ಆ್ಯಷಸ್ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ
ಆಸೀಸ್‌ಗೆ ರೋಚಕ ಗೆಲುವು ತಂದಿತ್ತ ನಾಯಕ ಪ್ಯಾಟ್ ಕಮಿನ್ಸ್
5 ಪಂದ್ಯಗಳ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾಗೆ 1-0 ಮುನ್ನಡೆ
ಬರ್ಮಿಂಗ್ಹ್ಯಾಂ(ಜೂ.21): ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಆ್ಯಷಸ್ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆಸ್ಪ್ರೇಲಿಯಾ 2 ವಿಕೆಟ್ ಜಯಭೇರಿ ಬಾರಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಉಸ್ಮಾನ್ ಖವಾಜ ಹಾಗೂ ನಾಯಕ ಕಮಿನ್ಸ್ ಹೋರಾಟ ಆಸೀಸ್‌ಗೆ ಅತಿರೋಚಕ ಜಯ ತಂದುಕೊಟ್ಟಿದೆ. ಇನ್ನು ಇಂಗ್ಲೆಂಡ್ ತಂಡದ ಅತಿಯಾದ ಆತ್ಮವಿಶ್ವಾಸಕ್ಕೆ ಬೆನ್ ಸ್ಟೋಕ್ಸ್ ಪಡೆ ಬೆಲೆ ತೆತ್ತಿದೆ.
ಗೆಲುವಿಗೆ 281 ರನ್ ಗುರಿ ಪಡೆದಿದ್ದ ಆಸೀಸ್ 4ನೇ ದಿನದಂತ್ಯಕ್ಕೆ 3 ವಿಕೆಟ್ಗೆ 107 ರನ್ ಗಳಿಸಿತ್ತು. ಕೊನೆ ದಿನ ಬೇಕಿದ್ದ 174 ರನ್ಗಳನ್ನು ಕೇವಲ 4.3 ಓವರ್ ಬಾಕಿ ಇರುವಂತೆ ಆಸೀಸ್ ಬೆನ್ನತ್ತಿತು. ಭಾರೀ ಮಳೆಯಿಂದಾಗಿ ಪಂದ್ಯ ಮಂಗಳವಾರ 3 ಗಂಟೆ ತಡವಾಗಿ ಆರಂಭವಾಯಿತು. 67 ಓವರಲ್ಲಿ ಆಸೀಸ್‌ಗೆ 174 ರನ್ ಬೇಕಿದ್ದರೆ, ಇಂಗ್ಲೆಂಡ್‌ಗೆ 7 ವಿಕೆಟ್ ಬೇಕಿತ್ತು. ಮೊದಲ ಇನ್ನಿಂಗ್್ಸನ ಶತಕ ವೀರ ಉಸ್ಮಾನ್ ಖವಾಜ ಬರೋಬ್ಬರಿ 197 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 65 ರನ್ ಸಿಡಿಸಿದರೂ, ನಿರ್ಣಾಯಕ ಹಂತದಲ್ಲಿ ಔಟಾಗಿ ಆಸೀಸ್ ಪಾಳಯದಲ್ಲಿ ಆತಂಕ ಮೂಡಿಸಿದರು.
