Swiss Open 2024 ಸೆಮೀಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಸೋಲಿನೊಂದಿಗೆ ಭಾರತದ ಸವಾಲು ಅಂತ್ಯ

By Kannadaprabha NewsFirst Published Mar 24, 2024, 12:50 PM IST
Highlights

ಕಳೆದ 16 ತಿಂಗಳಲ್ಲೇ ಮೊದಲ ಬಾರಿ ಬಿಡಬ್ಲ್ಯುಎಫ್‌ಐ ಟೂರ್ನಿಯ ಸೆಮೀಸ್‌ಗೇರಿದರು. 2022ರ ನವೆಂಬರ್‌ನಲ್ಲಿ ಹೈಲೋ ಓಪನ್‌ನಲ್ಲಿ ಶ್ರೀಕಾಂತ್ ಅಂತಿಮ 4ರ ಘಟ್ಟ ಪ್ರವೇಶಿಸಿದ್ದರು. ಶ್ರೀಕಾಂತ್ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದು, ಸೆಮೀಸ್‌ನಲ್ಲಿ ವಿಶ್ವ ನಂ.22, ಚೈನೀಸ್ ತೈಪೆಯ ಲಿನ್ ಚುನ್ ಯಿ ವಿರುದ್ಧ ಸೆಣಸಾಡಲಿದ್ದಾರೆ.

ಬಾಸೆಲ್(ಸ್ವಿಜರ್‌ಲೆಂಡ್): ಬಾಸೆಲ್(ಸ್ವಿಜರ್‌ಲೆಂಡ್): ದೀರ್ಘ ಸಮಯ ದಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಭಾರತದ ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಸೆಮೀಸ್‌ನಲ್ಲಿ ವಿಶ್ವ ನಂ.22, ಚೈನೀಸ್ ತೈಪೆಯ ಲಿನ್ ಚುನ್ ಯಿ ವಿರುದ್ಧ ಶ್ರೀಕಾಂತ್ 21-15, 9-21, 18-21ರಿಂದ ಸೋಲು ಕಾಣುವ ಮೂಲಕ ತನ್ನ ಅಭಿಯಾನ ಮುಗಿಸಿದ್ದಾರೆ.

ಇದಕ್ಕೂ ಮೊದಲು ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್, ಚೈನೀಸ್ ತೈಪೆಯ ಚಿಯಾ ಹೋ ಲೀ ವಿರುದ್ಧ 21-10, 21-14 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಈ ಮೂಲಕ ಕಳೆದ 16 ತಿಂಗಳಲ್ಲೇ ಮೊದಲ ಬಾರಿ ಬಿಡಬ್ಲ್ಯುಎಫ್‌ಐ ಟೂರ್ನಿಯ ಸೆಮೀಸ್‌ಗೇರಿದ್ದರು. 2022ರ ನವೆಂಬರ್‌ನಲ್ಲಿ ಹೈಲೋ ಓಪನ್‌ನಲ್ಲಿ ಶ್ರೀಕಾಂತ್ ಅಂತಿಮ 4ರ ಘಟ್ಟ ಪ್ರವೇಶಿಸಿದ್ದರು.  

ಮೇ 26ಕ್ಕೆ ಚೆನ್ನೈನಲ್ಲಿ ಐಪಿಎಲ್ ಫೈನಲ್ ಪಂದ್ಯ..?

ಇದೇ ವೇಳೆ ಯುವ ಪ್ರತಿಭೆ ಕಿರಣ್ ಜಾರ್ಜ್ ಅವರು ಪುರುಷರ ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ವಿರುದ್ಧ 23-21, 17-21, 15-21 ಅಂತರದಲ್ಲಿ ಸೋಲನುಭವಿಸಿದರು. ಮತ್ತೊರ್ವ ಯುವ ತಾರೆ ಪ್ರಿಯಾನ್ಶು ರಾಜಾವತ್ ಅವರು ಚೈನೀಸ್ ತೈಪೆಯ ಚೊಯು ಟೀನ್ ಚೆನ್ ವಿರುದ್ಧ 15-21, 19-21 ಅಂತರದಲ್ಲಿ ಪರಾಭವಗೊಂಡರು.

