ವಿಶ್ವಚಾಂಪಿಯನ್'ಶಿಪ್'ಗೆ ಪ್ರವೇಶ ಪಡೆದು ಇತಿಹಾಸ ನಿರ್ಮಿಸಿದ ಅನ್ನುರಾಣಿ ಮತ್ತು ನಿರ್ಮಲಾ

Published : Jun 05, 2017, 02:55 PM ISTUpdated : Apr 11, 2018, 12:45 PM IST
ವಿಶ್ವಚಾಂಪಿಯನ್'ಶಿಪ್'ಗೆ ಪ್ರವೇಶ ಪಡೆದು ಇತಿಹಾಸ ನಿರ್ಮಿಸಿದ ಅನ್ನುರಾಣಿ ಮತ್ತು ನಿರ್ಮಲಾ

ಸಾರಾಂಶ

ತಮ್ಮ ಇಬ್ಬರು ಶಿಷ್ಯಂದಿರು ವಿಶ್ವಚಾಂಪಿಯನ್'ಶಿಪ್'ಗೆ ಅರ್ಹತೆ ಗಿಟ್ಟಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೋಚ್ ಕಾಶೀನಾಥ್ ನಾಯ್ಕ್, ಭಾರತೀಯ ಕೋಚ್'ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿ ಎಂದು ಕೋರಿದ್ದಾರೆ. ಭಾರತೀಯ ಕೋಚ್ ಮೇಲೆ ಇನ್ನಷ್ಟು ಭರವಸೆ ನೀಡಿದರೆ ಒಲಿಂಪಿಕ್ಸ್'ನಲ್ಲಿ ಭಾರತಕ್ಕೆ ಹೆಚ್ಚು ಪದಕಗಳು ಪ್ರಾಪ್ತವಾಗುತ್ತವೆ; ಒಳ್ಳೆಯ ಭಾರತೀಯ ಕೋಚ್'ಗಳು ರೂಪುಗೊಳ್ಳುತ್ತಾರೆ ಎಂದು ಕಾಶಿನಾಥ್ ಅಭಿಪ್ರಾಯಪಟ್ಟಿದ್ದಾರೆ.

ಪಾಟಿಯಾಲ(ಜೂನ್ 05): ಭಾರತದ ಇಬ್ಬರು ಅಥ್ಲೀಟ್'ಗಳು ಲಂಡನ್'ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್'ಶಿಪ್'ಗೆ ಕ್ವಾಲಿಫೈ ಆಗಿದ್ದಾರೆ. ನಿನ್ನೆ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ನಲ್ಲಿ ಜಾವೆಲಿನ್ ಎಸೆತಗಾರ್ತಿ ಅನ್ನುರಾಣಿ ಮತ್ತು 400 ಮೀಟರ್ ಓಟಗಾರ್ತಿ ನಿರ್ಮಲಾ ಶೋರಾನ್ ಹೊಸ ದಾಖಲೆಗಳೊಂದಿಗೆ ವರ್ಲ್ಡ್'ಚಾಂಪಿಯನ್'ಶಿಪ್'ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಕರ್ನಾಟಕದ ಹುಡುಗ ಹಾಗೂ ಮಾಜಿ ಜಾವೆಲಿನ್ ಅಥ್ಲೀಟ್ ಕಾಶಿನಾಥ್ ನಾಯ್ಕ್'ರ ಗರಡಿಯಲ್ಲಿ ಪಳಗಿರುವ ಅನ್ನು ರಾಣಿ ನಿನ್ನೆಯ ಟೂರ್ನಿಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಮೊದಲ ಯತ್ನದಲ್ಲೇ ಅನ್ನುರಾಣಿ 61.86 ಮೀಟರ್ ದೂರ ಎಸೆದಿದ್ದಾರೆ. ವಿಶ್ವಚಾಂಪಿಯನ್'ಶಿಪ್ ಅರ್ಹತೆಗೆ ನಿಗದಿಯಾಗಿದ್ದ 61.40 ಮೀಟರ್ ದೂರವನ್ನು ಯಶಸ್ವಿಯಾಗಿ ದಾಟಿದ್ದಾರೆ. ಕಳೆದ ವರ್ಷ ಲಕ್ನೋದಲ್ಲಿ 60.01 ಮೀಟರ್ ದೂರ ಎಸೆದು ಅವರೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಅನ್ನು ರಾಣಿ ಸುಲಭವಾಗಿ ಮುರಿದುಹಾಕಿದ್ದಾರೆ. ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ ಹರಿಯಾಣದ ಪೂನಮ್ ರಾಣಿ ಸಿಂಗ್ ಕೇವಲ 55.79 ಮೀಟರ್ ದೂರಕ್ಕೆ ಜಾವೆಲಿನ್'ನ್ನು ಎಸೆದಿದ್ದರು.

ಪ್ರಸಕ್ತ, ಚೆಕ್ ಗಣರಾಜ್ಯದ ಬಾರ್ಬೊರಾ ಪೊಟಾಕೊವಾ 2008ರಲ್ಲಿ 72.28 ಮೀಟರ್ ದೂರಕ್ಕೆ ಎಸೆದದ್ದು ಇದೂವರೆಗೆ ವಿಶ್ವದಾಖಲೆಯಾಗಿ ಉಳಿದುಕೊಂಡಿದೆ.

