ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ ಲಂಕಾ ವೇಗಿ

By Web DeskFirst Published Jul 25, 2019, 11:56 AM IST
Highlights

ಶ್ರೀಲಂಕಾದ ವೇಗಿ ನುವಾನ್ ಕುಲಸೇಖರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕೊಲಂಬೊ[ಜು.25]: ಶ್ರೀಲಂಕಾದ ವೇಗದ ಬೌಲರ್‌ ನುವಾನ್‌ ಕುಲಸೇಖರ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ. 

ನಿವೃತ್ತಿ ಖಚಿತಪಡಿಸಿದ ಮಾಲಿಂಗ..! ಆದರೆ..?

2009ರ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುಲಸೇಖರ ನಂ.1 ಬೌಲರ್‌ ಎನಿಸಿದ್ದ 37 ವರ್ಷ ವಯಸ್ಸಿನ ಕುಲಸೇಖರ 184 ಏಕದಿನ ಪಂದ್ಯಗಳಿಂದ 199 ವಿಕೆಟ್‌ ಪಡೆದಿದ್ದಾರೆ. ಇನ್ನು 58 ಟಿ20 ಪಂದ್ಯಗಳಲ್ಲಿ 66 ವಿಕೆಟ್‌ ಪಡೆದಿದ್ದಾರೆ. 15 ವರ್ಷ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಕುಲಸೇಖರ 21 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದು 48 ವಿಕೆಟ್‌ ಪಡೆದಿದ್ದಾರೆ.

ಕುಲಸೇಖರ 2017ರ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2018ರ ಮಾರ್ಚ್ ಬಳಿಕ ಕುಲಸೇಖರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿರಲಿಲ್ಲ. ಇನ್ನು 2019ರ ಏಕದಿನ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯಲು ವಿಫಲವಾಗಿದ್ದರು. 2011ರ ಏಕದಿನ ವಿಶ್ವಫೈನಲ್ ಪಂದ್ಯದಲ್ಲಿ ಕುಲಶೇಖರ ಬೌಲಿಂಗ್’ನಲ್ಲೇ ಧೋನಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 28 ವರ್ಷಗಳ ಬಳಿಕ ವಿಶ್ವಕಪ್ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದರು. ಆ ಕ್ಷಣ ಭಾರತ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. 
 

click me!