ಭಾರತ ಹಾಕಿ ತಂಡಕ್ಕೆ ಕನ್ನಡಿಗ ಸುನಿಲ್‌ ವಾಪಸ್‌

By Web DeskFirst Published Jul 26, 2019, 12:29 PM IST
Highlights

ಭಾರತ ತಂಡದ ಅನುಭವಿ ಹಾಕಿ ಆಟಗಾರ, ಕನ್ನಡಿಗ S.V ಸುನಿಲ್‌ ಬರೋಬ್ಬರಿ 9 ತಿಂಗಳುಗಳ ಬಳಿಕ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಜು.26]: ಮಂಡಿ ಗಾಯದಿಂದಾಗಿ 9 ತಿಂಗಳ ಕಾಲ ಭಾರತ ರಾಷ್ಟ್ರೀಯ ಹಾಕಿ ತಂಡದಿಂದ ಹೊರಗಿದ್ದ ತಾರಾ ಸ್ಟ್ರೈಕರ್‌, ಕರ್ನಾಟಕದ ಎಸ್‌.ವಿ.ಸುನಿಲ್‌ ತಂಡಕ್ಕೆ ವಾಪಸಾಗಿದ್ದಾರೆ. 

FIH ಹಾಕಿ ಸೀರೀಸ್‌ ಫೈನಲ್ಸ್‌: ಭಾರತ ಚಾಂಪಿಯನ್‌

ಮುಂದಿನ ತಿಂಗಳು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಪರೀಕ್ಷಾರ್ಥ ಟೂರ್ನಿಗೆ ಗುರುವಾರ ಭಾರತ ತಂಡವನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿತು. ಆ ತಂಡದಲ್ಲಿ ಸುನಿಲ್‌ ಸ್ಥಾನ ಪಡೆದಿದ್ದಾರೆ. 

Hockey India announced the Indian Men's Squad on 25th July for the upcoming Olympic Test Event, scheduled to be played from 17th to 21st August 2019 in Tokyo as part of the preparatory campaign for Olympics: https://t.co/J5VJhqsGcS pic.twitter.com/ivZfN3pFEc

— Hockey India (@TheHockeyIndia)

ನಾಯಕ ಮನ್‌ಪ್ರೀತ್‌ ಸಿಂಗ್‌ ಹಾಗೂ ಗೋಲ್‌ಕೀಪರ್‌ ಶ್ರೀಜೇಶ್‌ಗೆ ವಿಶ್ರಾಂತಿ ನೀಡಲಾಗಿದ್ದು, ಡ್ರ್ಯಾಗ್‌ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಸಿಂಗ್‌ಗೆ ನಾಯಕತ್ವ ವಹಿಸಲಾಗಿದೆ. ಈ ಟೂರ್ನಿ, ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ನೆರವಾಗಿದ್ದು, ಕೆಲ ಹೊಸ ಆಟಗಾರರನ್ನು ಪರೀಕ್ಷಿಸಲು ಅನುಕೂಲವಾಗಲಿದೆ.
 

click me!