ಕ್ರೀಡಾ ಸಚಿವ ರಿಜಿಜುಗೆ ಶುಭಕೋರಿದ ಕ್ರೀಡಾ ತಾರೆಯರು

Published : Jun 01, 2019, 07:04 PM IST
ಕ್ರೀಡಾ ಸಚಿವ ರಿಜಿಜುಗೆ ಶುಭಕೋರಿದ ಕ್ರೀಡಾ ತಾರೆಯರು

ಸಾರಾಂಶ

ನರೇಂದ್ರ ಮೋದಿ ಸಚಿವ ಸಚಿವ ಸಂಪುಟದಲ್ಲಿ ನೂತನ ಕ್ರೀಡಾ ಸಚಿವರಾಗಿ ಆಯ್ಕೆಯಾದ ಕಿರಣ್ ರಿಜಿಜುಗೆ ದೇಶದ ಕ್ರೀಡಾ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..

ನವದೆಹಲಿ[ಜೂ.01]: ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕ್ರೀಡಾ ಹಾಗೂ ಯುವಜನ ಸೇವಾ ಸಚಿವರಾಗಿ ನೇಮಕವಾದ ಕಿರಣ್ ರಿಜಿಜುಗೆ ಭಾರತದ ಕ್ರೀಡಾಪಟುಗಳು ಶುಭಕೋರಿದ್ದಾರೆ. 

ಹಳೆಯ ಸಂಪುಟದಲ್ಲಿದ್ದ 37 ಸಚಿವರಿಗೆ ಕೊಕ್ 24 ಹೊಸಬರಿಗೆ ಸ್ಥಾನ

ಈ ಮೊದಲು ರಾಜ್ಯವರ್ಧನ್ ಸಿಂಗ್ ರಾಥೋಡ್ ನಿರ್ವಹಿಸುತ್ತಿದ್ದ ಖಾತೆಯನ್ನು ಈ ಬಾರಿ 47 ವರ್ಷದ ರಿಜಿಜು ನಿರ್ವಹಿಸಲಿದ್ದಾರೆ. ರಿಜಿಜುಗೆ ಕ್ರೀಡಾ ಖಾತೆ ಹೆಗಲಿಗೆ ಬೀಳುತ್ತಿದ್ದಂತೆ ಟ್ವೀಟ್ ಮಾಡಿದ ರಾಥೋಡ್, ನಾನು ಮೊದಲಿಗೆ ಕ್ರೀಡಾಪಟು, ಆ ಬಳಿಕ ಕ್ರೀಡಾ ಸಚಿವ. ನಾನು ಅಥ್ಲೀಟ್’ಗಳ ಪ್ರದರ್ಶನ ಸುಧಾರಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಮೋದಿ ಮಾರ್ಗದಲ್ಲಿ ಈ ಮಿಷನ್ ಮುಂದುವರೆಸಲು ಸೂಕ್ತ ವ್ಯಕ್ತಿಯಾದ ಕಿರಣ್ ರಿಜಿಜು ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯವರ್ಧನ್ ಸಿಂಗ್ ಮಾತ್ರವಲ್ಲದೇ ದೇಶದ ಸ್ಟಾರ್ ಕ್ರೀಡಾಪಟುಗಳಾದ ಬಾಕ್ಸರ್ ಮೇರಿ ಕೋಮ್, ಮೀರಾಬಾಯಿ ಚಾನು, ಅಥ್ಲೀಟ್’ಗಳಾದ ಹಿಮಾದಾಸ್, ದೀಪಾ ಕರ್ಮಕರ್, ಮನೀಕಾ ಬಾತ್ರ ಶುಭ ಕೋರಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
John Cena ಕೊನೆಯ ಮ್ಯಾಚ್ ಯಾವಾಗ? ಎದುರಾಳಿ ಯಾರು? ಲೈವ್ ಸ್ಟ್ರೀಮಿಂಗ್ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್