ಅಸಭ್ಯ ಹೇಳಿಕೆಯಿಂದ ಅಮಾನತಾಗಿರುವ ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಬಿಸಿಸಿಐಗೆ ಕ್ಷಮೆಯಾಚಿಸಿದ್ದಾರೆ. ಆದರೆ ಇವರ ವಿಚಾರಣೆಯಲ್ಲಿ ಬಿಸಿಸಿಐ ಇದೀಗ ಇಬ್ಬಾಗವಾಗಿದೆ.
ನವದೆಹಲಿ(ಜ.15): ಮಹಿಳೆಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ ಅಮಾನತುಗೊಂಡಿರುವ ಭಾರತ ತಂಡದ ಕೆ.ಎಲ್.ರಾಹುಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸೋಮವಾರ ಬಿಸಿಸಿಐಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇದರ ಮಧ್ಯೆಯೇ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್, ‘ಇಬ್ಬರ ಕ್ರಿಕೆಟ್ ವೃತ್ತಿ ಜೀವನಕ್ಕೆ ಧಕ್ಕೆ ತರದೇ ಸರಿಪಡಿಸಬೇಕು’ ಎಂದು ಬಿಸಿಸಿಐಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿ - ಟ್ರೋಲ್ ಆದ ಹಾರ್ದಿಕ್ -ರಾಹುಲ್!
undefined
ಬಿಸಿಸಿಐ ನೀಡಿದ ಹೊಸ ಷೋಕಾಸ್ ನೋಟಿಸ್‌ಗೆ ರಾಹುಲ್ ಮತ್ತು ಪಾಂಡ್ಯ ಉತ್ತರಿಸಿದ್ದು, ಕ್ಷಮೆ ಕೋರಿದ್ದಾರೆ. ‘ಸಿಒಎ ಮುಖ್ಯಸ್ಥ ವಿನೋದ್ ರಾಯ್, ಬಿಸಿಸಿಐ ಸಂವಿಧಾನ ನಿಯಮಾವಳಿಯಂತೆ ಇಬ್ಬರ ವಿಚಾರಣೆ ನಡೆಸಲು ಸಿಇಒಗೆ ಸೂಚಿಸಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾಗೆ ಮುಂಬೈ ಪೊಲೀಸರಿಂದ ಗೂಗ್ಲಿ!
ಅಲ್ಲದೆ ಬಿಸಿಸಿಐನ 10 ಘಟಕಗಳು, ಇಬ್ಬರ ವಿರುದ್ಧ ವಿಚಾರಣೆಗೆ ತನಿಖಾಧಿಕಾರಿ ನೇಮಕಕ್ಕೆ ವಿಶೇಷ ಸಾಮಾನ್ಯ ಸಭೆ ಕರೆಯಬೇಕು ಎಂದು ಬೇಡಿಕೆ ಇಟ್ಟಿವೆ. ಆದರೆ ಸಿಒಎ ಸದಸ್ಯೆ ಡಯಾನ ಎಡುಲ್ಜಿ, ಆಡಳಿತ ಸಮಿತಿ ಮತ್ತು ಬಿಸಿಸಿಐ ಅಧಿಕಾರಿಗಳಿರುವ ಸಮಿತಿ ರಚಿಸಿ, ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.