
ಬೆಂಗಳೂರು[ಜು.26]: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಪರ್ಸನಲ್ ಬೌಲರ್ ದೊಡ್ಡಬಳ್ಳಾಪುರದ ಮಹೇಶ್ ಕುಮಾರ್‌ಗೆ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆಯಲ್ಲಿ ಅವಕಾಶ ನೀಡಿಲ್ಲ.
RCB ತಂಡಕ್ಕೆ ಬೌಲಿಂಗ್ ಮಾಡಿದ ಕರ್ನಾಟಕದ ಬುಮ್ರಾ..!
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಶೈಲಿಯಲ್ಲಿ ಬೌಲಿಂಗ್ ಮಾಡುವ ಮಹೇಶ್, ಕಳೆದ 3 ವರ್ಷಗಳಿಂದ ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮೀಸಲು ಆಟಗಾರರಾಗಿದ್ದಾರೆ. ರಾಜ್ಯದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಪರ ಮಹೇಶ್ ಆಡುತ್ತಿದ್ದಾರೆ.
RCB ಬುಮ್ರಾಗೆ ಹೆಚ್ಚಿದ ಬೇಡಿಕೆ- ಇತರ IPL ತಂಡಗಳಿಂದ ಆಹ್ವಾನ
12ನೇ ಆವೃತ್ತಿ ಐಪಿಎಲ್ ವೇಳೆ ಮಹೇಶ್, ‘ಜೂನಿಯರ್ ಬುಮ್ರಾ’ ಎಂದೇ ಹೆಸರು ಮಾಡಿದ್ದರು. ‘ಬೆಂಗಳೂರು ವಲಯದಲ್ಲಿ ಬೌಲರ್ ಆಗಿ ಗುರುತಿಸಿಕೊಂಡಿದ್ದರೂ, ಕೆಪಿಎಲ್ ಹರಾಜು ಪ್ರಕ್ರಿಯೆಗೆ ಪರಿಗಣಿಸದೆ ಇರುವುದಕ್ಕೆ ಬೇಸರವಾಗಿದೆ’ ಎಂದು ಮಹೇಶ್ ‘ಕನ್ನಡಪ್ರಭ’ ಕ್ಕೆ ತಿಳಿಸಿದ್ದಾರೆ. 8ನೇ ಆವೃತ್ತಿಯ ಕೆಪಿಎಲ್ ಆ.16ರಿಂದ ಆರಂಭವಾಗಲಿದೆ. ಜು.27ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.