ಮಾಯಾಮುಡಿಯ ಐರನ್ ಸೈಟ್ ಶೂಟರ್ಸ್ ಸಂಸ್ಥೆ ವತಿಯಿಂದ ಕೈಲ್ಪೋದ್ ಹಬ್ಬದ ಪ್ರಯುಕ್ತ ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ಶೂಟಿಂಗ್ ಸ್ಪರ್ಧೆಯಲ್ಲಿ ಯುವ ಶೂಟರ್ಸ್ ಗಳಾದ ನಾಪೋಕ್ಲಿನ ಕೇಲೆಟ್ಟೀರ ಪವಿತ್ ಪೂವಯ್ಯ ಮತ್ತು ಅಂದಗೋವೆಯ ಕೇಚಿರ ಶಬ್‌್ಧ ಚಾಂಪಿಯನ್ಸ್‌ಗಳಾಗಿ ಮೂಡಿಬಂದು ಗಮನ ಸೆಳೆದರು.
ಪೊನ್ನಂಪೇಟೆ (ಸೆ.7) :ಮಾಯಾಮುಡಿಯ ಐರನ್ ಸೈಟ್ ಶೂಟರ್ಸ್ ಸಂಸ್ಥೆ ವತಿಯಿಂದ ಕೈಲ್ಪೋದ್ ಹಬ್ಬದ ಪ್ರಯುಕ್ತ ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ಶೂಟಿಂಗ್ ಸ್ಪರ್ಧೆಯಲ್ಲಿ ಯುವ ಶೂಟರ್ಸ್ ಗಳಾದ ನಾಪೋಕ್ಲಿನ ಕೇಲೆಟ್ಟೀರ ಪವಿತ್ ಪೂವಯ್ಯ ಮತ್ತು ಅಂದಗೋವೆಯ ಕೇಚಿರ ಶಬ್‌್ಧ ಚಾಂಪಿಯನ್ಸ್‌ಗಳಾಗಿ ಮೂಡಿಬಂದು ಗಮನ ಸೆಳೆದರು.
ಕಲೆ ಮತ್ತು ಕ್ರೀಡೆಗಳ ಉಳಿವಿಗೆ ಎಲ್ಲರೂ ಶ್ರಮಿಸಿ: ಅಪ್ಪಚ್ಚು ರಂಜನ್
undefined
ತೀವ್ರ ಕುತೂಹಲ ಮೂಡಿಸಿದ್ದ ಸ್ಪರ್ಧೆಯ ಎರಡೂ ವಿಭಾಗಗಳ ಅಂತಿಮ ಹಂತದ ಹೋರಾಟದಲ್ಲಿ 0.22 ರೈಫಲ್ ಶೂಟಿಂಗ್‌್ಸನಲ್ಲಿ ಕೇಲೆಟ್ಟೀರ ಪವಿತ್ ಪೂವಯ್ಯ ಮತ್ತು 12ನೇ ರ್ಬೋ ಗನ್ ಶೂಟಿಂಗ್‌್ಸ ನಲ್ಲಿ ಕೇಚಿರ ಶಬ್‌್ದ ತಲಾ ಪ್ರಥಮ ಸ್ಥಾನ ಪಡೆಯುವುದರ ಮೂಲಕ ವಿಜಯದ ಮಾಲೆಯನ್ನು ತಮ್ಮ ಕೊರಳಿಗೇರಿಸಿಕೊಂಡರು.
