ಟೀಂ ಇಂಡಿಯಾ ಮುಂದೆ ಮಿಷನ್ 1-1-1: ವಿಶ್ವ ಗೆದ್ದ ನಾಯಕನಾಗ್ತಾರಾ ಕೊಹ್ಲಿ?: ಮಿಷನ್ 1-1-1 ಸಿಕ್ರೇಟ್!

Published : Oct 07, 2017, 02:59 PM ISTUpdated : Apr 11, 2018, 01:12 PM IST
ಟೀಂ ಇಂಡಿಯಾ ಮುಂದೆ ಮಿಷನ್ 1-1-1: ವಿಶ್ವ ಗೆದ್ದ ನಾಯಕನಾಗ್ತಾರಾ ಕೊಹ್ಲಿ?: ಮಿಷನ್ 1-1-1 ಸಿಕ್ರೇಟ್!

ಸಾರಾಂಶ

ಇಂದಿನಿಂದ ಭಾರತ-ಆಸ್ಟ್ರೇಲಿಯಾ ಟಿ20 ಸಿರೀಸ್ ಸ್ಟಾರ್ಟ್​ ಆಗ್ತಿದೆ. ಟೀಂ ಇಂಡಿಯಾಗೆ ಮಿಷನ್ 1-1-1 ಮೇಲೆ ಕಣ್ಣು. ಅದರಲ್ಲಿ ಸಕ್ಸಸ್ ಆದರೆ ವಿರಾಟ್ ಕೊಹ್ಲಿ ವಿಶ್ವ ಗೆದ್ದ ನಾಯಕನಾಗಲಿದ್ದಾರೆ. ಹಾಗಾದ್ರೆ ಮಿಷನ್ 1-1-1 ಅಂದ್ರೆ ಏನು. ಅದಕ್ಕಾಗಿ ಕೊಹ್ಲಿ ಏನು ಮಾಡ್ಬೇಕು ಎನ್ನುವುದರ ವಿವರ ಇಲ್ಲಿದೆ

ವಿರಾಟ್ ಕೊಹ್ಲಿ ಮುಟ್ಟಿದೆಲ್ಲಾ ಚಿನ್ನವಾಗ್ತಿದೆ. ಅವ್ರು ಕ್ಯಾಪ್ಟನ್ಸಿ ವಹಿಸಿಕೊಂಡ್ಮೇಲೆ ಟೀಂ ಇಂಡಿಯಾ ಸಕ್ಸಸ್ ಮೇಲೆ ಸಕ್ಸಸ್ ಕಾಣ್ತಿದೆ. ಇಂದಿನಿಂದ ಭಾರತ-ಆಸ್ಟ್ರೇಲಿಯಾ ಟಿ20 ಸಿರೀಸ್ ಸ್ಟಾರ್ಟ್​ ಆಗ್ತಿದೆ. ಭಾರತೀಯರ ಮುಂದೆ ಮಿಷನ್​ 1-1-1- ಇದೆ. ಅದಕ್ಕಾಗಿ ಕೊಹ್ಲಿ ಬಾಯ್ಸ್​ ಮಾಡಬೇಕಿರೋದು ಏನ್ ಗೊತ್ತಾ...? ಜಸ್ಟ್​ 9 ಗೆಲುವು ಸಾಧಿಸೋದು. ಅಲ್ಲಿಗೆ ಟೀಂ ಇಂಡಿಯಾದ ಮಿಷನ್ 1-1-1 ಸಕ್ಸಸ್ ಆಗುತ್ತೆ.

ಟಿ20ಯಲ್ಲೂ ಆಗ್ತಾರಾ ನಂಬರ್ 1..?

ವಿಶ್ವ ಕ್ರಿಕೆಟ್ ಕಣ್ಣು ಈಗ ಟೀಂ ಇಂಡಿಯಾ ಮೇಲೆ ಬಿದ್ದಿದೆ. ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಎಲ್ಲ 3 ಮಾದರಿಯಲ್ಲೂ ನಂಬರ್ ವನ್ ಸ್ಥಾನದಲ್ಲಿ ರಾರಾಜಿಸುತ್ತಿತ್ತು. ಆದ್ರೆ ಈಗ ಕಾಂಗರೂಗಳು ಗುಹೆಯಲ್ಲಿ ಸೇರಿಕೊಂಡಿವೆ. ಈಗ ಏನಿದ್ದರು ಕೊಹ್ಲಿ ಬಾಯ್ಸ್ ಹವಾ. ಅದು ಯಾವ ಮಟ್ಟಕ್ಕೆ ಅಂದ್ರೆ ಸೋಲು ಅನ್ನೋದು ಭಾರತಕ್ಕೆ ಅಪರೂಪವಾಗ್ತಿದೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಭಾರತ ನಂಬರ್ ವನ್ ತಂಡ. ಈಗ ನಮ್ಮವರ ಕಣ್ಣು ಟ್ವೆಂಟಿ-20 ಕ್ರಿಕೆಟ್​ ಮೇಲೆ ಬಿದ್ದಿದೆ. ಏನಾದ್ರೂ ಮಾಡಿ ಮಿಷನ್ 1-1-1ರಲ್ಲಿ ಸಕ್ಸಸ್ ಆಗ್ಬೇಕು. ಅದಕ್ಕಾಗಿ ಶತಾಯಗತಾಯ ಹೋರಾಟ ನಡೆಸಲಿದ್ದಾರೆ.

