ಇಂಡೋನೇಷ್ಯಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಚಿರಾಗ್-ಸಾತ್ವಿಕ್ ಜೋಡಿ ಚಾಂಪಿಯನ್
ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ ಸಾಧನೆ
ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ 3 ಸ್ಥಾನ ಪ್ರಗತಿ ಸಾಧಿಸಿದ್ದಾರೆ
ನವದೆಹಲಿ(ಜೂ.21): ಇತ್ತೀಚೆಗಷ್ಟೇ ಇಂಡೋನೇಷ್ಯಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಜೋಡಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 3ನೇ ಸ್ಥಾನಕ್ಕೆ ಜಿಗಿದಿದೆ. ಈ ವರ್ಷ ಸ್ವಿಸ್ ಓಪನ್ ಹಾಗೂ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ ಗೆದ್ದಿರುವ ಸಾತ್ವಿಕ್-ಚಿರಾಗ್ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ 3 ಸ್ಥಾನ ಪ್ರಗತಿ ಸಾಧಿಸಿದ್ದಾರೆ.
ಇನ್ನು ಎಚ್.ಎಸ್.ಪ್ರಣಯ್ ಪುರುಷರ ಸಿಂಗಲ್ಸ್ನಲ್ಲಿ 9ನೇ ಸ್ಥಾನ ಕಾಯ್ದುಕೊಂಡಿದ್ದು, ಲಕ್ಷ್ಯ ಸೇನ್ 2 ಸ್ಥಾನ ಜಿಗಿದು 18ನೇ, ಕಿದಂಬಿ ಶ್ರೀಕಾಂತ್ 3 ಸ್ಥಾನ ಮೇಲೇರಿ 19ನೇ ಸ್ಥಾನ ಪಡೆದಿದ್ದಾರೆ. ಮಹಿಳಾ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು 12ನೇ ಸ್ಥಾನಕ್ಕೇರಿದ್ದು, ಸೈನಾ ನೆಹ್ವಾಲ್ 31ನೇ ಸ್ಥಾನದಲ್ಲಿದ್ದಾರೆ.
undefined
ಕ್ಯಾನ್ಸರ್ ಗೆದ್ದ ಟೆನಿಸ್ ದಿಗ್ಗಜೆ ನವ್ರಾಟಿಲೋವಾ
ನ್ಯೂಯಾರ್ಕ್: ಕೆಲ ತಿಂಗಳುಗಳಿಂದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದ ಟೆನಿಸ್ ದಿಗ್ಗಜೆ, ಅಮೆರಿಕದ ಮಾರ್ಟಿನಾ ನವ್ರಾಟಿಲೋವಾ ಮಾರಕ ರೋಗದಿಂದ ಸಂಪೂರ್ಣ ಚೇತರಿಕೆ ಕಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ತಮಗೆ ಗಂಟಲು ಮತ್ತು ಸ್ತನದ ಕ್ಯಾನ್ಸರ್ ಇರುವುದಾಗಿ 18 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತೆ, 66 ವರ್ಷದ ನವ್ರಾಟಿಲೋವಾ ಜನವರಿಯಲ್ಲಿ ಸಾಮಾಜಿಕ ತಾಣಗಳಲ್ಲಿ ತಿಳಿಸಿದ್ದರು. ಸದ್ಯ ಇದರಿಂದ ಸಂಪೂರ್ಣ ಚೇತರಿಸಿದ್ದೇನೆ ಎಂದಿದ್ದು, ವೈದ್ಯರು, ನರ್ಸ್ಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಭ್ರಷ್ಟಾಚಾರ: ಒಲಿಂಪಿಕ್ಸ್ ಕಚೇರಿಗೆ ಪೊಲೀಸ್ ದಾಳಿ!
ಪ್ಯಾರಿಸ್: ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ನ ಆಯೋಜನಾ ಸಮಿತಿಯ ಪ್ರಧಾನ ಕಚೇರಿ ಮೇಲೆ ಫ್ರಾನ್ಸ್ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆಯೋಜನಾ ಸಮಿತಿಯೇ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಪೊಲೀಸರ ಪರಿಶೀಲನೆಗೆ ಸಹಕರಿಸಿದ್ದಾಗಿ ತಿಳಿಸಿದೆ.