ಚೆಟ್ಟಳ್ಳಿಯ ಪುತ್ತರೀರ ರಿಶಾಂಕ್ ನಂಜಪ್ಪ ಮತ್ತು ಕಾಕೋಟುಪರಂಬಿನ ಕಟ್ಟೇರ ವಿಹಾ ಪೊನ್ನಮ್ಮ 0.22 ರೈಫಲ್ ಶೂಟಿಂಗ್‌್ಸ ವಿಭಾಗದ ದ್ವಿತೀಯ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದರೂ ಅಂತಿಮವಾಗಿ ಪುತ್ತರೀರ ರಿಶಾಂಕ್ ನಂಜಪ್ಪ ಅವರಿಗೆ ದ್ವಿತೀಯ ಬಹುಮಾನದ ಅದೃಷ್ಟಒಲಿಯಿತು. ಹೀಗಾಗಿ ಇಡೀ ಸ್ಪರ್ಧೆಯಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದ ಕಿರಿಯ ವಯಸ್ಸಿನ ಶೂಟರ್ ಕಟ್ಟೇರ ವಿಹಾ ಪೊನ್ನಮ್ಮ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
12ನೇ ಬೋರ್ ಗನ್ ಶೂಟಿಂಗ್‌್ಸ ವಿಭಾಗದಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದ ಕೆಲವೇ ಕೆಲವು ಸ್ಪರ್ಧಿಗಳ ಪೈಕಿ ಅದ್ವಿತೀಯ ಸಾಧನೆ ತೋರಿದ ಕಿರಿಯ ವಯಸ್ಸಿನ ಶೂಟರ್ ಕೇಚಿರ ಶಬ್‌್ದ ಪ್ರಥಮ ಸ್ಥಾನ ದೃಢಪಡಿಸಿದ ನಂತರ ದ್ವಿತೀಯ ಸ್ಥಾನದ ಬಹುಮಾನಕ್ಕಾಗಿ ನಡೆದ ಸ್ಪರ್ಧೆ ಮತ್ತಷ್ಟುಕುತೂಹಲ ಕೆರಳಿಸಿತು. ಈ ವೇಳೆ ಮುಕ್ಕೋಡ್ಲಿನ ಕನ್ನಿಕಂಡ ಶ್ಯಾಮ್ ಅವರ ಕೋವಿಯಿಂದ ಸಿಡಿದ ಗುಂಡು ಅವರಿಗೆ ದ್ವಿತೀಯ ಸ್ಥಾನ ದಕ್ಕುವಂತೆ ಮಾಡಿತು. ತೃತೀಯ ಸ್ಥಾನಕ್ಕಾಗಿ ಕಣದಲ್ಲಿ ಉಳಿದಿದ್ದ ಪಿ. ಸಂದೀಪ್, ಅಜ್ಜೇಟ್ಟೀರ ಸೋಮಯ್ಯ ಮತ್ತು ಕುಪ್ಪುಡೀರ ಪ್ರಖ್ಯಾತ್ ಸಮಬಲದ ಹೋರಾಟ ನಡೆಸುತ್ತಾ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುತ್ತಿದ್ದರು. ಅಂತಿಮವಾಗಿ ಯುವ ಶೂಟರ್ ಬಿರುನಾಣಿಯ ಕುಪ್ಪುಡೀರ ಪ್ರಖ್ಯಾತ್ ಸಿಡಿಸಿದ ಗುಂಡು ಅವರಿಗೆ ತೃತೀಯ ಬಹುಮಾನವನ್ನು ತಂದುಕೊಟ್ಟಿತು.
ಕೊಡಗು ಜಾವ ಯೆಝ್ಡಿ ಮೋಟಾರ್ ಸೈಕಲ್ ಕ್ಲಬ್ ವತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅತಿ ಕಿರಿಯ ವಯಸ್ಸಿನ ಶೂಟರ್ಸ್‌ಗಳಿಗಾಗಿ ಘೋಷಿಸಲಾಗಿದ್ದ ಒಡಿಕತ್ತಿ ಬಹುಮಾನವನ್ನು ಶ್ಲೋಕ್ ಸುಬ್ಬಯ್ಯ ಮತ್ತು ಕಟ್ಟೇರ ವಿಹಾ ಪೊನ್ನಮ್ಮ ಪಡೆದುಕೊಂಡರು. ಲಿಂಗ ಮತ್ತು ವಯಸ್ಸಿನ ಭೇದವಿಲ್ಲದೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು, ಬಹುಮಾನ ಗೆಲ್ಲುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು. ಅಲ್ಲದೆ ಜಿಲ್ಲೆಯ ಸಾಕಷ್ಟುಉದಯೋನ್ಮುಖ ಶೂಟರ್ಸ್ ಗಳನ್ನು ಹೊರ ತರುವಲ್ಲಿಯೂ ಈ ಸ್ಪರ್ಧೆ ಯಶಸ್ವಿಯಾಯಿತು. ಕರ್ನಲ್ (ನಿವೃತ್ತ) ಪಟ್ಟಡ ಕರುಂಬಯ್ಯ, ಬಡುವಂಡ ಮುತ್ತಪ್ಪ, ತೀತಮಾಡ ಸುಬ್ರಮಣಿ ಮೊದಲಾದ ಹಿರಿಯ ಶೂಟಸ್ರ್ಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. 