ಚೆಂಡು ವಿರೂಪಗೊಳಿಸಿದ ಸ್ಮಿತ್'ಗೆ ಐಸಿಸಿಯಿಂದ ಶಾಕ್..!

Published : Mar 25, 2018, 06:49 PM ISTUpdated : Apr 11, 2018, 12:59 PM IST
ಚೆಂಡು ವಿರೂಪಗೊಳಿಸಿದ ಸ್ಮಿತ್'ಗೆ ಐಸಿಸಿಯಿಂದ ಶಾಕ್..!

ಸಾರಾಂಶ

ಇನ್ನು ಚೆಂಡು ವಿರೂಪಗೊಳಿಸಿ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದ ಆಸೀಸ್ ಸಹ ಆಟಗಾರ ಕ್ಯಾಮರೋನ್ ಬೆನ್'ಕ್ರಾಫ್ಟ್'ಗೆ ಪಂದ್ಯದ ಸಂಭಾವನೆಯ 75% ದಂಡ ಹಾಗೂ 3 ಋಣಾತ್ಮಕ ಅಂಕವನ್ನು ನೀಡಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್'ಗೆ ಐಸಿಸಿ ಒಂದು ಪಂದ್ಯ ನಿಷೇಧ ಹಾಗೂ ಪಂದ್ಯದ ಸಂಭಾವನೆಯ 100% ದಂಡ ವಿಧಿಸಿದೆ.

ಕ್ರೀಡಾ ನಿಯಮಗಳಿಗೆ ಧಕ್ಕೆ ತಂದು ಐಸಿಸಿ ನಿಯಮ ಉಲ್ಲಂಘಿಸಿದ ಸ್ಮಿತ್ ವಿರುದ್ಧ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್'ಸನ್ ಈ ಶಿಕ್ಷಿ ವಿಧಿಸಿದ್ದಾರೆ.

ಇನ್ನು ಚೆಂಡು ವಿರೂಪಗೊಳಿಸಿ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದ ಆಸೀಸ್ ಸಹ ಆಟಗಾರ ಕ್ಯಾಮರೋನ್ ಬೆನ್'ಕ್ರಾಫ್ಟ್'ಗೆ ಪಂದ್ಯದ ಸಂಭಾವನೆಯ 75% ದಂಡ ಹಾಗೂ 3 ಋಣಾತ್ಮಕ ಅಂಕವನ್ನು ನೀಡಲಾಗಿದೆ.

ಚೆಂಡು ವಿರೂಪಗೊಳಿಸಿದ ಆರೋಪದಲ್ಲಿ ಸಿಕ್ಕಿಹಾಕಿಕೊಂಡಿರುವ ಸ್ಮಿತ್ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಬೇಕೆಂದು ಅಸೀಸ್ ಸರ್ಕಾರ ಆಸ್ಟ್ರೇಲಿಯಾ ಕ್ರಿಕೆಟ್(CA)ಗೆ ಸೂಚನೆ ನೀಡಿದೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2027ರಿಂದ ದೀಪಾವಳಿ, ದಸರಾ ಟೈಮ್‌ನಲ್ಲಿ ಐಪಿಎಲ್‌? ಮತ್ತಷ್ಟು ಹಣ ಮಾಡಲು ಬಿಸಿಸಿಐ ಮೆಗಾ ಪ್ಲ್ಯಾನ್‌
Fifa World Cup 2026: 300 ಕೆಜಿ ಮೀನು, 6000 ಕಿತ್ತಳೆ ಹಣ್ಣು..! ವಿಶ್ವಕಪ್ ಟೂರ್ನಿಗಾಗಿ ತಾಯ್ನಾಡಿನ ಆಹಾರ ತಂದ ಟೀಮ್‌