ಧೋನಿ ಬೆನ್ನಿಗೆ ನಿಂತ ದಾದಾ

Published : Apr 14, 2019, 02:05 PM IST
ಧೋನಿ ಬೆನ್ನಿಗೆ ನಿಂತ ದಾದಾ

ಸಾರಾಂಶ

ಅಂಪೈರ್ ನಿರ್ಣಯ ಪ್ರಶ್ನಿಸಿ ಮೈದಾನ ಪ್ರವೇಶಿಸಿದ್ದ ಧೋನಿಯ ನಡೆಯನ್ನು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ. ದಾದಾ ಏನಂದ್ರು ನೀವೇ ನೋಡಿ...

ಕೋಲ್ಕತಾ[ಏ.14]: ನೋಬಾಲ್‌ ವಿವಾದ ಪ್ರಕರಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌.ಧೋನಿ ಮೈದಾನಕ್ಕೆ ನುಗ್ಗಿ ಅಂಪೈರ್‌ ಜತೆ ವಾಗ್ವಾದ ನಡೆಸಿದ್ದನ್ನು, ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ. 

ಧೋನಿಗೆ 2-3 ಪಂದ್ಯಗಳಿಗೆ ನಿಷೇಧ ಹೇರಬೇಕಿತ್ತು ಎಂದ ಸೆಹ್ವಾಗ್‌..!

‘ಧೋನಿಯೂ ಒಬ್ಬ ಮನುಷ್ಯ, ಸಿಟ್ಟಿನಿಂದ ಈ ರೀತಿ ಮಾಡಿದ್ದಾರೆ’ ಎಂದು ಗಂಗೂಲಿ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗೂಲಿ, ‘ಎಲ್ಲರೂ ಮನುಷ್ಯರೇ. ಆದರೆ ಧೋನಿಯ ಸ್ಪರ್ಧಾತ್ಮಕ ಗುಣವನ್ನು ಮೆಚ್ಚಿಕೊಳ್ಳಬೇಕು. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ’ ಎಂದಿದ್ದಾರೆ. 

ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದ ವೇಳೆ ಅಂಪೈರ್‌ ಮೊದಲು ನೋಬಾಲ್‌ ನೀಡಿ, ಬಳಿಕ ನಿರ್ಧಾರ ಹಿಂಪಡೆದಿದ್ದಕ್ಕೆ ಧೋನಿ ಮೈದಾನಕ್ಕೆ ನುಗ್ಗಿ ವಾಗ್ವಾದ ನಡೆಸಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cricket: ಶ್ರೇಯಸ್ ಅಯ್ಯರ್ ಸೇರಿ 8 ಆಟಗಾರರು ಟೀಮ್ ಇಂಡಿಯಾದಿಂದ ಔಟ್! ಕಾರಣವೇನು?
ರೋಹಿತ್ ಶರ್ಮಾ ಬಚಾವ್, ಆದ್ರೆ ಈ 5 ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರು 2027ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಔಟ್! ಲಿಸ್ಟ್‌ನಲ್ಲಿದೆ ಅಚ್ಚರಿ ಹೆಸರು