ಆಸ್ಟ್ರೇಲಿಯಾ ತಂಡದಿಂದ ಮತ್ತೊಂದು ಬಾಲ್ ಟ್ಯಾಂಪರಿಂಗ್?

Published : Nov 11, 2018, 03:27 PM IST
ಆಸ್ಟ್ರೇಲಿಯಾ ತಂಡದಿಂದ ಮತ್ತೊಂದು ಬಾಲ್ ಟ್ಯಾಂಪರಿಂಗ್?

ಸಾರಾಂಶ

6 ತಿಂಗಳ ಹಿಂದೆ ಆಸ್ಟ್ರೇಲಿಯಾ ವಿಶ್ವದೆದರು ತಲೆ ತಗ್ಗಿಸಿತು. ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಡೆಸಿದ ಬಾಲ್ ಟ್ಯಾಂಪರಿಂಗ್‌ಗೆ ಆಸಿಸ್ ತಂಡ ಛಿದ್ರವಾಗಿತ್ತು. ಇಷ್ಟೇ ಅಲ್ಲ ಇಬ್ಬರೂ ಕ್ರಿಕೆಟಿಗರು ನಿಷೇಧಕ್ಕೆ ಒಳಗಾದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬಂದಿದೆ.

ಹೊಬಾರ್ಟ್(ನ.11): ಆಸ್ಟ್ರೇಲಿಯಾ ಕ್ರಿಕೆಟ್ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಡೆಸಿದ ಬಾಲ್ ಟ್ಯಾಂಪರಿಂಗ್‌ನಿಂದ ಇನ್ನು ಚೇತರಿಸಿಕೊಂಡಿಲ್ಲ. ಇದೀಗ ಆಸ್ಟ್ರೇಲಿಯಾ ಮತ್ತೊಂದು ಚೆಂಡು ವಿರೂಪಗೊಳಿಸಿದ ಪ್ರಕರಣ ನಡೆಸಿತಾ ಅನ್ನೋ ಅನುಮಾನಗಳು ಮೂಡಿದೆ.

ಸೌತ್ಆಫ್ರಿಕಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ನಡೆದ ಘಟನೆ ಬಾಲ್ ಟ್ಯಾಂಪರಿಂಗ್ ಆರೋಪಕ್ಕೆ ಪುಷ್ಠಿ ನೀಡುತ್ತಿದೆ. ಸಾಮಾಜಿ ಜಾಲತಾಣದಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ 43ನೇ ಓವರ್ ಬೌಲಿಂಗ್ ಮಾಡಲು ಬಂದ ಆಸಿಸ್ ಸ್ಪಿನ್ನರ್ ಆಡಮ್ ಜಂಪಾ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.

ಜೇಬಿನಲ್ಲಿ ಕೆಲ ಹೊತ್ತು ಕೈಯಿಟ್ಟುಕೊಂಡ ಜಂಪಾ ಬಳಿಕ ಕೈ ತೆಗೆದು ನೇರವಾಗಿ ಬಾಲ್ ಮೇಲೆ ಸವರಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಬಾಲ್ ಟ್ಯಾಂಪರಿಂಗ್ ಎಂದು ವೈರಲ್ ಆಗಿದೆ.

 

 

ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬರುತ್ತಿದ್ದಂತೆ ಇದರ ಸತ್ಯಾಸತ್ಯತೆ ಪರಿಶೀಲಿಸಲಾಗಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕಂಡೀಷನ್‌ನಲ್ಲಿ ಚಳಿ ಇರುವುದರಿಂದ ಮೈದಾನ ನೀರಿನ ತೇವಾಂಶದಿಂದ ಒದ್ದೆಯಾಗಿರುತ್ತೆ. ಈ ವೇಳೆ ಸ್ಪಿನ್ನರ್‌ಗಳು ಬಾಲ್ ಹಾಗೂ ಕೈಯಿಂದ ನೀರಿನ ತೇವಾಂಶ ತೆಗೆಯಲು ಈ ರೀತಿ ಮಾಡುತ್ತಾರೆ.  ಹೀಗಾಗಿ ಆಸ್ಟ್ರೇಲಿಯಾ ತಂಡ ಮತ್ತೊಂದು ಬಾಲ್ ಟ್ಯಾಂಪರಿಂಗ್ ನಡೆಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2027 ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ ತಂದೆ-ಮಗ..! ದಿಗ್ಗಜ ಕ್ರಿಕೆಟಿಗ, ಮತ್ತವರ ಮಗನ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
IND vs NZ 2nd Test: ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲ್ಲಲು ಭಾರತಕ್ಕೆ ಲಾಸ್ಟ್ ಚಾನ್ಸ್; ಕ್ರೈಸ್ಟ್‌ಚರ್ಚ್ ಟೆಸ್ಟ್ ಯಾವಾಗ ಆರಂಭ?