ಬಡ ಮಕ್ಕಳ ಹಾರ್ಟ್ ಸರ್ಜರಿ; 600 ಕಂದಮ್ಮಗಳಿಗೆ ಬೆಳಕಾದ ಗವಾಸ್ಕರ್!

By Web DeskFirst Published Sep 18, 2019, 6:05 PM IST
Highlights

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್   ಹಲವು ಸಾಮಾಜಿಕ  ಕಾರ್ಯಗಳಿಗೆ ತೊಡಗಿಸಿಕೊಂಡಿದ್ದಾರೆ. ಇದೀಗ  ಬಡ ಮಕ್ಕಳ ಬಾಳಿಗೆ ನೆರವಾಗೋ ಮೂಲಕ ತಮ್ಮ ಕಾರ್ಯವನ್ನು ವಿಸ್ತರಿಸಿದ್ದಾರೆ. ಗವಾಸ್ಕರ್ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈ(ಸೆ.18): ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅದ್ಭುತ ಇನ್ನಿಂಗ್ಸ್‌ಗಳು ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲಾರ. ವೆಸ್ಟ್ ಇಂಡೀಸ್ ದೈತ್ಯ ಬೌಲರ್‌ಗಳ ವಿರುದ್ಧ ಅಬ್ಬರಿಸಿರುವ ಗವಾಸ್ಕರ್, ವಿದಾಯದ ಬಳಿಕವೂ ವೀಕ್ಷಕ ವಿವರಣೆ, ವಿಶ್ಲೇಷಣೆ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದೀಗ ಗವಾಸ್ಕರ್ 600 ಬಡ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗೋ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದನ್ನೂ ಓದಿ: ಕೊಹ್ಲಿ-ರೋಹಿತ್‌ ಜಗಳದ ಸುದ್ದಿ ನಿಲ್ಲಲ್ಲ..!

ಹಾರ್ಟ್ ಟು ಹಾರ್ಟ್ ಫೌಂಡೇಶನ್ ಸದಸ್ಯರಾಗಿರುವ ಗವಾಸ್ಕರ್, 600 ಬಡ ಮಕ್ಕಳ ಹಾರ್ಟ್ ಸರ್ಜರಿಗಾಗಿ ಹಣ ಸಂಗ್ರಹ ಮಾಡಿದ್ದಾರೆ. ಇದರಲ್ಲಿ 34 ಮಕ್ಕಳ ಸರ್ಜರಿಗೆ ಗವಾಸ್ಕರ್ ಕೈಯಿಂದಲೇ ಹಣ ನೀಡಿದ್ದಾರೆ. ಈ ಮೂಲಕ ಬಡ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಮಹಾರಾಷ್ಟ್ರದ ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ.

ಇದನ್ನೂ ಓದಿ: ಕೊಹ್ಲಿ ನಾಯಕತ್ವ ಮುಂದುವರಿಕೆಗೆ ಗವಾಸ್ಕರ್ ಆಕ್ಷೇಪ

ಬಡ ಮಕ್ಕಳ ಶಸ್ತ್ರಿ ಚಿಕಿತ್ಸೆಗೆ ನೆರವಾದ ಎಲ್ಲರಿಗೂ ತುಂಬು ಹೃದಯದ ಧನ್ಯವಾದ. ಫಂಡ್ ರೈಸ್ ಮಾಡಲು ಯುಎಸ್‌ಎ ತೆರಳಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರ ಸಹಕಾರವಿದ್ದರೆ ಇನ್ನಷ್ಟು ಮಕ್ಕಳಿಗೆ ನೆರವಾಗಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.

ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಯಲ್ಲಿ 2012ರಿಂದ ಇಲ್ಲೀವರೆಗೆ 10,000 ಮಕ್ಕಳಿಗೆ ಹಾರ್ಟ್ ಸರ್ಜರಿಯನ್ನು ಉಚಿತವಾಗಿ ಮಾಡಲಾಗಿದೆ. ಇನ್ನೂ 36,000 ಮಕ್ಕಳ ಶಸ್ತ್ರಿ ಚಿಕಿತ್ಸೆಗಾಗಿ ಪೋಷಕರು ಕಾಯುತ್ತಿದ್ದಾರೆ. ಇದರಲ್ಲಿ ಹಲವು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆ ಚೇರ್ಮೆನ್ ಸಿ ಶ್ರೀನಿವಾಸ್ ಹೇಳಿದ್ದಾರೆ.

click me!