ಗುಡ್ ನ್ಯೂಸ್: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅಥ್ಲೀಟ್‌ ಅವಿ​ನಾ​ಶ್‌

By Web Desk  |  First Published Oct 6, 2019, 1:26 PM IST

ಸ್ಟೀಪಲ್‌ಚೇಸ್‌ ಅಥ್ಲೀಟ್ ಅವಿನಾಶ್‌ ಸಾಬ್ಲೆ ರಾಷ್ಟ್ರೀಯ ದಾಖಲೆ ನಿರ್ಮಿಸುವುದರ ಜತೆಗೆ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ದೋಹಾ (ಅ.06): 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಭಾರತದ ಅಥ್ಲೀಟ್‌ ಅವಿನಾಶ್‌ ಸಾಬ್ಲೆ ಅರ್ಹತೆ ಸಂಪಾದಿಸಿದ್ದಾರೆ. ಇಲ್ಲಿ ನಡೆ​ಯು​ತ್ತಿ​ರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಪುರುಷರ 3000 ಮೀಟರ್‌ ಸ್ಟೀಪಲ್‌ಚೇಸ್‌ ಫೈನಲ್‌ನಲ್ಲಿ 13ನೇ ಸ್ಥಾನಕ್ಕೆ ಅವಿನಾಶ್‌ ತೃಪ್ತಿಪಟ್ಟರು.

Breaking Records 8⃣:2⃣1⃣.3⃣7⃣🙌
The incredible journey continues on the 🗼 sets a new NR for the third time in 2019 at Breaks qual mark in 3000m Steeplechase!
Read https://t.co/4rbYaYc2Kp pic.twitter.com/1SwMj3c8aM

— Team India (@WeAreTeamIndia)

ಒಲಿಂಪಿಕ್ಸ್‌ಗೆ ಅರ್ಹತೆ ಪಡೆ​ಯಲು 8 ನಿಮಿಷ 22 ಸೆಕೆಂಡ್‌ಗಳ ಮಾನ​ದಂಡ ಇರಿ​ಸ​ಲಾ​ಗಿತ್ತು. ಶುಕ್ರ​ವಾರ ರಾತ್ರಿ ನಡೆದ ಸ್ಪರ್ಧೆ​ಯಲ್ಲಿ ಅವಿ​ನಾಶ್‌ 8 ನಿಮಿಷ 21.37 ಸೆಕೆಂಡ್‌ಗಳಲ್ಲಿ ಓಟ ಪೂರ್ಣ​ಗೊ​ಳಿಸಿ ಟೋಕಿಯೋ ಗೇಮ್ಸ್‌ಗೆ ಪ್ರವೇಶ ಪಡೆ​ದರು. ಜತೆಗೆ ತಮ್ಮದೇ ಹೆಸ​ರಿ​ನ​ಲ್ಲಿದ್ದ ರಾಷ್ಟ್ರೀಯ ದಾಖಲೆ (8:28:94)ಯನ್ನು ಉತ್ತ​ಮ​ಗೊ​ಳಿ​ಸಿ​ಕೊಂಡರು. ಒಂದೇ ವರ್ಷದಲ್ಲಿ 4 ಬಾರಿ ರಾಷ್ಟ್ರೀಯ ದಾಖಲೆ ಮುರಿದ ಸಾಧನೆಯನ್ನು ಅವಿ​ನಾಶ್‌ ಮಾಡಿ​ದರು.

Tap to resize

Latest Videos

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿನೇಶ್ ಫೋಗಟ್!

ಭಾರ​ತೀಯ ಸೇನೆಯಲ್ಲಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ರುವ ಮಹಾ​ರಾಷ್ಟ್ರ ಮೂಲದ 25 ವರ್ಷದ ಅವಿ​ನಾಶ್‌, 2013-14ರಲ್ಲಿ ಸಿಯಾ​ಚಿನ್‌ನಲ್ಲಿ ಸೇವೆ ಸಲ್ಲಿ​ಸಿದ್ದರು. ರಾಜ​ಸ್ಥಾ​ನ, ಸಿಕ್ಕಿಂನಲ್ಲೂ ಅವರು ಸೇವೆ ಸಲ್ಲಿ​ಸಿ​ದ್ದಾರೆ.

ಒಲಂಪಿಕ್‌ನಲ್ಲಿ ಚಿನ್ನ ಗೆಲ್ಲುವೆ : PV ಸಿಂಧು

ಇದೇ ವೇಳೆ ಪುರುಷರ 20 ಕಿ.ಮೀ ನಡಿಗೆ ಸ್ಪರ್ಧೆಲ್ಲಿ ಭಾರ​ತದ ಕೆ.ಟಿ ಇರ್ಫಾನ್‌ 27ನೇ ಸ್ಥಾನ, ದೇವೆಂದರ್‌ ಸಿಂಗ್‌ 36ನೇ ಸ್ಥಾನ ಪಡೆದು ನಿರಾಸೆ ಅನು​ಭ​ವಿ​ಸಿ​ದರು.
 

click me!