ಲಂಕಾ ಮೇಲೆ ಬಿಸಿಸಿಐ ಒತ್ತಡ: ಮಾಲಿಂಗ ಮುಂಬೈ ತಂಡಕ್ಕೆ ವಾಪಸ್‌

By Web DeskFirst Published Mar 28, 2019, 1:49 PM IST
Highlights

ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಮನವಿಗೆ ಲಂಕಾ ಕ್ರಿಕೆಟ್ ಮಂಡಳಿ ತಲೆಬಾಗಿದೆ. ಮಾಲಿಂಗ ಅವರನ್ನು ಐಪಿಎಲ್ ಆಡಲು ವಾಪಾಸ್ ಕಳಿಸಬೇಕು ಎಂಬ ಮಾತಿಗೆ ಲಂಕಾ ತುಟಿ ಪಿಟಕ್ ಎನ್ನದೇ ಒಪ್ಪಿಕೊಂಡಿದೆ. 

ಮುಂಬೈ[ಮಾ.28]: ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ದೇಸಿ ಏಕದಿನ ಟೂರ್ನಿಯಲ್ಲಿ ಆಡಬೇಕು ಎನ್ನುವ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ನಿಯಮಕ್ಕೆ ಹೆದರಿ, ಐಪಿಎಲ್‌ಗೆ ಕೈಕೊಟ್ಟು ತವರಿಗೆ ತೆರಳಿದ್ದ ಲಸಿತ್‌ ಮಾಲಿಂಗ ಈಗ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳಿದ್ದಾರೆ. 

ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಮಾಲಿಂಗ..!

ಮಾಲಿಂಗ ಲಂಕಾಕ್ಕೆ ಹೋಗಲಿದ್ದಾರೆ ಎನ್ನುವ ಮಾಹಿತಿ ಮುಂಬೈ ತಂಡಕ್ಕಿರಲಿಲ್ಲ. ಲಂಕಾ ಮಂಡಳಿ ಒಪ್ಪಿಗೆ ಸೂಚಿಸಿದ ನಂತರವೇ ಮಾಲಿಂಗಗೆ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ, ಲಂಕಾ ಕ್ರಿಕೆಟ್‌ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡು, ವೇಗಿಯನ್ನು ವಾಪಸ್‌ ಕಳುಹಿಸುವಂತೆ ಒತ್ತಡ ಹೇರಿತು. ಬಿಸಿಸಿಐ ಒತ್ತಡಕ್ಕೆ ಮಣಿದು ಲಂಕಾ, ಮಾಲಿಂಗಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಿತು ಎಂದು ವರದಿಯಾಗಿದೆ.

IPL ಜೋಶ್: ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 10 ಬೌಲರ್'ಗಳಿವರು

ಐಪಿಎಲ್’ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿರುವ ಲಸಿತ್ ಮಾಲಿಂಗ[154] ಲಭ್ಯತೆ ಮುಂಬೈ ತಂಡದ ಬೌಲಿಂಗ್ ಬಲವನ್ನು ಹೆಚ್ಚಿಸಿದೆ. ಈಗಾಗಲೇ ಡೆಲ್ಲಿ ವಿರುದ್ಧ ತವರಿನಲ್ಲೇ ಮುಖಭಂಗ ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡವು ಇಂದು ಬೆಂಗಳೂರಿನಲ್ಲಿ RCB ತಂಡವನ್ನು ಎದುರಿಸಲು ಸಜ್ಜಾಗಿದೆ. 

click me!