0.22 ರೈಫಲ್ ಶೂಟಿಂಗ್‌್ಸ ವಿಭಾಗದಲ್ಲಿ 255 ಹಾಗೂ 12ನೇ ಬೋರ್ ಗನ್ ಶೂಟಿಂಗ್‌್ಸ ವಿಭಾಗದಲ್ಲಿ 217 ಸೇರಿದಂತೆ ಒಟ್ಟು 472 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆಯಾಗಿದೆ. ಮಾಹಿತಿ ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಆಧುನಿಕ ಕ್ರೀಡೆಗಳು ಹೆಚ್ಚಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರಾಶಸ್ತ್ಯಯ ಇಲ್ಲದಾಗಿದೆ. ಕೊಡಗಿನಲ್ಲಿ ಗ್ರಾಮೀಣ ಕ್ರೀಡಾ ಕೂಟಗಳನ್ನು ನಿರಂತರವಾಗಿ ಆಯೋಜಿಸುವುದರ ಮೂಲಕ ಪುರಾತನ ಕ್ರೀಡೆಯ ಪುನಶ್ಚೇತನ ಸಾಧ್ಯ. ಗ್ರಾಮೀಣ ಕ್ರೀಡಾಕೂಟಗಳಿಂದ ಮಾತ್ರ ನಮ್ಮ ಜನಪದಿಯ ಸೊಗಡಿನ ಸತ್ವ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಅಹಮದಾಬಾದಿನ ಆದಾಯ ತೆರಿಗೆ ಆಯುಕ್ತರಾಗಿರುವ ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಎ.ಎಸ…. ನರೇನ್ ಕಾರ್ಯಪ್ಪ, ಹಿರಿಯ ಕಾಫಿ ಬೆಳೆಗಾರರಾದ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷರಾದ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಸ್. ಸುರೇಶ್, ಕೊಡಗು ಜಾವ ಯೆಝ್ಡಿ ಮೋಟಾರ್ ಸೈಕಲ್ ಕ್ಲಬ್ ಅಧ್ಯಕ್ಷರಾದ ತೀತರಮಾಡ ಸುಕೇಶ್ ಮಾದಯ್ಯ, ಹಿರಿಯ ಅಥ್ಲೆಟ್ ಮಾಪಂಗಡ ಯಮುನಾ ಚಂಗಪ್ಪ, ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ವಿಜು ದೇವಯ್ಯ, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾದ ಎ.ಪಿ. ದಿನೇಶ್ ಕುಮಾರ್, ಟ್ರೋಫಿ ಪ್ರಾಯೋಜಕರಾಗಿದ್ದ ಸಣ್ಣುವಂಡ ಚಿಟ್ಟಿಯಪ್ಪ, ಐರನ್ ಸೈಟ್ ಶೂಟರ್ಸ್ ಸಂಸ್ಥೆಯ ಮುಖ್ಯಸ್ಥರಾದ ಆಪಟ್ಟೀರ ಆರ್. ಅಯ್ಯಪ್ಪ, ಆಯೋಜನಾ ಸಮಿತಿ ಪದಾಧಿಕಾರಿಗಳಾದ ಬಾನಂಡ ಎನ್. ಪ್ರಥ್ಯು, ಕುಪ್ಪಂಡ ದಿಲನ್ ಬೋಪಣ್ಣ, ಆಪಟ್ಟೀರ ಟಾಟು ಮೊಣ್ಣಪ್ಪ, ಕಾಂಡೆರ ಕಿರಣ್ ಚಂಗಪ್ಪ, ಕೊಂಗಂಡ ಪಂಚು ದೇವಯ್ಯ, ಶಾಂತೆಯಂಡ ಮಧು ಮಾಚಯ್ಯ ಉಪಸ್ಥಿತರಿದ್ದರು. ಖ್ಯಾತ ವೀಕ್ಷಕ ವಿವರಣೆಗಾರರಾದ ಚೆಪ್ಪುಡೀರ ಎ. ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.
ಇದೆಂತಾ ಅನ್ಯಾಯ?: ದಸರಾದಿಂದ ಗ್ರಾಮೀಣ ಕ್ರೀಡೆಗೆ ಗೇಟ್ ಪಾಸ್?
ಕುಪ್ಪಂಡ ದಿಲನ್ ಬೋಪಣ್ಣ, ಆಪಟ್ಟೀರ ಸುಬ್ಬಯ್ಯ, ಸಣ್ಣುವಂಡ ಚಿಟ್ಟಿಯಪ್ಪ, ಆಪಟ್ಟೀರ ವೀಕ್ಷಿತ್, ಸಣ್ಣುವಂಡ ಪೊನ್ನಣ್ಣ, ಶಾಂತೆಯಂಡ ಮಧು ಮಾಚಯ್ಯ, ಕಾಂಡೆರ ಶ್ರುತಿ ಚಂಗಪ್ಪ, ಅಡ್ಡಂಡ ನಿಷ್ಮ, ಶಾಂತೆಯಂಡ ಟೀನಾ ಮಾಚಯ್ಯ ಮೊದಲಾದವರು ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದರು.
ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಈ ಗ್ರಾಮೀಣ ಸೊಗಡಿನ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಜನ ಪಾಲ್ಗೊಂಡಿದ್ದರು