ಕೊನೆ ಏಕದಿನ ಆಡಲು ಸಜ್ಜಾದ ಮಾಲಿಂಗ!

Published : Jul 26, 2019, 01:12 PM IST
ಕೊನೆ ಏಕದಿನ ಆಡಲು ಸಜ್ಜಾದ ಮಾಲಿಂಗ!

ಸಾರಾಂಶ

ಶ್ರೀಲಂಕಾ ದಿಗ್ಗಜ ಬೌಲರ್ ಲಸಿತ್ ಮಾಲಿಂಗ ತಮ್ಮ ವೃತ್ತಿಜೀವನದ ಕಡೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯ ಮಾಲಿಂಗ ಪಾಲಿಗೆ ಕೊನೆಯ ಏಕದಿನ ಏಕದಿನ ಪಂದ್ಯವಾಗಲಿದೆ. ಈ ಕುರಿತಾದ ವಿವರ ಇಲ್ಲಿದೆ. 

ಕೊಲಂಬೊ[ಜು.26]: ಶ್ರೀಲಂಕಾದ ದಿಗ್ಗಜ ವೇಗದ ಬೌಲರ್‌ ಲಸಿತ್‌ ಮಾಲಿಂಗ ಶುಕ್ರವಾರ ತಮ್ಮ ವೃತ್ತಿಬದುಕಿನ ಅಂತಿಮ ಏಕದಿನ ಪಂದ್ಯವನ್ನಾಡಲಿದ್ದು, ಗೆಲುವಿನೊಂದಿಗೆ ದಿಗ್ಗಜ ಕ್ರಿಕೆಟಿಗನಿಗೆ ವಿದಾಯ ನೀಡಲು ಲಂಕಾ ಪಡೆ ರೆಡಿಯಾಗಿದೆ. 

ನಿವೃತ್ತಿ ಖಚಿತಪಡಿಸಿದ ಮಾಲಿಂಗ..! ಆದರೆ..?

ಇಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಅವರು ಘೋಷಿಸಿದ್ದು, ಟಿ20 ಮಾದರಿಯಲ್ಲಿ ಇನ್ನಷ್ಟು ಕಾಲ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. 

ಮುಂದಿನ ವರ್ಷ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಗುರಿ ಹೊಂದಿರುವ ಮಾಲಿಂಗರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸುವುದಾಗಿ ಲಂಕಾ ಕ್ರಿಕೆಟ್‌ ಮಂಡಳಿ ಖಚಿತ ಪಡಿಸಿದೆ. 2011ರಲ್ಲಿ ಮಾಲಿಂಗ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

ಅಂಕಿ-ಅಂಶ:

* ಲಸಿತ್ ಮಾಲಿಂಗ ಇದುವರೆಗೂ ಶ್ರೀಲಂಕಾ ಪರ ಏಕದಿನ ಕ್ರಿಕೆಟ್’ನಲ್ಲಿ 335 ವಿಕೆಟ್ ಕಬಳಿಸಿದ್ದು, ಲಂಕಾ ಪರ ಗರಿಷ್ಠ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿದ್ದಾರೆ.

* ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲಸಿತ್ ಮಾಲಿಂಗ 56 ವಿಕೆಟ್ ಪಡೆಯುವ ಮೂಲಕ ವಿಶ್ವ ಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿದ್ದಾರೆ.

* ಏಕದಿನ ಕ್ರಿಕೆಟ್’ನಲ್ಲಿ 3 ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್ ಎನ್ನುವ ದಾಖಲೆ ಮಾಲಿಂಗ ಹೆಸರಿನಲ್ಲಿದೆ. 
 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