2023ರ ಏಪ್ರಿಲ್ ತಿಂಗಳು ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಜ್ವರದಲ್ಲಿ ಮುಳುಗಿಹೋಗುವಂತೆ ಮಾಡಿತ್ತು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಗಮನ ಸೆಳೆದ ಕ್ರೀಡಾಚಟುವಟಿಕೆಗಳ ಒಂದು ಝಲಕ್ ಇಲ್ಲಿದೆ ನೋಡಿ.
ಬೆಂಗಳೂರು: 2023ರ ಏಪ್ರಿಲ್ ತಿಂಗಳು ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಜ್ವರದಲ್ಲಿ ಮುಳುಗಿಹೋಗುವಂತೆ ಮಾಡಿತ್ತು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಗಮನ ಸೆಳೆದ ಕ್ರೀಡಾಚಟುವಟಿಕೆಗಳ ಒಂದು ಝಲಕ್ ಇಲ್ಲಿದೆ ನೋಡಿ.
IPL 2023 ರಜತ್ ಪಾಟೀದಾರ್ ಔಟ್, ಆರ್‌ಸಿಬಿ ತಂಡದಲ್ಲಿ ಕನ್ನಡಿಗನಿಗೆ ಜಾಕ್‌ಪಾಟ್..!
undefined
ಹಿಮ್ಮಡಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಜತ್ ಪಾಟೀದಾರ್ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಬಿದ್ದರು. ಪಾಟೀದಾರ್ ಬದಲಿಗೆ ಆರ್‌ಸಿಬಿ ಫ್ರಾಂಚೈಸಿಯು ಕನ್ನಡದ ವೇಗಿ ವೈಶಾಕ್ ವಿಜಯ್‌ಕುಮಾರ್‌ಗೆ ಮಣೆಹಾಕಿತು.
ಭಾರತ ಹಾಕಿ ತಂಡದಲ್ಲಿ ರಾಣಿ ರಾಂಪಾಲ್‌ಗಿಲ್ಲ ಸ್ಥಾನ..!
ಏಷ್ಯನ್ ಗೇಮ್ಸ್ ಪೂರ್ವಸಿದ್ಧತೆಗಾಗಿ ಹಾಕಿ ಇಂಡಿಯಾ, 33 ಆಟಗಾರ್ತಿಯರ ಭಾರತ ಮಹಿಳಾ ತಂಡವನ್ನು ಪ್ರಕಟಗೊಳಿಸಿದ್ದು, ಮಾಜಿ ನಾಯಕಿ ರಾಣಿ ರಾಂಪಾಲ್ ಸ್ಥಾನ ಪಡೆಯಲು ವಿಫಲವಾಗಿದ್ದರು.
ಆರ್ಲಿಯಾನ್ಸ್ ಮಾಸ್ಟರ್ಸ್ ಪ್ರಶಸ್ತಿ ಗೆದ್ದ 21 ವರ್ಷದ ಪ್ರಿಯಾನ್ಶು ರಾಜವಾತ್
ಭಾರತದ ಯುವ ಶಟ್ಲರ್ ಪ್ರಿಯಾನ್ಶು ರಾಜವಾತ್ ಆರ್ಲಿಯಾನ್ಸ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಚೊಚ್ಚಲ ಬಾರಿ ಸೂಪರ್ 300 ವಿಶ್ವ ಟೂರ್ ಸ್ಪರ್ಧೆಯಲ್ಲಿ ಫೈನಲ್ಗೇರಿದ್ದ ಪ್ರಿಯಾನ್ಶು ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
Sports Flashback: ನೀಗಿದ ಕೊಹ್ಲಿ ಟೆಸ್ಟ್ ಶತಕದ ಬರ, ಮಾರ್ಚ್‌ನಲ್ಲಿ WPL & IPL ಕಲರವ..!
ದೇಸಿ ಕ್ರಿಕೆಟ್ ಋುತು ಆರಂಭ: ರಣಜಿ ಟ್ರೋಫಿ ಟೂರ್ನಿಯ ವೇಳಾಪಟ್ಟಿ ಪ್ರಕಟ
2023-24ರ ದೇಸಿ ಋುತುವಿನ ವೇಳಾಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದ್ದು ಜೂನ್ 28ಕ್ಕೆ ದುಲೀಪ್ ಟ್ರೋಫಿಯೊಂದಿಗೆ ಋುತು ಆರಂಭಗೊಳ್ಳಲಿದೆ. ಇದೇ ವೇಳೆ 2019-20ರ ಬಳಿಕ ಮೊದಲ ಬಾರಿ ದೇವಧರ್ ಟ್ರೋಫಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿತ್ತು.
