ಶ್ರೀಶಾಂತ್ ಮೇಲಿನ ಅಜೀವ ನಿಷೇಧ ರದ್ದು ಮಾಡಿದ ಸುಪ್ರೀಂ ಕೋರ್ಟ್

By Web Desk  |  First Published Mar 15, 2019, 12:42 PM IST

ಕೇರಳ ವೇಗಿ ಶ್ರೀಶಾಂತ್ ಮೇಲೆ ಬಿಸಿಸಿಐ ವಿಧಿಸಿದ್ದ ಅಜೀವ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದೆ. 2013ರಲ್ಲಿ ನಡೆದ ಐಪಿಎಲ್ ವೇಳೆ ವೇಗಿ ಶ್ರೀಶಾಂತ್ ಸ್ಫಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎಂಬ ಆರೋಪದಡಿ ನಿಷೇಧಕ್ಕೆ ಗುರಿಯಾಗಿದ್ದರು.


ನವದೆಹಲಿ[ಮಾ.15]: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್’ನಲ್ಲಿ ಕೇರಳದ ವೇಗಿ ಎಸ್. ಶ್ರೀಶಾಂತ್ ಭಾಗವಹಿಸಿದ್ದಾರೆ ಎಂದು ಬಿಸಿಸಿಐ ಶಿಸ್ತು ಸಮಿತಿ ವಿಧಿಸಿದ್ದ ಅಜೀವ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ ಇನ್ನು ಮೂರು ತಿಂಗಳೊಳಗಾಗಿ ಶಿಕ್ಷೆಯ ಕುರಿತಂತೆ ಪುನರ್‌ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಸೂಚನೆ ನೀಡಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನನ್ನನ್ನು ಸಂಪೂರ್ಣ ಬಿಡುಗಡೆಗೊಳಿಸಬೇಕು ಎಂದು ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

ಆಧಾರವಿಲ್ಲದೆ ಫಿಕ್ಸಿಂಗ್ ಆರೋಪ ಹೊರಿಸಿದ ಬಿಸಿಸಿಐ- ಸುಪ್ರೀಂ ಕೋರ್ಟ್‌ನಲ್ಲಿ ಶ್ರೀಶಾಂತ್!

Tap to resize

Latest Videos

undefined

ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಕೆ.ಎಂ ಜೋಸೆಫ್ ಅವರಿದ್ದು ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಿದ್ದು, ಶ್ರೀಶಾಂತ್ ಅಜೀವ ಶಿಕ್ಷೆಯ ಬದಲಾಗಿ ಶಿಕ್ಷೆಯ ಪ್ರಮಾಣ ಕಡಿಮೆಗೊಳಿಸಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ. ನಿಷೇಧ ತೆರೆವುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಶ್ರೀಶಾಂತ್ ಫೆ.28 ರಂದು ವಿಚಾರಣೆ ಹಾಜರಾಗಿದ್ದರು. ಶ್ರೀಶಾಂತ್ ಪರ ವಾದಿಸಿದ  ವಕೀಲ ಸಲ್ಮಾನ್ ಖುರ್ಷಿದ್, ಬಿಸಿಸಿಐ ನಡೆಯನ್ನ ಪ್ರಶ್ನಿಸಿದ್ದರು. 

ಸುಪ್ರೀಂ ತೀರ್ಪಿನ ಮೇಲೆ ಶ್ರೀಶಾಂತ್ ಭವಿಷ್ಯ- BCCIಗೆ ಶುರುವಾಯ್ತು ಆತಂಕ!

2013ರ ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಅನ್ನೋ ಆರೋಪದಡಿ ಶ್ರೀಶಾಂತ್‌ ಬಂಧಿಸಲಾಗಿತ್ತು. 2015ರಲ್ಲಿ ಶ್ರೀಶಾಂತ್ ಬಂಧನ ಮುಕ್ತರಾದರು. ಪಟಿಯಾಲಾ ಕೋರ್ಟ್‌ನಲ್ಲಿ ಶ್ರೀಶಾಂತ್ ಆರೋಪ ಮುಕ್ತರಾಗಿ ಹೊರಬಂದಿದ್ದಾರೆ.
   

click me!