ಅನುರಾಗ್ ಠಾಕೂರ್'ರನ್ನು ಬಿಸಿಸಿಐನಿಂದ ವಜಾಗೊಳಿಸಿದ ಸುಪ್ರೀಂ ಕೋರ್ಟ್

By Suvarna Web DeskFirst Published Jan 1, 2017, 8:04 AM IST
Highlights

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್'ಅನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಲೋಧ ವರದಿ ಜಾರಿಗೊಳಿಸದ ಹಿನ್ನಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅನುರಾಗ್ ಠಾಕೂರ್ ಮಾತ್ರವಲ್ಲದೆ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸಿದೆ. ಲೋಧ ವರದಿಯನ್ನು ಡಿ.3ರೊಳಗೆ ಜಾರಿಗೊಳಿಸುವಂತೆ ಸುಪ್ರೀ ಕೋರ್ಟ್ ಆದೇಶಿಸಿತ್ತು. ಬಿಸಿಸಿಐ ಹಿರಿಯ ಉಪಾಧ್ಯಕ್ಷರಿಗೆ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಿದೆ.

ನ್ಯಾ.ಲೋಧಾ ಸಮಿತಿ ಶಿಫಾರಸು ಜಾರಿ ಮಾಡದ ಹಿನ್ನೆಲೆಯಲ್ಲಿ  ಬಿಸಿಸಿಐ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ  ಮಾಡಲಾಗಿದೆ. 2016, ಜುಲೈ 18ರಂದು ಸುಪ್ರಿಂ ನೀಡಿದ್ದ ಸೂಚನೆಗಳನ್ನು ಬಿಸಿಸಿಐ ಪಾಲಿಸಿರಲಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ತರಲು ಲೋಧ ಸಮಿತಿ ಶಿಫಾರಸು ನೀಡಿತ್ತು. ಲೋಧಾ ಸಮಿತಿಯ ಶಿಫಾರಸುಗಳನ್ನು ಬಿಸಿಸಿಐ ತಿರಸ್ಕರಿಸಿತ್ತು.

 

 

click me!