ಮೈಕಲ್ ಜೋರ್ಡನ್ ಶೂ 18 ಕೋಟಿ ರುಪಾಯಿಗೆ ಹರಾಜು!
ಬಾಸ್ಕೆಟ್ಬಾಲ್ ದಿಗ್ಗಜ ಮೈಕಲ್ ಜೋರ್ಡಾನ್ 1998ರ ಎನ್ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್ ಜೋರ್ಡಾನ್ 13’ ಶೂ ಹರಾಜಿನಲ್ಲಿ ದಾಖಲೆಯ 2.2 ಮಿಲಿಯನ್ ಡಾಲರ್(ಸುಮಾರು 18 ಕೋಟಿ ರುಪಾಯಿ)ಗೆ ಮಾರಾಟವಾಗಿದೆ. ಈ ಮೂಲಕ ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ ಎನಿಸಿಕೊಂಡಿತು.
Pro Kabaddi League: ಬೆಂಗಳೂರು ಬುಲ್ಸ್‌ಗೆ ಸತತ ಎರಡನೇ ಜಯ..!
IPL 2023: ಐಪಿಎಲ್‌ಗೆ ಅರ್ಜುನ್ ತೆಂಡುಲ್ಕರ್ ಪಾದಾರ್ಪಣೆ
16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕೆಕೆಆರ್ ಎದುರು ಐಪಿಎಲ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು.
ಬ್ರಿಜ್‌ಭೂಷಣ್ ವಿರುದ್ದ ಕುಸ್ತಿಪಟುಗಳಿಂದ ಮತ್ತೆ ಪ್ರತಿಭಟನೆ..!
ಭಾರತದ ಅಗ್ರಕುಸ್ತಿಪಟುಗಳಾದ ಒಲಿಂಪಿಕ್ ಪದಕ ವಿಜೇತರಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಪೋಗಾಟ್ ಸೇರಿದಂತೆ ಹಲವು ಕುಸ್ತಿಪಟುಗಳು ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಹಾಗೂ ಮೇರಿ ಕೋಮ್ ನೇತೃತ್ವದ ಸಮಿತಿಯು ಕ್ರೀಡಾ ಸಚಿವಾಲಯಕ್ಕೆ ನೀಡಿದ್ದ ವರದಿಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿ ನವದೆಹಲಿಯ ಜಂತರ್ ಮಂತರ್ನಲ್ಲಿ ಮತ್ತೆ ಧರಣಿ ಆರಂಭಿಸಿದರು.
17 ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ..!
ಭಾರತ ಮಹಿಳಾ ಕ್ರಿಕೆಟಿಗರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, 17 ಆಟಗಾರ್ತಿಯರಿಗೆ ಸ್ಥಾನ ದೊರೆತಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ, ದೀಪ್ತಿ ಶರ್ಮಾಗೆ ‘ಎ’ ದರ್ಜೆಯಲ್ಲಿ ಸ್ಥಾನ ಸಿಕ್ಕಿದ್ದು, ವಾರ್ಷಿಕ 50 ಲಕ್ಷ ರು. ವೇತನ ಪಡೆಯಲಿದ್ದಾರೆ.
ಸಾತ್ವಿಕ್-ಚಿರಾಗ್ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಸ್!
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಪುರುಷರ ಡಬಲ್ಸ್ನಲ್ಲಿ ಚಿನ್ನ ಗೆಲ್ಲುವ ಭಾರತ 6 ದಶಕಗಳ ಕನಸು ಕೊನೆಗೂ ನನಸಾಗಿದೆ. ದೇಶದ ತಾರಾ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಐತಿಹಾಸಿಕ ಬಂಗಾರದ ಪದಕ ಗೆದ್ದಿದ್ದು, 58 ವರ್ಷಗಳ ಬಳಿಕ ದೇಶಕ್ಕೆ ಯಾವುದೇ ವಿಭಾಗದಲ್ಲಿ ಸಿಕ್ಕ ಮೊದಲ ಚಿನ್ನ ಎನಿಸಿಕೊಂಡಿತು.