ವಿರೇಂದ್ರ ಸೆಹ್ವಾಗ್'ಗೆ ಓಪನ್ ಚಾಲೆಂಜ್ ಮಾಡಿದ ಸೌರವ್ ಗಂಗೂಲಿ: ಜೂನ್ 20 ರಂದು ನಡೆಯಲಿದೆ 'ಮಹಾಯುದ್ಧ'

Published : Jun 05, 2017, 04:01 PM ISTUpdated : Apr 11, 2018, 12:50 PM IST
ವಿರೇಂದ್ರ ಸೆಹ್ವಾಗ್'ಗೆ ಓಪನ್ ಚಾಲೆಂಜ್ ಮಾಡಿದ ಸೌರವ್ ಗಂಗೂಲಿ: ಜೂನ್ 20 ರಂದು ನಡೆಯಲಿದೆ 'ಮಹಾಯುದ್ಧ'

ಸಾರಾಂಶ

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಜೂನ್ 20 ರಂದು ಇಂಗ್ಲೆಂಡ್'ನ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದ ಬಳಿಕ ಟೀಂ ಇಂಡಿಯಾದ ಇಬ್ಬರು ಮಾಜಿ ಕ್ರಿಕೆಟ್ ದಿಗ್ಗಜರು, ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ನಡುವೆ 'ಮಹಾಯುದ್ಧ' ನಡೆಯಲಿದೆ. ಆದರೆ ಈ ಪೈಪೋಟಿ ಕ್ರಿಕೆಟ್ ಪಂದ್ಯವಲ್ಲ, ಬದಲಾಗಿ 100 ಮೀಟರ್ ಓಟದ ಸ್ಪರ್ಧೆ ಆಗಿದೆ. ಇದ್ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ಇಂಗ್ಲೆಂಡ್(ಜೂ.05): ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಜೂನ್ 20 ರಂದು ಇಂಗ್ಲೆಂಡ್'ನ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದ ಬಳಿಕ ಟೀಂ ಇಂಡಿಯಾದ ಇಬ್ಬರು ಮಾಜಿ ಕ್ರಿಕೆಟ್ ದಿಗ್ಗಜರು, ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ನಡುವೆ 'ಮಹಾಯುದ್ಧ' ನಡೆಯಲಿದೆ. ಆದರೆ ಈ ಪೈಪೋಟಿ ಕ್ರಿಕೆಟ್ ಪಂದ್ಯವಲ್ಲ, ಬದಲಾಗಿ 100 ಮೀಟರ್ ಓಟದ ಸ್ಪರ್ಧೆ ಆಗಿದೆ. ಇದ್ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ವಾಸ್ತವವಾಗಿ ನಿನ್ನೆ ನಡೆದ ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ನಡುವೆ ನಡೆದ ಪಂದ್ಯದ ವೇಳೆ ಇಬ್ಬರೂ ಸಂಭಾಷಣೆ ನಡೆಸುತ್ತಿದ್ದರು. ಈ ವೇಳೆ ಗಂಗೂಲಿಯ ವೃತ್ತಿ ಬದುಕಿನ ಸಾಧನೆಯ ಅಂಕಿ ಅಂಶಗಳ ವಿಚಾರವಾಗಿ ವ್ಯಂಗ್ಯವಾಡಿದ್ದಾರೆ. ಇದೇ ಕಾರಣದಿಂದ ಕ್ರಿಕೆಟ್ ದಾದಾ ಸೌರವ್ ಗಂಗೂಲಿ ಸೆಹ್ವಾಗ್'ಗೆ ಓಪನ್ ಚಾಲೆಂಜ್ ಮಾಡಿದ್ದಾರೆ.

ಸೆಹ್ವಾಗ್'ಗೆ ಸವಾಲೆಸೆದಿರುವ ಗಂಗೂಲಿ ಜೂನ್ 20ರಂದು ಅಂದರೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಬಳಿಕ 100 ಮೀಟರ್ ಓಟದ ಚಾಲೆಂಜ್ ಮಾಡಿದ್ದಾರೆ. ಚಾಲೆಂಜ್ ಮಾಡಿ ಸುಮ್ಮನಾಗದ ಗಂಗೂಲಿ, ಸೆಹ್ವಾಗ್ ಫಿಟ್ನೆಸ್ ಬಗ್ಗೆಯೂ ಲೇವಡಿ ಮಾಡುತ್ತಾ ನಿಮಗಾಗಿ ಇಬ್ಬರು ಫಿಜಿಯೋಗಳನ್ನೂ ನೇಮಿಸುತ್ತೇವೆ ಎಂದಿದ್ದಾರೆ.

ಇಬ್ಬರು ಕ್ರಿಕೆಟ್ ದಿಗ್ಗಜರ ನಡುವೆ ಕಮೆಂಟ್ರಿ ಬಾಕ್ಸ್'ನಲ್ಲಿ ಇಂತಹುದ್ದೊಂದು ಮಾತುಕತೆ ನಡೆಯುತ್ತಿದ್ದಾಗಲೇ ಪಾಕಿಸ್ತಾನದ ಎರಡು ವಿಕೆಡ್'ಗಳು ಮುರಿದು ಬಿದ್ದಿವೆ. ಹೀಗಾಗಿ ಈ ಮಾತುಕತೆಯ ನಡುವೆಯೇ ಗಂಗೂಲಿ ಪಾಕಿಸ್ತಾನದ ಬ್ಯಾಟ್ಸ್'ಮನ್'ಗಳ ಬಗ್ಗೆ ಮಾತರಂಭಿಸಿದ್ದಾರೆ. ಆದರೆ ಮತ್ತೆ ಅರ್ಧಕ್ಕೆ ನಿಂತ ಮಾತುಕತೆಯನ್ನು ಮತ್ತೆ ಆರಂಭಿಸಿದ ದಾದಾ 70 ಮೀಟರ್ ಓಡಲು ಸೂಚಿಸಿದ್ದಾರೆ.

ಇನ್ನು ಈ ಕ್ರಿಕೆಟ್ ದಿಗ್ಗಜರ ನಡುವೆ ನಿಜಕ್ಕೂ ಪೈಪೋಟಿ ನಡೆಯುತ್ತಾ ಅಥವಾ ಕೇವಲ ಹಾಸ್ಯವಾಗಿಯೇ ಉಳಿಯುತ್ತಾ ಕಾದು ನೊಡಬೇಕಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!