ಪೋಲೆಂಡ್ ಬಾಕ್ಸಿಂಗ್: ಗೌರವ್, ಮನೀಶ್’ಗೆ ಚಿನ್ನ

Published : May 06, 2019, 12:31 PM IST
ಪೋಲೆಂಡ್ ಬಾಕ್ಸಿಂಗ್: ಗೌರವ್, ಮನೀಶ್’ಗೆ ಚಿನ್ನ

ಸಾರಾಂಶ

 ಫೆಲಿಕ್ಸ್ ಸ್ಟಾಮ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್’ಗಳು ಮಿಂಚಿನ ಪ್ರದರ್ಶನ ತೋರಿದ್ದಾರೆ. ಪೋಲೆಂಡ್’ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ 6 ಪದಕಗಳನ್ನು ಬಾಚಿಕೊಂಡಿದೆ.

ನವದೆಹಲಿ[ಮೇ.06]: ಭಾರತದ ತಾರಾ ಬಾಕ್ಸರ್‌ಗಳಾದ ಗೌರವ್ ಸೋಲಂಕಿ ಹಾಗೂ ಮನೀಶ್ ಕೌಶಿಕ್, ಪೋಲೆಂಡ್‌ನ ವರ್ಸಾವ್’ನಲ್ಲಿ ಭಾನುವಾರ ಮುಕ್ತಾಯವಾದ ಫೆಲಿಕ್ಸ್ ಸ್ಟಾಮ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದರು. 

ಅರ್ಜುನಕ್ಕೆ ಬಾಕ್ಸರ್‌ಗಳಾದ ಅಮಿತ್‌, ಗೌರವ್‌ ಹೆಸರು

ಪುರುಷರ 52 ಕೆ.ಜಿ. ವಿಭಾಗದ ಫೈನಲ್ ಪಂದ್ಯದಲ್ಲಿ ಗೌರವ್, ಇಂಗ್ಲೆಂಡ್‌ನ ವಿಲಿಯಮ್ ಕವ್ಲೆ ವಿರುದ್ಧ 5-0 ಯಿಂದ ಗೆದ್ದರು. 60 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮನೀಶ್, ಮೊರಾಕ್ಕೊದ ಮೊಹಮದ್ ಹಮೌಟ್ ಎದುರು 4-1ರಲ್ಲಿ ಗೆಲುವು ಸಾಧಿಸಿದರು. 

ಬರಲಿದೆ ಐಪಿಎಲ್‌ ರೀತಿ ಭಾರತೀಯ ಬಾಕ್ಸಿಂಗ್‌ ಲೀಗ್‌!

ಹುಸಮುದ್ದೀನ್ ಬೆಳ್ಳಿ ಗೆದ್ದರೆ, ಸಂಜೀತ್, ಮನ್‌ದೀಪ್ ಜಾಂಗ್ರ ಹಾಗೂ ಅಂಕಿತ್ ಖಟಾನ ಕಂಚಿಗೆ ತೃಪ್ತಿಪಟ್ಟರು. ಭಾರತ ಟೂರ್ನಿಯಲ್ಲಿ 2 ಚಿನ್ನ, 1 ಬೆಳ್ಳಿ, 3 ಕಂಚಿನೊಂದಿಗೆ ಒಟ್ಟು 6 ಪದಕ ಜಯಿಸಿತು.

ಕ್ರೀಡೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?