ಫಿಫಾ ವಿಶ್ವಕಪ್‌ನಲ್ಲಿ ವೈರಲ್ ಆಗಿದ್ದ ಮಾಡೆಲ್ ಮತ್ತೆ ಪ್ರತ್ಯಕ್ಷ; ಪಡ್ಡೆ ಹುಡುಗರ ಕಣ್ಣಿಗೆ ಹಬ್ಬ
ಈ ಮೊದಲು 2017ರಲ್ಲಿ ಒಲಿಂಪಿಕ್ಸ್ ಆಯೋಜನೆಗೆ ಪ್ಯಾರಿಸ್ ಆಯ್ಕೆಯಾದ ಬಳಿಕ ಮೊದಲ ಬಾರಿ ಪೊಲೀಸರು ಅಲ್ಲಿನ ಆಯೋಜನಾ ಸಮಿತಿ ಕಚೇರಿಗೆ ದಾಳಿ ನಡೆಸಿದ್ದರು. ಬಳಿಕ ಕಳೆದ ವರ್ಷ ಕೂಡಾ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿತ್ತು.
ಬೆಂಗ್ಳೂರಲ್ಲಿಂದು ರಾಷ್ಟ್ರೀಯ ವಾಟರ್ ಪೋಲೋ ಮತ್ತು ಡೈವಿಂಗ್ ಕೂಟ ಆರಂಭ
ಬೆಂಗಳೂರು: ಭಾರತೀಯ ಈಜು ಸಂಸ್ಥೆ(ಎಸ್ಎಫ್ಐ) ಮೊದಲ ಬಾರಿ ರಾಷ್ಟ್ರೀಯ ವಾಟರ್ ಪೋಲೋ ಹಾಗೂ ಡೈವಿಂಗ್ ಚಾಂಪಿಯನ್ಶಿಪ್ ಆಯೋಜಿಸುತ್ತಿದ್ದು, ಬೆಂಗಳೂರು ಆತಿಥ್ಯ ವಹಿಸಲಿದೆ. ವಾಟರ್ ಪೋಲೋ ಸ್ಪರ್ಧೆಗಳು ಬಸವನಗುಡಿ ಈಜು ಕೇಂದ್ರದಲ್ಲಿ ಬುಧವಾರ ಆರಂಭಗೊಳ್ಳಲಿದ್ದು, ಜೂ.25ರಂದು ಮುಕ್ತಾಯಗೊಳ್ಳಲಿದೆ.
ಡೈವಿಂಗ್ ಸ್ಪರ್ಧೆಗಳು ಜೂ.22ರಿಂದ 24ರ ವರೆಗೆ ಸಾಯ್ ಕೇಂದ್ರದಲ್ಲಿ ನಡೆಯಲಿದೆ. ಈ ಬಾರಿ ಕೂಟದಲ್ಲಿ ಪುರುಷರ ವಿಭಾಗದಲ್ಲಿ 12 ಹಾಗೂ ಮಹಿಳೆಯರ ವಿಭಾಗದಲ್ಲಿ 9 ತಂಡಗಳು ಪಾಲ್ಗೊಳ್ಳಲಿವೆ. ಡೈವಿಂಗ್‌ನಲ್ಲಿ 9 ರಾಜ್ಯಗಳ 54 ಸ್ಪರ್ಧಿಗಳು ಭಾಗಿಯಾಗಲಿದ್ದಾರೆ ಎಂದು ಕರ್ನಾಟಕ ಈಜು ಸಂಸ್ಥೆ(ಕೆಎಸ್ಎ) ತಿಳಿಸಿದೆ. ಈವರೆಗೆ 75 ವರ್ಷದಲ್ಲಿ ಎಸ್ಎಫ್ಐ ಈಜು, ವಾಟರ್ಪೋಲೋ ಹಾಗೂ ಡೈವಿಂಗ್ ಕೂಟಗಳನ್ನು ಒಟ್ಟಾಗಿ ನಡೆಸುತ್ತಿತ್ತು. ಇದೇ ಮೊದಲ ಬಾರಿ ವಾಟರ್ ಪೋಲೋ ಹಾಗೂ ಡೈವಿಂಗ್ಅನ್ನು ಪ್ರತ್ಯೇಕವಾಗಿ ಆಯೋಜಿಸುತ್ತಿದೆ.