ಕಾಶೀನಾಥ್ ನಾಯ್ಕ್'ರ ಗರಡಿಯಲ್ಲೇ ಪಳಗಿದ ಮತ್ತೊಬ್ಬ ಅಥ್ಲೀಟ್ ದವೀಂದರ್ ಸಿಂಗ್ ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ದವಿಂದರ್ ಸಿಂಗ್ 83.82 ಮೀಟರ್ ದೂರ ಎಸೆದಿದ್ದಾರೆ. ವರ್ಲ್ಡ್ ಚಾಂಪಿಯನ್'ಶಿಪ್ ಅರ್ಹತೆಯ ಗಡಿಯನ್ನು ಎರಡನೇ ಬಾರಿ ದಾಟಿದ್ದಾರೆ. ಇಂಡಿಯನ್ ಗ್ರ್ಯಾನ್ ಪ್ರೀ ಕೂಟದಲ್ಲಿ 84.57 ಮೀಟರ್ ದೂರ ಎಸೆದು ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ.

ನಿರ್ಮಲಾ ಭರ್ಜರಿ ಓಟ:
ನಿನ್ನೆಯ ಕೂಟದಲ್ಲಿ ಮತ್ತೊಂದು ಗಮನಾರ್ಹ ಸಾಧನೆ ಬಂದಿದ್ದು ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ. ಕರ್ನಾಟಕದ ಎಂಆರ್ ಪೂವಮ್ಮ ಅವರಿಂದ ಪ್ರಬಲ ಪ್ರತಿಸ್ಪರ್ಧೆಯನ್ನೂ ಹಿಂದಿಕ್ಕಿ ನಿರ್ಮಲಾ ಶೇವೊರನ್ ಅಗ್ರಸ್ಥಾನ ಗಳಿಸಿದರು. 400 ಮೀಟರ್ ದೂರವನ್ನು 51.28 ಸೆಕೆಂಡ್'ಗಳಲ್ಲಿ ಮುಟ್ಟುವ ಮೂಲಕ ವಿಶ್ವಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆದರು. ನಿರ್ಮಲಾ ಅವರು ರಾಷ್ಟ್ರೀಯ ದಾಖಲೆ ಸ್ಥಾಪಿಸದಿದ್ದರೂ ಹೊಸ ಕೂಟ ದಾಖಲೆ ಸ್ಥಾಪಿಸಿದ ಗೌರವ ಪಡೆದರು. ಕೊಡಗಿನ ಹುಡುಗಿ ಪೂವಮ್ಮ 52.70 ಸೆಕೆಂಡ್'ನಲ್ಲಿ ಓಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ದುತೀ ಚಾಂದ್ ಚಿನ್ನದ ಪದಕ ಗೆದ್ದರೂ ಸ್ವಲ್ಪದರಲ್ಲಿ ವಿಶ್ವಚಾಂಪಿಯನ್'ಶಿಪ್'ಗೆ ಅರ್ಹತೆ ಗಿಟ್ಟಿಸಲು ವಿಫಲರಾದರು.

ಕಾಶೀನಾಥ್ ಸಂತಸ:
ತಮ್ಮ ಇಬ್ಬರು ಶಿಷ್ಯಂದಿರು ವಿಶ್ವಚಾಂಪಿಯನ್'ಶಿಪ್'ಗೆ ಅರ್ಹತೆ ಗಿಟ್ಟಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೋಚ್ ಕಾಶೀನಾಥ್ ನಾಯ್ಕ್, ಭಾರತೀಯ ಕೋಚ್'ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿ ಎಂದು ಕೋರಿದ್ದಾರೆ. ಭಾರತೀಯ ಕೋಚ್ ಮೇಲೆ ಇನ್ನಷ್ಟು ಭರವಸೆ ನೀಡಿದರೆ ಒಲಿಂಪಿಕ್ಸ್'ನಲ್ಲಿ ಭಾರತಕ್ಕೆ ಹೆಚ್ಚು ಪದಕಗಳು ಪ್ರಾಪ್ತವಾಗುತ್ತವೆ; ಒಳ್ಳೆಯ ಭಾರತೀಯ ಕೋಚ್'ಗಳು ರೂಪುಗೊಳ್ಳುತ್ತಾರೆ ಎಂದು ಕಾಶಿನಾಥ್ ಅಭಿಪ್ರಾಯಪಟ್ಟಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್‌ನಿಂದ ಮೊರಿಸ್‌ವರೆಗೆ, ಐಪಿಎಲ್‌ ಮಿನಿ ಹರಾಜಿನ ಅತ್ಯಂತ ದುಬಾರಿ ಪ್ಲೇಯರ್ಸ್‌!
ಕಡಿಮೆ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಜಾರಿದ ಸ್ಟಾರ್ ಆಲ್ರೌಂಡರ್! ಹಾಲಿ ಚಾಂಪಿಯನ್ ಬೆಂಗಳೂರು ತಂಡಕ್ಕೆ ಜಾಕ್‌ಪಾಟ್