
ಜಾರ್ಖಂಡ್(ಅ.07): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಟಿ20 ಸೀರೀಸ್'ನ ಮೊದಲ ಪಂದ್ಯ ಇಂದು ಜಾರ್ಖಂಡ್'ನ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಈಗಾಗಲೇ ಒನ್ ಡೇ ಸೀರೀಸ್'ನಲ್ಲಿ ಆಸ್ಟ್ರೇಲಿಯಾವನ್ನು 4-1 ಅಂತರದಲ್ಲಿ ಸೋಲಿಸಿತ್ತು. ನ್ ಡೇ ಸೀರೀಸ್'ನಲ್ಲಿ ಟೀಂ ಇಂಡಿಯಾದ ವಿರುದ್ಧ ಹೀನಾಯ ಸೋಲನುಭವಿಸಿದ ಆಸ್ಟ್ರೇಲಿಯಾ ತಂಡಕ್ಕೆ ಸದ್ಯ ಟಿ 20 ಸೀರೀಸ್ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಮತ್ತೊಂದು ಶಾಕಿಂಗ್ ನ್ಯೂಸ್ ಬಂದೆರಗಿದೆ. ಹೌದು ಇಂದು ನಡೆಯಲಿರುವ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿಥ್ ಟೀಂ ಇಂಡಿಯಾ ವಿರುದ್ಧದ ಟಿ20 ಸೀರೀಸ್'ನಿಂದ ಹೊರಗುಳಿದಿದ್ದಾರೆ. ಅಷ್ಟಕ್ಕೂ ಆಸ್ಟ್ರೇಲಿಯಾ ನಾಯಕ ಸೀರೀಸ್'ನಿಂದ ಹೊರಗುಳಿದಿದ್ದು ಯಾಕೆ ಅಂತೀರಾ? ಇಲ್ಲಿದೆ ನೋಡಿ ವಿವರ
ವಾಸ್ತವವಾಗಿ ನಾಯಕ ಸ್ಟೀವ್ ಸ್ಮಿತ್ ಭುಜ ನೋವಿನಿಂದ ಬಳಲುತ್ತಿದ್ದು, ಇದೇ ನೋವು ಅವರನ್ನು ಇಡೀ ಟಿ 20 ಸೀರೀಸ್'ನಿಂದ ಹೊರಗುಳಿಯುವಂತೆ ಮಾಡಿದೆ. ಸ್ಮಿತ್ ಅನುಪಸ್ಥಿತಿಯಲ್ಲಿ ಉಪನಾಯಕ ಡೇವಿಡ್ ವಾರ್ನರ್ ತಂಡದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇನ್ನು ಸ್ಮಿಥ್ ಸ್ಥಾನದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಆಡಲಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಕಾನ್ಪುರದಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಸಂದರ್ಭದಲ್ಲಿ ನಾಯಕ ಸ್ಮಿಥ್ ಬಲಭುಜಕ್ಕೆ ಗಾಯವಾಗಿತ್ತು. ಹೀಗಾಗಿ ರಾಂಚಿಯಲ್ಲಿ ಪಂದ್ಯದ ಅಭ್ಯಾಸ ನಡೆಸಿದ ಬಳಿಕ ಭುಜದ ಎಮ್.ಆರ್.ಐ ತೆಗೆಸಿದ್ದರು. ಈ ಸ್ಕ್ಯಾನಿಂಗ್ ವರದಿ ಬಂದ ಬಳಿಕ ಅವರು ಸೀರೀಸ್'ನಿಂದ ಹಿಂದೆ ಸರಿದಿದ್ದಾರೆ.
ಈ ಕುರಿತಾಗಿ ಮಾತನಾಡಿದ ಆಸ್ಟ್ರೇಲಿಯಾ ತಂಡದ ವೈದ್ಯಾಧಿಕಾರಿ ರಿಚರ್ಡ್ ಸಾ 'ಟೀಂ ಇಂಡಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ 5 ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಮಿತ್ ಗಾಯಗೊಂಡಿದ್ದರು. ಪಂದ್ಯ ಮುಗಿದ ಬಳಿಕ ಅವರು ಭುಜದಲ್ಲಿ ನೋವಿದೆ ಎಂದು ತಿಳಿಸಿದ್ದರು. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್'ನಲ್ಲಿ ಸಹಜವಾದ ಚಲನೆಗಳನ್ನೂ ಮಾಡುತ್ತಿಲಿಲ್ಲ. ಹೀಗಾಗಿ ಭುಜದ ಎಮ್.ಆರ್.ಐ ಮಾಡಿದ್ದೆವು, ಗಂಭೀರ ಗಾಯವೇನೂ ಆಗಿಲ್ಲ. ಆದರೆ ಮುಂಜಾಗೃತಾ ಕ್ರಮವಾಗಿ ಕೆಲ ಸಮಯ ವಿಶ್ರಾಂತಿ ಪಡೆಯಲು ಸೂಚಿಸಿದ್ದೇವೆ. ಆಸ್ಟ್ರೇಲಿಯಾ ತಲುಪಿದ ಬಳಿಕವೇ ಅವರು ಮುಂದಿನ ಚಿಕಿತ್ಸೆ ಪಡೆಯಲಿದ್ದಾರೆ" ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.