ಯಾಟಿಂಗ್ ಮೂಲಕ ತಿರುಗೇಟು ನೀಡಿದರು. ಕೊಹ್ಲಿ ಹಾಗೂ ಪಂತ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಕೊಹ್ಲಿ 59 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಹೀಗಾಗಿ ಭಾರತ ಯಾವುದೇ ಆತಂಕ ಎದುರಿಸಲಿಲ್ಲ.  ಪಂತ್ ಅಜೇಯ 65 ರನ್ ಹಾಗೂ ಮನೀಶ್ ಪಾಂಡೆ ಸಿಡಿಸಿದ 2 ರನ್  ಮೂಲಕ ಭಾರತ 19.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಈ ಮೂಲಕ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. 

click me!