ವಿಜೇಂದರ್‌ಗೆ ನನ್ನ ಕಂಡ್ರೆ ಭಯ ಎಂದ ಬಾಕ್ಸರ್‌ ಆಮೀರ್‌

By Web Desk  |  First Published Jun 1, 2019, 2:24 PM IST

ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಮೇಲೆ ಪಾಕ್ ಮೂಲದ ಬ್ರಿಟಿಷ್‌ ಬಾಕ್ಸರ್‌ ಆಮೀರ್‌ ಖಾನ್‌ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದಾನೆ. ಯಾಕೆ ಹೀಗೆ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್...


ನವದೆಹಲಿ[ಜೂ.01]: ಪಾಕಿಸ್ತಾನ ಮೂಲದ ಬ್ರಿಟಿಷ್‌ ಬಾಕ್ಸರ್‌ ಆಮೀರ್‌ ಖಾನ್‌ ಮತ್ತೊಮ್ಮೆ ಕ್ಯಾತೆ ತೆಗೆದಿದ್ದು, 2008ರ ಒಲಿಂಪಿಕ್ಸ್‌ ಪದಕ ವಿಜೇತ, ವೃತ್ತಿಪರ ಬಾಕ್ಸಿಂಗ್‌ ತಾರೆ ವಿಜೇಂದರ್‌ ಸಿಂಗ್‌ ವಿರುದ್ಧ ಹರಿಹಾಯ್ದಿದ್ದಾರೆ.

‘ವಿಜೇಂದರ್‌ಗೆ ನನ್ನನ್ನು ಕಂಡರೆ ಭಯ. ಅದಕ್ಕೆ ನನ್ನ ವಿರುದ್ಧ ಪಂದ್ಯವಾಡಲು ಹಿಂಜರಿಯುತ್ತಿದ್ದಾರೆ’ ಎಂದಿದ್ದಾರೆ. ವಿಜೇಂದರ್‌ ಹಾಗೂ ಆಮೀರ್‌ ನಡುವಿನ ಪಂದ್ಯ ಹಲವು ಬಾರಿ ವಿವಿಧ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದೆ. ವಿಜೇಂದರ್‌ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯ ಓಟ ಮುಂದುವರಿಸಿದ್ದು, ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

Tap to resize

Latest Videos

ಪಾಕಿಸ್ತಾನದ ರಾವುಲ್’ಪಿಂಡಿಯಲ್ಲಿ ಜನಿಸಿದ ಬ್ರಿಟಿಷ್‌ ಬಾಕ್ಸರ್‌ ಆಮೀರ್‌ ಖಾನ್‌ 17 ವರ್ಷದವರಿರುವಾಗಲೇ 2004ರ ಅಥೆನ್ಸ್ ಒಲಿಂಪಿಕ್ಸ್’ನಲ್ಲಿ ಬೆಳ್ಳಿಪದಕ ಜಯಿಸಿದ್ದರು.

click me!