ಟೆನಿಸ್ ವೃತ್ತಿ ಬದುಕಿಗೆ ಸೋಮ್'ದೇವ್ ವಿದಾಯ

Published : Jan 01, 2017, 08:17 AM ISTUpdated : Apr 11, 2018, 01:01 PM IST
ಟೆನಿಸ್ ವೃತ್ತಿ ಬದುಕಿಗೆ ಸೋಮ್'ದೇವ್ ವಿದಾಯ

ಸಾರಾಂಶ

2008ರಲ್ಲಿ ಟೆನಿಸ್ ಅಂಗಣಕ್ಕೆ ಕಾಲಿರಿಸಿದ ಸೋಮ್‌ದೇವ್ ಅತಿ ಕಿರಿಯ ವಯಸ್ಸಿನಲ್ಲಿಯೇ ಡೇವಿಸ್ ಕಪ್ ತಂಡದ ನಾಯಕರಾಗಿದ್ದರು.

ನವದೆಹಲಿ(ಜ.01): ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಯುವ ಟೆನಿಸ್ ಆಟಗಾರ ಸೋಮ್‌'ದೇವ್ ದೇವವರ್ಮನ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ಈ ಮೂಲಕ ಚೆನ್ನೈ ಓಪನ್ ಟೆನಿಸ್ ಟೂರ್ನಿಯಿಂದಲೂ ಸೋಮ್‌ದೇವ್ ಹಿಂದೆ ಸರಿದಿದ್ದಾರೆ. ಸತತ ಗಾಯದ ಸಮಸ್ಯೆಗೆ ಸಿಲುಕಿರುವ ಸೋಮ್‌ದೇವ್ ಭಾರತದ ಪರ ಸಾಕಷ್ಟು ಟೂರ್ನಿಗಳಲ್ಲಿ ಮಿಂಚಿದ್ದರು. ಕೇವಲ 31ರ ಹರೆಯದಲ್ಲಿ ವೃತ್ತಿ ಜೀವನಕ್ಕೆ ಸೋಮ್‌ದೇವ್ ಗುಡ್ ಬೈ ಹೇಳುವ ಮನಸ್ಸು ಮಾಡಿದ್ದಾರೆ.

ಕಳೆದ 2 ವರ್ಷಗಳ ಹಿಂದೆ ಸೋಮ್‌'ದೇವ್, ಯುಎಸ್‌ಎ ಎಫ್10 ಫ್ಯೂಚರ್ಸ್ ಟೆನಿಸ್ ಟೂರ್ನಿಯಲ್ಲಿ ಜರ್ಮನಿಯ ಸೆಬಾಸ್ಟಿಯನ್ ಫ್ಯಾನ್ಸೆಲೋ ಎದುರು ಸೆಣಸಿದ್ದೆ ಅಂತಿಮವಾಗಿದೆ. ಈ ಪಂದ್ಯದಲ್ಲಿ ಸೋಮ್‌'ದೇವ್ 3-6, 2-6 ಸೆಟ್‌'ಗಳಿಂದ ಸೆಬಾಸ್ಟಿಯನ್ ಎದುರು ಸೋಲು ಕಂಡಿದ್ದರು. ಆ ನಂತರ ಸೋಮ್‌ದೇವ್ ಯಾವುದೇ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ

2008ರಲ್ಲಿ ಟೆನಿಸ್ ಅಂಗಣಕ್ಕೆ ಕಾಲಿರಿಸಿದ ಸೋಮ್‌ದೇವ್ ಅತಿ ಕಿರಿಯ ವಯಸ್ಸಿನಲ್ಲಿಯೇ ಡೇವಿಸ್ ಕಪ್ ತಂಡದ ನಾಯಕರಾಗಿದ್ದರು. ಸೋಮ್‌'ದೇವ್ ಅವರ ಪ್ರಭಾವಿ ಆಟದಿಂದಾಗಿ 2010ರ ಡೇವಿಸ್‌'ಕಪ್ ಟೂರ್ನಿಯಲ್ಲಿ ಭಾರತ ವಿಶ್ವ ಗುಂಪಿಗೆ ಅರ್ಹತೆ ಗಿಟ್ಟಿಸಿತ್ತು.

2009ರ ಚೆನ್ನೈ ಓಪನ್, 2011ರ ದಕ್ಷಿಣ ಆಫ್ರಿಕಾ ಓಪನ್ ಟೆನಿಸ್ ಟೂರ್ನಿಯಲ್ಲಿ ಎಟಿಪಿ ಪ್ರಶಸ್ತಿ ಸನಿಹಕ್ಕೆ ಧಾವಿಸಿದ್ದ ಭಾರತದ ಸಿಂಗಲ್ಸ್ ಆಟಗಾರರಲ್ಲಿ ಸೋಮ್‌ದೇವ್ ಪ್ರಮುಖರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?