‘ಹೆಣ್ಣು ಮಕ್ಕಳಿಗೆ ಭಾರತ ಸುರಕ್ಷಿತ ದೇಶವಲ್ಲ’; ಸ್ಕ್ವಾಷ್ ಆಟಗಾರ್ತಿ..!

 |  First Published Jul 22, 2018, 12:40 PM IST

‘ಹೆಣ್ಣು ಮಕ್ಕಳಿಗೆ ಭಾರತ ಸುರಕ್ಷಿತ ದೇಶವಲ್ಲ’ ಎಂದು ಕಾರಣ ನೀಡಿರುವ ಸ್ವಿಜರ್‌ಲೆಂಡ್‌ನ ಸ್ಕ್ವಾಷ್ ಪಟು ಅಂಬ್ರೆ ಅಲ್ಲಿಂಕ್ಸ್, ಇಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ. 


ಚೆನ್ನೈ[ಜು.22]: ‘ಹೆಣ್ಣು ಮಕ್ಕಳಿಗೆ ಭಾರತ ಸುರಕ್ಷಿತ ದೇಶವಲ್ಲ’ ಎಂದು ಕಾರಣ ನೀಡಿರುವ ಸ್ವಿಜರ್‌ಲೆಂಡ್‌ನ ಸ್ಕ್ವಾಷ್ ಪಟು ಅಂಬ್ರೆ ಅಲ್ಲಿಂಕ್ಸ್, ಇಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ. 

ಇದರಿಂದಾಗಿ ಸ್ವಿಜರ್‌ಲೆಂಡ್ ತಂಡ, ಅಗ್ರ ಶ್ರೇಯಾಂಕದ ಸ್ಕ್ವಾಷ್ ಪಟು ಇಲ್ಲದೆ ಭಾರತಕ್ಕೆ ಆಗಮಿಸಿದೆ. ‘ಅಂಬ್ರೆ ಮಹಿಳಾ ತಂಡದ ಅಗ್ರ ಆಟಗಾರ್ತಿ. ಅವರ ಪೋಷಕರು ಭಾರತಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನಿತ್ಯವೂ ಅಂತರ್ಜಾಲದಲ್ಲಿ ಓದುತ್ತಾರೆ. ಈ ವರದಿಗಳಿಂದ ಭಾರತ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎಂದು ಭಾವಿಸಿದ್ದು, ಮಗಳನ್ನು ಟೂರ್ನಿಗೆ ಕಳುಹಿಸಿಲ್ಲ’ ಎಂದು ತಂಡದ ಕೋಚ್ ಪ್ಯಾಸ್ಕಲ್ ತಿಳಿಸಿದ್ದಾರೆ. 

Tap to resize

Latest Videos

ಕಳೆದ ವಾರವಷ್ಟೇ ಚೆನ್ನೈನಲ್ಲಿ 11 ವರ್ಷದ ಬಾಲಕಿಯನ್ನು 17 ಬಾಲಕರು ಅತ್ಯಾಚಾರಗೈದಿದ್ದ ಸುದ್ದಿ ವಿಶ್ವದೆಲ್ಲೆಡೆ ಸದ್ದು ಮಾಡಿತ್ತು.

click me!