ರಾಷ್ಟ್ರೀಯ ಕಬಡ್ಡಿ: ರಾಜ್ಯಕ್ಕೆ ಕ್ವಾರ್ಟರ್‌ ಫೈನಲಲ್ಲಿ ಸೋಲು

ಅಹ್ಮದ್‌ನಗರ(ಮಹಾರಾಷ್ಟ್ರ): 70ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿದೆ. ರಾಜ್ಯಕ್ಕೆ ಅಂತಿಮ 8ರ ಘಟ್ಟದ ಪಂದ್ಯದಲ್ಲಿ ಬಲಿಷ್ಠ ಮಹಾರಾಷ್ಟ್ರ ವಿರುದ್ಧ 25-45 ಅಂಕಗಳ ಸೋಲು ಎದುರಾಯಿತು. ಇದಕ್ಕೂ ಮೊದಲು ಗುಂಪು ಹಂತದಲ್ಲಿ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿಯೇ ನಾಕೌಟ್‌ಗೇರಿದ್ದ ರಾಜ್ಯ ತಂಡ ಪ್ರಿ ಕ್ವಾರ್ಟರ್‌ನಲ್ಲಿ ಬಿಹಾರ ವಿರುದ್ಧ 53-25 ಅಂಕಗಳಿಂದ ಜಯ ಗಳಿಸಿತ್ತು.

IPL ನಿವೃತ್ತಿ ಸುಳಿವು ಬಿಚ್ಚಿಟ್ಟ ದಿನೇಶ್ ಕಾರ್ತಿಕ್..! ಕೊನೆಯ ಮ್ಯಾಚ್ ಆಡೋದು ಬೆಂಗ್ಳೂರಲ್ಲೋ, ಚೆನ್ನೈನಲ್ಲೋ?

ನೆಟ್‌ಬಾಲ್: ರಾಜ್ಯಕ್ಕೆ ಒಲಿದ ಬೆಳ್ಳಿ

ಕಾರ್ಖೋಡ(ಹರ್ಯಾಣ): 15ನೇ ಆವೃತ್ತಿ ಫೆಡರೇಶನ್ ಕಪ್ ನೆಟ್‌ಬಾಲ್‌ನಲ್ಲಿ ಕರ್ನಾಟಕ ಮಹಿಳಾ ತಂಡ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಹರ್ಯಾಣ ವಿರುದ್ಧ 24-27 ಅಂಕಗಳಿಂದ ಸೋಲನುಭವಿಸಿತು.ಲೀಗ್ ಹಂತದಲ್ಲಿ ಉ.ಪ್ರ., ಗುಜರಾತ್ ವಿರುದ್ಧ ಗೆದ್ದು, ಡೆಲ್ಲಿ ವಿರುದ್ಧ ಟೈ ಮಾಡಿಕೊಂಡಿತ್ತು. ಸೆಮಿಫೈನಲ್‌ನಲ್ಲಿ ಹಿಮಾಚಲ ಪ್ರದೇಶವನ್ನು ಸೋಲಿಸಿತ್ತು.

ಪ್ಯಾರಾ ಬ್ಯಾಡ್ಮಿಂಟನ್: 12 ಪದಕ ಗೆದ್ದ ಕರ್ನಾಟಕ

ರಾಂಚಿ: 6ನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶಟ್ಲರ್‌ಗಳು 2 ಚಿನ್ನ ಸೇರಿ 12 ಪದಕ ಗೆದ್ದಿದ್ದಾರೆ. ಮಹಿಳೆಯರ ವಿಭಾ ಗದಲ್ಲಿ ಪಲ್ಲವಿ 2 ಚಿನ್ನ, 1 ಕಂಚು ತಮ್ಮದಾಗಿಸಿಕೊಂಡರೆ, ಅನುಶಾ 3 ವಿಭಾಗಗಳಲ್ಲಿ ಕಂಚು ಜಯಿಸಿದರು. ಅಮ್ಮು ಮೋಹನ್ 1 ಬೆಳ್ಳಿ, 2 ಕಂಚು, ಸಿದ್ದಣ್ಣ 2, ಸುಮಿತ್ 1 ಕಂಚಿನ ಪದಕ ಪಡೆದುಕೊಂಡರು.

click me!