undefined
ಇಂದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ; ಆಮೇಲೆ ನಡೆದದ್ದು ಇತಿಹಾಸ..! ಇಲ್ಲಿವೆ ಅಂಕಿ-ಅಂಶ
ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 28, ಅಲೆಕ್ಸ್ ಕೇರ್ರಿ 20 ರನ್ ಗಳಿಸಿ ಔಟಾದಾಗ ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ಆತ್ಮವಿಶ್ವಾಸ ಇಮ್ಮಡಿಸಿತ್ತು. ನಾಯಕ ಪ್ಯಾಟ್ ಕಮಿನ್ಸ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದಾಗ ಆಸ್ಟ್ರೇಲಿಯಾ ಗೆಲ್ಲಲು ಇನ್ನೂ 72 ರನ್‌ಗಳು ಅಗತ್ಯವಿತ್ತು. ಬಳಿಕ ಮುರಿಯದ 9ನೇ ವಿಕೆಟ್ಗೆ 54 ರನ್ ಸೇರಿಸಿದ ಕಮಿನ್ಸ್(44) ಹಾಗೂ ಲಯನ್(16) ತಂಡವನ್ನು ಗೆಲ್ಲಿಸಿದರು. ಅದರಲ್ಲೂ ನಾಯಕ ಪ್ಯಾಟ್ ಕಮಿನ್ಸ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ನಾಯಕ ಪ್ಯಾಟ್ ಕಮಿನ್ಸ್ 73 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 44 ರನ್ ಬಾರಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಅನುಭವಿ ಆಫ್‌ಸ್ಪಿನ್ನರ್ ನೇಥನ್ ಲಯನ್ 28 ಎಸೆತಗಳಲ್ಲಿ 2 ಬೌಂಡರಿ ಸಹಿತ 16 ರನ್ ಗಳಿಸಿ ನಾಯಕ ಕಮಿನ್ಸ್‌ಗೆ ಉತ್ತಮ ಸಾಥ್ ನೀಡಿದರು.
That winning feeling 😍 | pic.twitter.com/mqz4BX7BTi
— ICC (@ICC)ಮೊದಲ ಇನ್ನಿಂಗ್್ಸನಲ್ಲಿ ಇಂಗ್ಲೆಂಡ್ 393 ರನ್‌ಗೆ ಡಿಕ್ಲೇರ್ ಮಾಡಿಕೊಂಡಿದ್ದರೆ, ಆಸೀಸ್ 386ಕ್ಕೆ ಆಲೌಟಾಗಿ 7 ರನ್ ಹಿನ್ನಡೆ ಅನುಭವಿಸಿತ್ತು. ಬಳಿಕ ಇಂಗ್ಲೆಂಡ್ 273ಕ್ಕೆ ಆಲೌಟಾಗಿತ್ತು.
Test cricket at its best 🤩
Australia seal a mouth-watering win in Birmingham in the first Test ✌️ | 📝: https://t.co/ZNnKIn9jeq pic.twitter.com/K0lKH79ml4
ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತಿತಾ ಇಂಗ್ಲೆಂಡ್?: ಹೌದು, ಆಕ್ರಮಣಕಾರಿ ಆಟದ ಮೂಲಕವೇ ಈಗಾಗಲೇ ಹಲವು ಟೆಸ್ಟ್ ಪಂದ್ಯಗಳನ್ನು ಜಯಿಸಿರುವ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಇದೀಗ, ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅತಿಯಾದ ಆತ್ಮವಿಶ್ವಾಸದಿಂದಲೇ ಪಂದ್ಯವನ್ನು ಸೋತಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 78 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 393 ರನ್ ಬಾರಿಸಿ ಮೊದಲ ದಿನವೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಸಂದರ್ಭದಲ್ಲಿ ಮಾಜಿ ನಾಯಕ ಜೋ ರೂಟ್ ಅಜೇಯ 118 ರನ್ ಬಾರಿಸಿದ್ದರು. ಈ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಒಂದು ವೇಳೆ ಇನ್ನಷ್ಟು ಓವರ್‌ವರೆಗೆ ಜೋ ರೂಟ್ ಆಡಿದ್ದರೇ, ಫಲಿತಾಂಶ ಬೇರೆಯದ್ದೇ ಆಗುವ ಸಾಧ್ಯತೆಯಿತ್ತು. ಇದೀಗ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸುವಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಯಶಸ್ವಿಯಾಗಿದೆ
ಸ್ಕೋರ್:
ಇಂಗ್ಲೆಂಡ್ 393/8 ಡಿ. ಹಾಗೂ 273
ಆಸ್ಪ್ರೇಲಿಯಾ 386 ಹಾಗೂ 282/8