ವಿಶ್ವ ನಂ.3 ಒಕುಹಾರ ವಿರುದ್ಧ ಕಳೆದೆರಡು ಮುಖಾಮುಖಿಗಳಲ್ಲಿ ಜಯಿಸಿದ್ದ ಸಿಂಧು, ಈ ಪಂದ್ಯಕ್ಕೂ ಮುನ್ನ 7-6 ಗೆಲುವು-ಸೋಲಿನ ದಾಖಲೆ ಹೊಂದಿದ್ದರು. 2017ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಬಳಿಕ ಈ ಇಬ್ಬರು 6 ಬಾರಿ ಪರಸ್ಪರ ಎದುರಾಗಿದ್ದು, 4ರಲ್ಲಿ ಸಿಂಧು ಜಯಗಳಿಸಿದ್ದರು.
ಸಿಂಗಾಪುರ[ಏ.14]: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ದಿಢೀರನೆ ಲಯ ಕಳೆದುಕೊಂಡಿದ್ದಾರೆ. ಶನಿವಾರ ಇಲ್ಲಿ ನಡೆದ ಸಿಂಗಾಪುರ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಜಪಾನ್‌ನ ನಜೊಮಿ ಒಕುಹಾರ ವಿರುದ್ಧ ಸಿಂಧು 7-21, 11-21 ನೇರ ಗೇಮ್‌ಗಳಲ್ಲಿ ಹೀನಾಯ ಸೋಲು ಅನುಭವಿಸಿದರು. ಸಿಂಧು ಹೊರಬೀಳುತ್ತಿದ್ದಂತೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ವಿಶ್ವ ನಂ.3 ಒಕುಹಾರ ವಿರುದ್ಧ ಕಳೆದೆರಡು ಮುಖಾಮುಖಿಗಳಲ್ಲಿ ಜಯಿಸಿದ್ದ ಸಿಂಧು, ಈ ಪಂದ್ಯಕ್ಕೂ ಮುನ್ನ 7-6 ಗೆಲುವು-ಸೋಲಿನ ದಾಖಲೆ ಹೊಂದಿದ್ದರು. 2017ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಬಳಿಕ ಈ ಇಬ್ಬರು 6 ಬಾರಿ ಪರಸ್ಪರ ಎದುರಾಗಿದ್ದು, 4ರಲ್ಲಿ ಸಿಂಧು ಜಯಗಳಿಸಿದ್ದರು. ಹೀಗಾಗಿ ಈ ಪಂದ್ಯದಲ್ಲೂ ಸಿಂಧು ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿಕೊಂಡಿದ್ದರು.
undefined
ಶುಕ್ರವಾರ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ನೆಹ್ವಾಲ್ ಮೇಲೆ ಸವಾರಿ ಮಾಡಿದ್ದ ಒಕುಹಾರ, ಶನಿವಾರ ಸಿಂಧು ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಮೊದಲ ಗೇಮ್‌ನಲ್ಲಿ ಸುಲಭವಾಗಿ ಸೋಲೊಪ್ಪಿಕೊಂಡ ಭಾರತೀಯ ಆಟಗಾರ್ತಿ, ದ್ವಿತೀಯ ಗೇಮ್‌ನಲ್ಲಿ ತಕ್ಕಮಟ್ಟಿಗಿನ ಪ್ರತಿರೋಧ ತೋರಿದರಾದರೂ, ಗೇಮ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...