ಆಸೀಸ್ ಸೋಲಿಸಿಯೇ ಭಾರತ 1-1-1

ಎರಡು ಮಾದರಿಯಲ್ಲಿ ಆಸ್ಟ್ರೇಲಿಯಾ ಸೋಲಿಸಿಯೇ ಟೀಂ ಇಂಡಿಯಾ ನಂಬರ್ ವನ್ ಆಗಿರೋದು. ಇದೇ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​-ಗವಾಸ್ಕರ್ ಸರಣಿ ಗೆದ್ದು ಟೆಸ್ಟ್​​ನಲ್ಲಿ ನಂಬರ್​ ವನ್ ಆಗಿತ್ತು. ಇನ್ನು ಕಳೆದ ವಾರವಷ್ಟೇ ಏಕದಿನ ಸರಣಿ ಗೆದ್ದು ಒಂಡೇ ಕ್ರಿಕೆಟ್​ನಲ್ಲಿ ನಂಬರ್ ವನ್ ಆಗಿತ್ತು. ಈಗ ಇದೇ ಆಸೀಸ್ ವಿರುದ್ಧ ಟಿ20 ಸರಣಿ ಗೆದ್ರೆ ಭಾರತ ನಂಬರ್ ವನ್ ಸಮೀಪ ಬರಲಿದೆ. ಕಾಂಗರೂ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನ ವೈಟ್​ವಾಶ್ ಮಾಡಿದ್ರೆ ಮಿಷನ್ 1-1-1 ಹತ್ತಿರ ಭಾರತೀಯರು ಬಂದು ನಿಲ್ಲಲಿದ್ದಾರೆ. ಱಂಕಿಂಗ್​ನಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ.

3 ತಿಂಗಳಲ್ಲಿ ಭಾರತ ಆಡಲಿದೆ 9 ಟಿ20 ಮ್ಯಾಚ್

ಸದ್ಯ ಟಿ20 ಱಂಕಿಂಗ್​ನಲ್ಲಿ 5ನೇ ಸ್ಥಾನದಲ್ಲಿರುವ ಟೀಂ ಇಂಡಿಯಾ, ಇನ್ನು ಮೂರು ತಿಂಗಳಲ್ಲಿ ಬರೋಬ್ಬರಿ 9 ಟಿ20 ಮ್ಯಾಚ್​ಗಳನ್ನಾಡಲಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ತಲಾ ಮೂರು ಪಂದ್ಯಗಳನ್ನಾಡಲಿದೆ. ಆಸೀಸ್-ಕಿವೀಸ್​​​​​ ಸರಣಿ ವೈಟ್​ವಾಶ್ ಮಾಡಿದ್ರೆ ಭಾರತ ನಂಬರ್ ವನ್ ಸ್ಥಾನಕ್ಕೇರಲಿದೆ. ಆಗ ಮೂರು ಮಾದರಿ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿರಲಿದೆ.

ಕ್ಯಾಪ್ಟನ್ಸಿಯಲ್ಲೂ ಕಿಂಗ್ ಆಗ್ತಾರಾ ಕೊಹ್ಲಿ..!

ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಎಲ್ಲ ಮೂರು ಮಾದರಿ ಕ್ರಿಕೆಟ್​ನಲ್ಲಿ ನಂಬರ್ ಸ್ಥಾನಕ್ಕೇರಿತ್ತು. ಈಗ ಆ ಅವಕಾಶ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕಿದೆ. ಒಂದೇ ಸಮಯದಲ್ಲಿ ಮೂರು ಮಾದರಿಯಲ್ಲೂ ಅಗ್ರಸ್ಥಾನದಲ್ಲಿರೋದು ದೊಡ್ಡ ಸಾಧನೆಯೇ ಸರಿ. ಈ ಸಾಧನೆ ಮಾಡಿದ್ರೆ ರನ್ ಗಳಿಕೆಯಲ್ಲಿ ಕಿಂಗ್ ಆಗಿರೋ ಕೊಹ್ಲಿ, ಕ್ಯಾಪ್ಟನ್ಸಿಯಲ್ಲೂ ಕಿಂಗ್ ಆಗಲಿದ್ದಾರೆ. ಈ ಸಮಯಕ್ಕಾಗಿ ವಿರಾಟ್ ಕಾಯುತ್ತಿದ್ದಾರೆ.  ಬೆಸ್ಟ್ ಆಫ್​ ಕೊಹ್ಲಿ ಬಾಯ್ಸ್.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಂದ್ಯಾವಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಪೂರಕವಾಗಿಲ್ಲ: ಸರ್ಕಾರದ ಸಮಿತಿ ಶಿಫಾರಸು
ಕೆಎಸ್‌ಸಿಎಗೆ ರಾಜ್ಯ ಸರ್ಕಾರ ಶಾಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ 'ರೆಡ್ ಸಿಗ್ನಲ್'