ಚಂಡು ವಿರೂಪ ಪ್ರಕರಣ: ನಾಯಕ, ಉಪನಾಯಕ ಸ್ಥಾನಕ್ಕೆ ಸ್ಮಿತ್, ವಾರ್ನ್'ರ್ ರಾಜೀನಾಮೆ, ಐಪಿಎಲ್'ನಲ್ಲಿ ಬಾರಿ ಬದಲಾವಣೆ ಸಾಧ್ಯತೆ

By Suvarna Web DeskFirst Published Mar 25, 2018, 3:23 PM IST
Highlights

ಮಂಡಳಿಯು ಪ್ರಕರಣವನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಐಸಿಸಿ ನೀತಿ ಸಂಹಿತೆಯ ಪ್ರಕಾರ ಚಂಡನ್ನು ವಿರೂಪಗೊಳಿಸಿದರೆ ಶೇ.100 ರಷ್ಟು ದಂಡ ಹಾಗೂ ಒಂದು ಪಂದ್ಯದಿಂದ ಅಮಾನತುಗೊಳಿಸಬಹುದು

ನವದೆಹಲಿ(ಮಾ.25): ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್'ನಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್'ಕ್ರಾಫ್ಟ್ ಚಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ಸ್ಟಿವ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನ'ರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂದು ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್'ನ  ಇನ್ನು 2 ದಿನದ ಆಟ ಬಾಕಿಯಿರುವಾಗಲೆ ರಾಜೀನಾಮೆ ನೀಡಿದ್ದು, ವಿಕೇಟ್ ಕೀಪರ್ ಟೈಮ್ ಪೈನ್ ತಂಡದ ಉಸ್ತುವಾರಿ ನಾಯಕರಾಗಲಿದ್ದಾರೆ. ಇಬ್ಬರು ತಮ್ಮ ಸ್ಥಾನದಿಂದ ಕೆಳಗಿಳಿದಿರುವ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಸಿಇಒ ಜೇಮ್ಸ್ ಸುಟರ್'ಲ್ಯಾಂಡ್ ಸ್ಪಷ್ಟಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಲಿದೆ' ಎಂದು ತಿಳಿಸಿದ್ದಾರೆ.

ಹೇಗೆ ನಡೆಯಿತು

ಮಂಡಳಿಯು ಪ್ರಕರಣವನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಐಸಿಸಿ ನೀತಿ ಸಂಹಿತೆಯ ಪ್ರಕಾರ ಚಂಡನ್ನು ವಿರೂಪಗೊಳಿಸಿದರೆ ಶೇ.100 ರಷ್ಟು ದಂಡ ಹಾಗೂ ಒಂದು ಪಂದ್ಯದಿಂದ ಅಮಾನತುಗೊಳಿಸಬಹುದು. ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್'ಕ್ರಾಪ್ಟ್ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ದಿನದ 43ನೇ ಓವರ್'ನಲ್ಲಿ ಕ್ಷೇತ್ರ ರಕ್ಷಣೆ ಮಾಡುವಾಗ ಚಂಡನ್ನು ವಿರೂಪಗೊಳಿಸುತ್ತಿರುವುದು ಕಂಡು ಬಂತು.

ಇದನ್ನು ಅಂಪೈರ್'ಗಳು ಪ್ರಶ್ನಿಸಿದಾಗ ಪ್ಯಾಂಟ್‌ನ ಒಳ ಜೇಬಿನಿಂದ ವಸ್ತುವೊಂದನ್ನು ತೆಗೆದು  ತೋರಿಸಿದರು. ಹಳದಿ ಬಣ್ಣದ ಆ ವಸ್ತು, ಸನ್‌ಗ್ಲಾಸ್‌ಗಳನ್ನು ಇರಿಸುವ ನಯವಾದ ಚೀಲದಂತೆ ಇತ್ತು ಎಂದು ಅಂಪೈರ್‌ಗಳು ತಿಳಿಸಿದರು. ಬಳಿಕ ಬ್ಯಾನ್‌ಕ್ರಾಫ್ಟ್ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ, ಅದೇ ಚೆಂಡಿನಲ್ಲಿ ಆಟ ಮುಂದುವರಿಸಿದರು. ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ಘಟನೆ ಮುಂದಿನ ತಿಂಗಳು ನಡೆಯುವ ಐಪಿಎಲ್'ನಲ್ಲೂ ಬಾರಿ ಬದಲಾವಣೆಯಾಗುವ ಸಾಧ್ಯತೆಯಿದೆ.

click me!